Donkey milk business: ಹೈನುಗಾರಿಕೆಯಿಂದ ಹಣ ಸಂಪಾದಿಸಲು ಅನೇಕರು ಹಸು, ಎಮ್ಮೆ ಮತ್ತು ಮೇಕೆಗಳನ್ನು ಸಾಕುತ್ತಾರೆ. ಈ ಹಾಲು ಲೀಟರ್‌ಗೆ ಹೆಚ್ಚೆಂದರೆ 50 ರಿಂದ 80 ರೂ. ಇರಬಹುದು. ಆದರೆ ಮಾರುಕಟ್ಟೆಯಲ್ಲಿ ಕತ್ತೆ ಹಾಲು ಒಂದೇ ಒಂದು ಲೀಟರ್‌ಗೆ 7 ಸಾವಿರ ರೂ.ಗೆ ಮಾರಾಟವಾಗುತ್ತಿರುವುದು ತಿಳಿದರೆ ನೀವು ಅಚ್ಚರಿ ಪಡುತ್ತೀರಿ.


COMMERCIAL BREAK
SCROLL TO CONTINUE READING

ಹೌದು, ಇದು ನಿಜ.. ವಾಸ್ತವವಾಗಿ ಕತ್ತೆ ಹಾಲನ್ನು ವಿವಿಧ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಕತ್ತೆ ಹಾಲಿನಲ್ಲಿ ಅನೇಕ ಪೋಷಕಾಂಶಗಳಿವೆ. ಅದೇ ರೀತಿ ಗುಜರಾತಿನ ವ್ಯಕ್ತಿಯೊಬ್ಬರು ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಕತ್ತೆಗಳನ್ನು ಸಾಕಿ ಹಾಲು ಮಾರಾಟ ಮಾಡಿ ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ. 


ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಬಿಗ್‌ಬಾಸ್‌ ವೇದಿಕೆಯಲ್ಲೇ ʼಭಗವದ್ಗೀತೆʼ ಉಡುಗೊರೆ ನೀಡಿದ ʼಸ್ಪರ್ಧಿʼ!


ವರದಿಗಳ ಪ್ರಕಾರ, ಧೀರೇನ್ ಗುಜರಾತ್‌ನ ಪಟಾನ್ನಲ್ಲಿ ಕೆಲಸ ಹುಡುಕುತ್ತಿದ್ದರು. ಆದರೆ ಅವರು ಬಯಸಿದ ಕೆಲಸ ಸಿಗಲಿಲ್ಲ. ನಂತರ ಧೀರೇನ್ ತಮ್ಮ ಜೀವನೋಪಾಯಕ್ಕಾಗಿ ಏನಾದರೂ ಬ್ಯುಸಿನೆಸ್‌ ಮಾಡಬೇಕೆಂದು ನಿರ್ಧರಿಸಿದರು. ಈ ಬಗ್ಗೆ ಯೋಚಿಸಿದ ಅವರಿಗೆ ಕತ್ತೆ ಹಾಲು ಮಾರಾಟ ಮಾಡುವ ಬ್ಯುಸಿನೆಸ್‌ನಲ್ಲಿ ತುಂಬಾ ಲಾಭವಿದೆ ಅಂತಾ ಗೊತ್ತಾಯಿತು. ಕೂಡಲೇ ಅವರು ಈ ಬ್ಯುಸಿನೆಸ್‌ ಶುರು ಮಾಡಿಯೇ ಬಿಟ್ಟರು.   


ತಮ್ಮ ಗ್ರಾಮದಲ್ಲೇ ಧೀರೇನ್ ಕತ್ತೆ ಫಾರಂಅನ್ನು ಆರಂಭಿಸಿದರು. ಆರಂಭದಲ್ಲಿ ಇವರ ಬಳಿ 20 ಕತ್ತೆಗಳಿದ್ದವು. ಈಗ ಅವುಗಳ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ದಕ್ಷಿಣ ಭಾರತದಲ್ಲಿ ಕತ್ತೆ ಹಾಲಿಗೆ ಹೆಚ್ಚಿನ ಬೇಡಿಕೆಯಿದೆ. ಧೀರೇನ್ ಕರ್ನಾಟಕ ಮತ್ತು ಕೇರಳಕ್ಕೆ ಅತಿಹೆಚ್ಚು ಕತ್ತೆ ಹಾಲನ್ನು ಪೂರೈಸುತ್ತಾರೆ. ಅವರ ಕ್ಲೈಂಟ್ ಪಟ್ಟಿಯಲ್ಲಿ ಅನೇಕ ಕಾಸ್ಮೆಟಿಕ್ ಕಂಪನಿಗಳು ಸೇರಿವೆ. ಆ ಕಂಪನಿಗಳು ತಮ್ಮ ಉತ್ಪನ್ನಗಳಲ್ಲಿ ಕತ್ತೆ ಹಾಲನ್ನು ಬಳಸುತ್ತಿವೆ. ಬರೀ ಕತ್ತೆ ಹಾಲನ್ನೇ ಮಾರಾಟ ಮಾಡಿ ಧೀರೇನ್ ಇಂದು ತಿಂಗಳಿಗೆ 2-3 ಲಕ್ಷ ರೂ. ಹಣ ಸಂಪಾದಿಸುತ್ತಿದ್ದಾರೆ. 


ಕತ್ತೆ ಹಾಲಿನಿಂದ ಕೈತುಂಬಾ ಸಂಪಾದನೆ


ಕತ್ತೆ ಹಾಲು ಹಸು ಅಥವಾ ಎಮ್ಮೆ ಹಾಲಿಗಿಂತ ಹಲವು ಪಟ್ಟು ದುಬಾರಿ. ಒಂದು ಲೀಟರ್ ಕತ್ತೆ ಹಾಲಿನ ಬೆಲೆ 5 ಸಾವಿರದಿಂದ 7 ಸಾವಿರ ರೂ.ವರೆಗೆ ಇದೆ. ಕತ್ತೆ ಹಾಲು ತ್ವಚೆಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮತ್ತು ರಕ್ತ ಪರಿಚಲನೆಯಂತಹ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಕತ್ತೆ ಹಾಲು ಪ್ರಯೋಜನಕಾರಿ. ಕತ್ತೆಹಾಲು ಹಲವಾರು ಪೋಷಕಾಂಶಗಳನ್ನು ಹೊಂದಿದೆ ಎಂದು ಸಂಶೋಧನೆಯೊಂದು ತಿಳಿಸಿದೆ.


ಇದನ್ನೂ ಓದಿ: ಸಾಲಗಳು ಅಗ್ಗವಾಗುತ್ತವೆಯೇ, ಆರ್‌ಬಿಐ ಸಭೆಯಲ್ಲಿ ಬಡ್ಡಿ ದರದ ನಿರ್ಧಾರ ಏನಾಗಬಹುದು?


ಕತ್ತೆ ಹಾಲು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ವಯಸ್ಸಾದ ವಿರೋಧಿ ಗುಣಗಳಲ್ಲಿ ಇದು ಉಪಯುಕ್ತವಾಗಿದೆ. ಕತ್ತೆ ಹಾಲು ಇತರ ಹಾಲುಗಳಿಗಿಂತಲೂ ಸುರಕ್ಷಿತವಾಗಿದೆ. ಹೀಗಾಗಿ ಯಾವುದೇ ಟೆನ್ಶನ್‌ ಇಲ್ಲದೆ ಈ ಹಾಲು ಸೇವಿಸಬಹುದು. ಈ ಹಾಲು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.