PM Kisan Yojana list: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಪ್ರತಿಯೊಬ್ಬ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯು ದೇಶದ ರೈತರಿಗೆ ಗೌರವದಿಂದ ಬದುಕಲು ಸುವರ್ಣಾವಕಾಶವನ್ನು ಒದಗಿಸಿದೆ. ಈ ಯೋಜನೆಯಡಿ ವಾರ್ಷಿಕ 6,000 ರೂ.ಗಳ ಆರ್ಥಿಕ ಸಹಾಯವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಒಂದು ಲೋಟ ಹಾಲಿಗೆ ಇದನ್ನು ಬೆರೆಸಿ ಕುಡಿದರೆ ಕಣ್ಣ ದೃಷ್ಟಿ ಎಷ್ಟೇ ಮಂಜಾಗಿದ್ದರೂ 7 ದಿನದಲ್ಲಿ ಶಾರ್ಪ್‌ ಆಗುತ್ತೆ! ಕನ್ನಡಕದಿಂದ ಶಾಶ್ವತ ಮುಕ್ತಿ ಸಿಗುವುದು


ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಈ ಮೊತ್ತವನ್ನು ರೂ. 2,000 ಅನ್ನು ಕಂತುಗಳಲ್ಲಿ ನೀಡಲಾಗುತ್ತದೆ, ಅದನ್ನು ನೇರವಾಗಿ ಡಿಬಿಟಿ ಅಡಿಯಲ್ಲಿ ಫಲಾನುಭವಿಯ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು.


ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇಲ್ಲಿಯವರೆಗೆ ₹ 3.46 ಲಕ್ಷ ಕೋಟಿಯನ್ನು ರೈತರ ಬ್ಯಾಂಕ್ ಖಾತೆಗಳಿಗೆ (18 ನೇ ಕಂತಿನವರೆಗೆ) ನೇರವಾಗಿ ವರ್ಗಾಯಿಸಲಾಗಿದೆ. ರೈತರು ಈಗ 19ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಎರಡು ಷರತ್ತುಗಳನ್ನು ಪೂರೈಸುವ ರೈತರಿಗೆ ಮಾತ್ರ ಯೋಜನೆಯ ಪ್ರಯೋಜನಗಳು ಲಭ್ಯವಿರುತ್ತವೆ.


ಗಮನಿಸಬೇಕಾದ ಅಂಶವೆಂದರೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು, ರೈತರು ತಮ್ಮ ಕೆಲವು ವಿವರಗಳನ್ನು ಒದಗಿಸಬೇಕು ಮತ್ತು ಇ-ಕೆವೈಸಿ ಮಾಡಬೇಕು. ಈ ಯೋಜನೆಯಡಿ ಪ್ರಯೋಜನಗಳಿಗಾಗಿ ನೀವು ಸಹ ಅರ್ಜಿ ಸಲ್ಲಿಸಿದ್ದರೆ, ನೋಂದಣಿ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಇ-ಕೆವೈಸಿ ವಿವರಗಳನ್ನು ನವೀಕರಿಸಬೇಕು. ಫಲಾನುಭವಿ ರೈತರು ಈ ಎರಡು ವಿಷಯಗಳನ್ನು ಮರೆತರೆ ಅವರ ಹೆಸರನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ. ಮತ್ತು 19ನೇ ಕಂತು ರೂ. 2,000 ಲಭ್ಯವಿರುವುದಿಲ್ಲ.


ಇ-ಕೆವೈಸಿ ಪಿಎಂ ಕಿಸಾನ್ ಯೋಜನೆ ಪಡೆಯಲು ಕಡ್ಡಾಯ ಪ್ರಕ್ರಿಯೆಯಾಗಿದೆ. ಇದನ್ನು ಸಿಎಸ್‌ಸಿ ಕೇಂದ್ರದಿಂದ ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ ಅಥವಾ ಬಯೋಮೆಟ್ರಿಕ್‌ಗಳ ಮೂಲಕ ಪೂರ್ಣಗೊಳಿಸಬಹುದು. ನೀವು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ನಿಮಗೆ  ಕಂತುಗಳು ಬಾರದಿರಬಹುದು. ಇದಕ್ಕಾಗಿ ನೀವು ಪಿಎಂ ಕಿಸಾನ್ ಪೋರ್ಟಲ್‌ಗೆ ಹೋಗಿ ನಿಮ್ಮ ಸ್ಟೇಟಸ್ ಅನ್ನು ಪರಿಶೀಲಿಸಿ.


ಇ-ಕೆವೈಸಿ ಸ್ಟೇಟಸ್ ಅನ್ನು ಪರಿಶೀಲಿಸುವುದು ಹೇಗೆ?
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿ ರೈತರು ತಮ್ಮ KYC ಸ್ಟೇಟಸ್ ಅನ್ನು ಸುಲಭವಾಗಿ ಪರಿಶೀಲಿಸಬಹುದು. ಇದಕ್ಕಾಗಿ pmkisan.gov.in ವೆಬ್‌ಸೈಟ್‌ಗೆ ಹೋಗಬೇಕು. ಅಲ್ಲಿ ಫಾರ್ಮರ್ಸ್‌ ಕಾರ್ನರ್ ಕಾಣಿಸುತ್ತದೆ. ಇದರಲ್ಲಿ ಮೊದಲ ಆಯ್ಕೆ ಇ-ಕೆವೈಸಿ ಆಗಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಇದರ ನಂತರ OTP ಆಧಾರಿತ e-KYC ಇದ್ದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ ಸ್ಟೇಟಸ್ ತಿಳಿಯುತ್ತದೆ. KYC ಅಪೂರ್ಣವಾಗಿದ್ದರೆ ನವೀಕರಿಸಬಹುದು.


ಇದನ್ನೂ ಓದಿ: ಮದ್ಯ ಪ್ರಿಯರಿಗೆಂದೇ ಹೊಸ ವರ್ಷಕ್ಕೆ ಗುಡ್‌ ನ್ಯೂಸ್‌ ಪ್ರಕಟಿಸಿದ ರಾಜ್ಯ ಸರ್ಕಾರ..!


ಇ-ಕೆವೈಸಿ ಅಪ್ಡೇಟ್‌ ಮಾಡುವುದು ಹೇಗೆ?
ಮೊದಲು pmkisan.gov.in ಗೆ ಹೋಗಿ. ಮುಖಪುಟದಲ್ಲಿ 'ಫಾರ್ಮರ್ಸ್ ಕಾರ್ನರ್' ವಿಭಾಗದಲ್ಲಿ 'eKYC' ಆಯ್ಕೆಯನ್ನು ಆಯ್ಕೆಮಾಡಿ. eKYC ಪುಟದಲ್ಲಿ ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ. 'ಸರ್ಚ್' ಬಟನ್ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. OTP ಅನ್ನು ನಮೂದಿಸಿ ʼಸಬ್ಮಿಟ್' ಬಟನ್ ಕ್ಲಿಕ್ ಮಾಡಿ. eKYC ಅಪ್ಡೇಟ್‌ ಆಗಿದ್ದರೆ, ನಂತರ eKYC ಯಶಸ್ವಿಯಾಗಿದೆ ಎಂದು ಸಂದೇಶ ಕಾಣಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ