ಬೆಂಗಳೂರು : ಕರ್ನಾಟಕ ರಾಜ್ಯವು ಪ್ರತಿ ತಿಂಗಳು 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವವರಿಗೆ ಉಚಿತ ವಿದ್ಯುತ್ ಅನ್ನು ಒದಗಿಸುವ ಗೃಹ ಜ್ಯೋತಿ ಯೋಜನೆಯನ್ನು ಈಗಾಗಲೇ ಪರಿಚಯಿಸಿದೆ. ಈ ವಿನೂತನ ಸರ್ಕಾರಿ ಯೋಜನೆಗೆ ಅರ್ಜಿ ಸಲ್ಲಿಕೆ ಕಾರ್ಯ ಕೂಡಾ ಈಗಾಗಲೇ ಆರಂಭವಾಗಿದೆ. ಇನ್ನು ಜುಲೈ  25 ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಜುಲೈ  25 ರೊಳಗೆ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸದೇ ಹೋದರೆ ಉಚಿತ ವಿದ್ಯುತ್ ಯೋಜನೆಯ ಲಾಭ ಪಡೆಯುವುದು ಸಾಧ್ಯವಾಗುವುದಿಲ್ಲ. 


COMMERCIAL BREAK
SCROLL TO CONTINUE READING

ರಾಜ್ಯದ ಅರ್ಧಕ್ಕರ್ಧ ಜನ ಇನ್ನೂ ಅರ್ಜಿ ಸಲ್ಲಿಸಿಲ್ಲ : 
ಇಲ್ಲಿವರೆಗೂ ಸುಮಾರು 1.10 ಕೋಟಿ ಜನರೂ ಈ ಯೋಜನೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆರಂಭದಲ್ಲಿ ಯೋಜನೆಗೆ ಅರ್ಜಿ ಸಲ್ಲಿಸುವಲ್ಲಿ ಜನ ಉತ್ಸಾಹ ತೋರಿದ್ದರು. ಆದರೆ ನಂತರ ಅರ್ಜಿ ಸಲ್ಲಿಕೆ ಪ್ರಮಾಣ ಕುಸಿಯುತ್ತಾ ಬಂದಿದೆ. ಅರ್ಜಿ ಸಲ್ಲಿಕೆ ವೇಳೆ ಕಂಡು ಬರುತ್ತಿರುವ ತಾಂತ್ರಿಕ ತೊಂದರೆಗಳೇ ಇದಕ್ಕೆ ಕಾರಣ ಎನ್ನಲಾಗಿದೆ. ರಾಜ್ಯದ ಅರ್ಧಕ್ಕರ್ಧ ಜನರೂ ಇನ್ನೂ ಗೃಹ ಜ್ಯೋತಿಗಾಗಿ ಅರ್ಜಿ ಸಲ್ಲಿಸಿಲ್ಲ. 


ಇದನ್ನೂ ಓದಿ : ಚಿನ್ನ ಪ್ರಿಯರಿಗೆ ಸಿಹಿಸುದ್ದಿ… ಹಿಂದೆಂದೂ ಸಂಭವಿದಷ್ಟು ಕುಸಿತ ಕಂಡ ಬಂಗಾರದ ಬೆಲೆ: 10ಗ್ರಾ ದರ ಎಷ್ಟಾಗಿದೆ ಗೊತ್ತಾ?


ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ? :
1. ಕರ್ನಾಟಕ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು, ಸೇವಾ ಸಿಂಧು ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್ https://sevasindhugs.karnataka.gov/ ಗೆ ಭೇಟಿ ನೀಡಿ.
2. ವೆಬ್‌ಸೈಟ್ ಪರಿಶೀಲಿಸಿ ಮತ್ತು“Gruha Jyothi Scheme Registration Link” ಅನ್ನು ಕ್ಲಿಕ್ ಮಾಡಿ.
3. ಇಲ್ಲಿ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ ಅರ್ಜಿ ನಮೂನೆ ಕಾಣಿಸುತ್ತದೆ. ನಿಮ್ಮ ಸಂಪರ್ಕ ಮಾಹಿತಿ, ಅಂಚೆ ವಿಳಾಸ ಮತ್ತು  ಅಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ.
4. ಈಗ, ಗುರುತಿನ ಚೀಟಿ, ವಿದ್ಯುತ್ ಬಿಲ್, ನಿವಾಸದ ಪುರಾವೆ ಅಥವಾ ಅಪ್ಲಿಕೇಶನ್‌ನಲ್ಲಿ ನಿರ್ದಿಷ್ಟಪಡಿಸಿದ ಯಾವುದಾದರೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
5. ಅರ್ಜಿ ನಮೂನೆಯಲ್ಲಿನ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ,  ಸಬ್ಮಿಟ್ ಬಟನ್ ಒತ್ತಿ. 
6. ಭವಿಷ್ಯದ ಬಳಕೆಗಾಗಿ ಅಪ್ಲಿಕೇಶನ್ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ.  


ಗೃಹ ಜ್ಯೋತಿ ಯೋಜನೆಗೆ ಅಗತ್ಯವಿರುವ ಪ್ರಮುಖ ದಾಖಲೆ  : 
ಆಧಾರ್ ಕಾರ್ಡ್
ಕರ್ನಾಟಕ ರಾಜ್ಯದಲ್ಲಿ ಶಾಶ್ವತ ನಿವಾಸದ ಪುರಾವೆ
ವಿದ್ಯುತ್ ಬಿಲ್
ಮೊಬೈಲ್ ನಂಬರ್ 
ಇಮೇಲ್ ಐಡಿ
ಪಾಸ್ಪೋರ್ಟ್ ಗಾತ್ರದ ಫೋಟೋ


ಇದನ್ನೂ ಓದಿ ಸೆ. ಒಂದರಿಂದ ಜಾರಿಯಾಗಲಿದೆ ಹೊಸ ಬ್ಯಾಂಕಿಂಗ್ ನಿಯಮ !ಈ ಮೂರು ಬ್ಯಾಂಕ್ ಗ್ರಾಹಕರಿಗೆ ಹೆಚ್ಚು ಲಾಭ ! ನಿಮ್ಮ ಖಾತೆ ಯಾವ ಬ್ಯಾಂಕ್ ನಲ್ಲಿದೆ ?


ಎದುರಿಸುತ್ತಿರುವ ತಾಂತ್ರಿಕ ತೊಂದರೆಗಳು :  
ಮೊದಲೇ ಹೇಳಿದ ಹಾಗೆ ಅನೇಕರು ಅರ್ಜಿ ಸಲ್ಲಿಕೆ ವೇಳೆ ಕೆಲವು ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅವುಗಳೆಂದರೆ : 
1. ಆರ್.ಆರ್ ನಂಬರನಲ್ಲಿರುವ ಹೆಸರು, ಆಧಾರ್ ಹೆಸರು ಮ್ಯಾಚ್ ಆಗ್ತಿಲ್ಲ
2. ಶೇಕಡಾ 25ರಷ್ಟು ಕರೆಂಟ್ ಮೀಟರ್ ಪೂರ್ವಿಕರ ಹೆಸರಲ್ಲಿದೆ
3. ಇದರಲ್ಲಿ ಸಾವನ್ನಪ್ಪಿದವರ ಹೆಸರಿನ ಸಂಖ್ಯೆಯೇ ಹೆಚ್ಚು
4. ಹೀಗಾಗಿ ಮೀಟರ್ ಹೆಸರು ಬದಲಾಯಿಸಲು ಭಾರೀ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆ 
5. ಆಧಾರ್ ಗೆ ನೀಡಿರುವ ಮೊಬೈಲ್ ಸಂಖ್ಯೆ ಅಲಭ್ಯ
6. ಬಹುತೇಕ ಜನರು ಮಾಲೀಕರು ಅಂತನೇ ಅರ್ಜಿ ಸಲ್ಲಿಕೆಗೆ ಕಾಯುತ್ತಿದ್ದಾರೆ 
7.ಕೂಡಲೇ ಹೆಸರು ಬದಲಾವಣೆ ಮಾಡುವುದು ಎಸ್ಕಾಂಗಳಿಗೂ ಅಸಾಧ್ಯ
8. ಕೆಲವರು 200 ಯೂನಿಟ್ ಗಿಂತ ಹೆಚ್ಚು ಬಳಕೆ ಮಾಡುವವರು ಇದ್ದಾರೆ


ಈ ಸಮಸ್ಯೆಗೆ ಪರಿಹಾರವೇನು..?
1. ಸದ್ಯಕ್ಕೆ ಮನೆ‌ ಮಾಲೀಕರು ಎಂದೇ ಅರ್ಜಿ‌ ಸಲ್ಲಿಸುವ ಅವಶ್ಯಕತೆಯಿಲ್ಲ
2. ಮನೆ ಮಾಲೀಕರು ಅರ್ಜಿ ಸಲ್ಲಿಕೆ ವೇಳೆ ಇತರ ಆಯ್ಕೆ ಬಳಸಿಕೊಳ್ಳಬಹುದು
3. ತಾತ್ಕಲಿಕವಾಗಿ ಬಾಡಿಗೆದಾರರು ಹಾಗೂ‌ ಸಂಬಂಧಿಗಳು ಅಂತ ಅರ್ಜಿ ಸಲ್ಲಿಸಬಹುದು
4. ಮುಂದಿನ ದಿನದಲ್ಲಿ ಆರ್.ಆರ್. ನಂಬರ್ ಬದಲಾವಣೆ ನಂತರ‌ ಮಾಲೀಕ ಅಂತ ಬದಲಾಯಿಸಬಹುದು
5. ಬಾಡಿಗೆದಾರರ ಆಧಾರ್ ಲಿಂಕ್ ಆಗದಿದ್ದಲ್ಲಿ  ಮನೆಯ ಇತರ ಸದಸ್ಯರ ಹೆಸರಿನ ಮೂಲಕವೂ ಅರ್ಜಿ ಸಲ್ಲಿಸಬಹುದು


 ಸಲ್ಲಿಸಿದ ಅಪ್ಲಿಕೇಶನ್‌ನ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ ? :  
ಗೃಹ ಜ್ಯೋತಿ ಯೋಜನೆಗಾಗಿ ತಮ್ಮ ಅರ್ಜಿಯನ್ನು ಮಂಜೂರು ಮಾಡಲಾಗಿದೆಯೇ ಅಥವಾ ತಿರಸ್ಕರಿಸಲಾಗಿದೆಯೇ ಎಂದು ನ ಎನ್ನುವುದನ್ನು ತಿಳಿದುಕೊಳ್ಳಲು ಈ ಹಂತವನ್ನು ಅನುಸರಿಸಿ : 


1, ನೀವು ಮೊದಲು ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. 
2. Beneficiary tab ಅನ್ನು ಆಯ್ಕೆ ಮಾಡಿದ ನಂತರ ಸ್ಥಿತಿಯನ್ನು ಪರಿಶೀಲಿಸಿ. ಅದು ನಿಮ್ಮನ್ನು ಹೊಸ ಪುಟಕ್ಕೆ  ರಿ ಡೈರೆಕ್ಟ್ ಮಾಡುತ್ತದೆ. 
3. ಈಗ ನಿಮ್ಮ ನೋಂದಾಯಿತ ಅಪ್ಲಿಕೇಶನ್ ಸಂಖ್ಯೆಯನ್ನು ನಮೂದಿಸಿ, 
4. ಇಲ್ಲಿ Check Status ಆಯ್ಕೆಮಾಡಿ.
5. ನಿಮ್ಮ ಅಪ್ಲಿಕೇಶನ್‌ನ ಸ್ಥಿತಿಯನ್ನು ಕೆಳಗಿನ ಪರದೆಯಲ್ಲಿ ತೋರಿಸಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.