ಈ ಬ್ಯಾಂಕ್ ನಲ್ಲಿ ನಿಮ್ಮ ಅಕೌಂಟ್ ಇದ್ದರೆ ಸಿಗಲಿದೆ ಈ ಲಾಭ
Axis Bank Monthly Service latest news: ನಿಮ್ಮ ಖಾತೆ ಆಕ್ಸಿಸ್ ಬ್ಯಾಂಕಿನಲ್ಲಿದ್ದರೆ, ನಿಮಗೊಂದು ಸಮಾಧಾನಕರ ಸುದ್ದಿ ಇಲ್ಲಿದೆ. ಆಕ್ಸಿಸ್ ಬ್ಯಾಂಕ್ ತನ್ನ ಸೇವಾ ಶುಲ್ಕವನ್ನು ಕಡಿತಗೊಳಿಸುವ ಬಗ್ಗೆ ಘೋಷಿಸಿದೆ. ಜುಲೈ 1 ರಿಂದಲೇ ಇದನ್ನು ಜಾರಿಗೆ ತರಲಾಗಿದೆ.
ನವದೆಹಲಿ : Axis Bank Monthly Service latest news: ನಿಮ್ಮ ಖಾತೆ ಆಕ್ಸಿಸ್ ಬ್ಯಾಂಕಿನಲ್ಲಿದ್ದರೆ, ನಿಮಗೊಂದು ಸಮಾಧಾನಕರ ಸುದ್ದಿ ಇಲ್ಲಿದೆ. ಆಕ್ಸಿಸ್ ಬ್ಯಾಂಕ್ ತನ್ನ ಸೇವಾ ಶುಲ್ಕವನ್ನು ಕಡಿತಗೊಳಿಸುವ ಬಗ್ಗೆ ಘೋಷಿಸಿದೆ. ಜುಲೈ 1 ರಿಂದಲೇ ಇದನ್ನು ಜಾರಿಗೆ ತರಲಾಗಿದೆ. ಆಕ್ಸಿಸ್ ಬ್ಯಾಂಕಿನ ಕೋಟ್ಯಂತರ ಗ್ರಾಹಕರು ಇದರ ಲಾಭವನ್ನು ಪಡೆಯಲಿದ್ದಾರೆ. ಆಕ್ಸಿಸ್ ಬ್ಯಾಂಕಿನ ಆನ್‌ಲೈನ್ ವೆಬ್‌ಸೈಟ್ https://application.axisbank.co.in ನಲ್ಲಿ ಈ ಬಗ್ಗೆ ವಿಸ್ತಾರವಾಗಿ ತಿಳಿದುಕೊಳ್ಳಬಹುದು. .
ಎಸ್‌ಎಂಎಸ್ ಅಲರ್ಟ್ (SMS alert) , ನಗದು ವಹಿವಾಟು ಶುಲ್ಕಗಳು, ಡ್ಯುಪ್ಲಿಕೆಟ್ ಪಾಸ್‌ಬುಕ್‌ಗಳು, ಎಟಿಎಂ ವಹಿವಾಟು ಶುಲ್ಕಗಳು, ಚೆಕ್ ಬುಕ್ ವಿತರಣಾ ಶುಲ್ಕಗಳು ಮತ್ತು ಡ್ಯುಪ್ಲಿಕೆಟ್ ಸ್ಟೇಟ್ಮೆಂಟ್ ಸೇವೆಗಳಿಗೆ ವಿಧಿಸುವ ಶುಲ್ಕವನ್ನು ಕಡಿತಗೊಳಿಸಲು ನಿರ್ಧರಿಸಿದೆ. ನಮ್ಮ ಸೇವೆಗಳನ್ನು ಸರಳ ಮತ್ತು ಉತ್ತಮಗೊಳಿಸಲು ನಾವು ನಿರಂತರವಾಗಿ ಪ್ರಯತ್ನಿಸುವುದಾಗಿ ಆಕ್ಸಿಸ್ ಬ್ಯಾಂಕ್ (Axis Bank) ಹೇಳಿದೆ.
ಇದನ್ನೂ ಓದಿ : LIC New Jeevan Shanti Policy: ಎಲ್ ಐಸಿಯ ಈ ಪಾಲಿಸಿಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ಜೀವನ ಪೂರ್ತಿ ಸಿಗಲಿದೆ ಪಿಂಚಣಿ
ಯಾವ ಸೌಲಭ್ಯಗಳಿಗೆ ಎಷ್ಟು ಶುಲ್ಕ :
ಉಳಿತಾಯ ಖಾತೆಯಲ್ಲಿ ಸಾಕಷ್ಟು ಹಣ ಅಥವಾ ಕನಿಷ್ಠ ಬ್ಯಾಲನ್ಸ್ ಇಲ್ಲದಿದ್ದರೆ, ಮೊದಲು ಹತ್ತು ರೂಪಾಯಿಗಳನ್ನು ವಿಧಿಸಲಾಗುತ್ತದೆ. ಇದನ್ನು ಈಗ ಐದು ರೂಪಾಯಿಗೆ ಇಳಿಸಲಾಗಿದೆ. ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿನ ಬ್ಯಾಂಕ್ (Bank) 150 ರಿಂದ 600 ರೂ.ಗಳನ್ನು ದಂಡವಾಗಿ ತೆಗೆದುಕೊಳ್ಳುತ್ತಿತ್ತು. ಅದನ್ನು ಈಗ ಕೇವಲ 75 ರಿಂದ 500 ರೂ.ಗೆ ಇಳಿಸಲಾಗಿದೆ. ಮೆಸೇಜ್ ಚಾರ್ಜ್ (Message charge) ಅನ್ನು ಕೂಡ ಕಡಿಮೆ ಮಾಡಲಾಗಿದೆ.
ಮೆಷಿನ್ ಮೂಲಕ ಠೇವಣಿ ಇಡುವ ಸೇವೆಯ ಮೇಲಿನ ಶುಲ್ಕವನ್ನು ಸಹ ಪರಿಷ್ಕರಿಸಲಾಗಿದೆ. ಈ ಮೊದಲು, ಪ್ರತಿ ವಹಿವಾಟಿಗೆ ಐವತ್ತು ರೂಪಾಯಿಗಳನ್ನು ಪಾವತಿಸಬೇಕಾಗಿತ್ತು. ಆದರೆ ಈಗ ಸಂಜೆ 5 ರಿಂದ 09:30 ರವರೆಗೆ, ಮೆಷಿನ್ ಮೂಲಕ ಠೇವಣಿ ಇಡುವುದಾದರೆ ಮತ್ತು ಆ ಮೊತ್ತವು 5000 ರೂಪಾಯಿಗಳಿಗಿಂತ ಕಡಿಮೆಯಿದ್ದರೆ, ಯಾವುದೇ ಶುಲ್ಕ (Service charge) ವಿಧಿಸಲಾಗುವುದಿಲ್ಲ. ಮೊತ್ತವು ಐದು ಸಾವಿರಕ್ಕಿಂತ ಹೆಚ್ಚಿದ್ದರೆ, ಪ್ರತಿ ವಹಿವಾಟಿಗೆ 50 ರೂ. ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ : Income Tax Day 2021: ತೆರಿಗೆ ಪಾವತಿದಾರರಿಗೆ ಅಧ್ಬುತ ಕೊಡುಗೆ ಪ್ರಕಟಿಸಿದ SBI
ಚೆಕ್ ಲೀಫ್ (Cheque leaf) ಶುಲ್ಕವನ್ನು 2.5 ರೂ. ನಿಗದಿ ಮಾಡಲಾಗಿದೆ. ಈ ಮೊದಲು, ಪ್ರತಿ ಲೀಫ್ ಗೆ 5 ರೂ.ಗಳನ್ನು ವಿಧಿಸಲಾಗುತ್ತಿತ್ತು.
ಈ ಹಿಂದೆ ವಿಳಾಸ, ಫೋಟೋ, ಸಹಿ ಮತ್ತು ಬ್ಯಾಲೆನ್ಸ್ ಸರ್ಟಿಫಿಕೇಟ್ ನೀಡಲು 100 ರೂ. ಈ ಮೊತ್ತವನ್ನು ಪಾವತಿಸಬೇಕಗಿತ್ತು. ಅದನ್ನು ಈಗ ಐವತ್ತು ರೂಪಾಯಿಗೆ ಇಳಿಸಲಾಗಿದೆ. ಇನ್ನು ಡ್ಯುಪ್ಲಿಕೆಟ್ ಪಾಸ್‌ಬುಕ್ (Duplicate passbook) ಪಡೆಯಬೇಕಾದರೆ ಈಗ ಕೇವಲ 75 ರೂ. ಮಾತ್ರ ಪಾವತಿಸಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.