Income Tax Day 2021: ತೆರಿಗೆ ಪಾವತಿದಾರರಿಗೆ ಅಧ್ಬುತ ಕೊಡುಗೆ ಪ್ರಕಟಿಸಿದ SBI

Income Tax Day 2021 - ಭಾರತೀಯ ಸ್ಟೇಟ್ ಬ್ಯಾಂಕ್ ನ YONO ಆಪ್ ನಲ್ಲಿರುವ Tax2win ಸಹಾಯದಿಂದ ನೀವೂ ಕೂಡ ಉಚಿತವಾಗಿ ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಬಹುದು. ಒಂದು ವೇಳೆ ನಿಮಗೆ ಚಾರ್ಟರ್ಡ್ ಅಕೌಂಟೆಂಟ್ ಸೇವೆ ಬೇಕಿದ್ದರೆ, ಇದಕ್ಕಾಗಿ ನೀವು ಕೇವಲ ರೂ.199 ಶುಲ್ಕ ಮಾತ್ರ ಪಾವತಿಸಬೇಕು.  

Written by - Nitin Tabib | Last Updated : Jul 24, 2021, 02:05 PM IST
  • ಆದಾಯ ತೆರಿಗೆ ದಿನಾಚರಣೆ 2021ರ ಅಂಗವಾಗಿ ತೆರಿಗೆ ಪಾವತಿದಾರರಿಗೆ SBI ಕೊಡುಗೆ.
  • ಕೇವಲ ರೂ.199 ಕ್ಕೆ CA ಸೇವೆಯನ್ನು ಕೂಡ ಬದೆಯಬಹುದು.
  • ಪ್ರತಿವರ್ಷ ಜುಲೈ 24 ರಂದು ಆದಾಯ ತೆರಿಗೆ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.
Income Tax Day 2021: ತೆರಿಗೆ ಪಾವತಿದಾರರಿಗೆ ಅಧ್ಬುತ ಕೊಡುಗೆ ಪ್ರಕಟಿಸಿದ SBI title=
Income Tax Day 2021 (Courtesy-SBI)

ನವದೆಹಲಿ: Income Tax Day 2021 - ಆದಾಯ ತೆರಿಗೆ ದಿನಾಚರಣೆ 2021 ರ ಶುಭ ಸಂದರ್ಭದಲ್ಲಿ SBI ತನ್ನ ಗ್ರಾಹಕರಿಗೆ ಅಪಾರ ಕೊಡುಗೆಗಳನ್ನು ಹೊತ್ತು ತಂದಿದೆ. ಹೌದು, ಎಸ್‌ಬಿಐ (State Bank Of India) ತನ್ನ ಗ್ರಾಹಕರಿಗೆ ತೆರಿಗೆ ರಿಟರ್ನ್ ಫೈಲ್ (Income Tax Return File) ಅನ್ನು ಉಚಿತವಾಗಿ ಭರ್ತಿ ಮಾಡಲು ಅವಕಾಶ ನೀಡುತ್ತಿದೆ.  ಟ್ವೀಟ್ ಮಾಡುವ ಮೂಲಕ SBI ಈ ಮಾಹಿತಿಯನ್ನು ನೀಡಿದೆ. ಈ ವಿಶೇಷ ಸಂದರ್ಭದಲ್ಲಿ, ನೀವು ಅನೇಕ ಸೇವೆಗಳನ್ನು ಉಚಿತವಾಗಿ ಪಡೆಯಬಹುದಾಗಿದ್ದು, ಉಳಿಕ ಕೆಲ ಸೇವೆಗಳಿಗೆ ಅತಿ ಕಡಿಮೆ ಶುಲ್ಕ ನಿಗದಿಪಡಿಸಲಾಗಿದೆ. 

ಈ ಕುರಿತು ಬ್ಯಾಂಕ್ ನೀಡಿದ ಮಾಹಿತಿ ಏನು?
ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಿರುವ ಭಾರತೀಯ ಸ್ಟೇಟ್ ಬ್ಯಾನ್, 'ತೆರಿಗೆ ಪಾವತಿದಾರರು YONOAppನ Tax2win ಸೌಲಭ್ಯವನ್ನು ಬಳಸಿ ಉಚಿತವಾಗಿ ತಮ್ಮ ಆದಾಯ ತೆರಿಗೆ ರಿಟರ್ನ್ ಪಾವತಿಸಬಹುದು ಎಂದಿದೆ. ಅಷ್ಟೇ ಅಲ್ಲ ಒಂದು ವೇಳೆ ನಿಮಗೆ ಚಾರ್ಟರ್ಡ್ ಅಕೌಂಟೆಂಟ್ ಸೇವೆ ಬೇಕಾಗಿದ್ದರೆ, ಈ ಸೇವೆಯನ್ನು ನೀವು ಕೇವಲ ರೂ.199 ಶುಲ್ಕ ಪಾವತಿಸುವ ಮೂಲಕ ಪಡೆಯಬಹುದು' ಎಂದು ಹೇಳಿದೆ. ಸಾಮಾನ್ಯವಾಗಿ ಬ್ಯಾಂಕ್ ಸಿಎ ಶುಲ್ಕದ ರೂಪದಲ್ಲೂ ರೂ.549 ಪಡೆಯುತ್ತದೆ. ಆದೆ, ಇಂದು ವಿಶೇಷ ದಿನವಾಗಿರುವ ಕಾರಣ ಬ್ಯಾಂಕು ಈ ಶುಲ್ಕವನ್ನು ರೂ. 199 ನಿಗದಿಪಡಿಸಿ ಗ್ರಾಹಕರಿಗೆ ಡಿಸ್ಕೌಂಟ್ ನೀಡಿದೆ. 

ಆದಾಯ ತೆರಿಗೆ ದಿನಾಚರಣೆಯ ಅಂಗವಾಗಿ ವಿಶೇಷ ಕೊಡುಗೆ
ಪ್ರತಿ ವರ್ಷ ಜುಲೈ 24 ರಂದು ಆದಾಯ ತೆರಿಗೆ ದಿನವನ್ನಾಗಿ ಆಚರಿಸಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ. ಈ ವಿಶೇಷ ಸಂದರ್ಭದಲ್ಲಿ, ಎಸ್‌ಬಿಐ ತನ್ನ ಗ್ರಾಹಕರಿಗೆ ಅನೇಕ ಕೊಡುಗೆಗಳನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ, ಗ್ರಾಹಕ ತೆರಿಗೆದಾರರು ಯೋನೊ ಅಪ್ಲಿಕೇಶನ್‌ನಲ್ಲಿ ಟ್ಯಾಕ್ಸ್ 2 ವಿನ್ (Tax2win) ಸಹಾಯದಿಂದ ತಮ್ಮ ರಿಟರ್ನ್ ಅನ್ನು ಉಚಿತವಾಗಿ ಸಲ್ಲಿಸಬಹುದು ಎಂದು ಬ್ಯಾಂಕ್ ಹೇಳಿದೆ. ಮಾರುಕಟ್ಟೆಯಲ್ಲಿ ಯಾವುದೇ ತೆರಿಗೆ ಸಲಹೆಗಾರರ ​​ಸಹಾಯ ಪಡೆಯಲು ಕನಿಷ್ಠ 1000-1500 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ, ಬ್ಯಾಂಕ್‌ನ ಈ ಕೊಡುಗೆ  ಗ್ರಾಹಕರಿಗೆ ಲಾಭವನ್ನು ನೀಡುತ್ತಿದೆ.

ಇ-ಫೈಲಿಂಗ್ ಪ್ಲಾಟ್ಫಾರ್ಮ್
Tax2win ತೆರಿಗೆ ಪಾವತಿದಾರರಿಗೆ ಒಂದು ಇ-ಫೈಲಿಂಗ್ ವೇದಿಕೆಯಾಗಿದೆ. ಇದರಲ್ಲಿ ಆದಾಯ ತೆರಿಗೆ ರಿಟರ್ನ್ ಪಾವತಿಸುವುದು ಅತ್ಯಂತ ಸುಲಭವಾಗಿದೆ. ಜೊತೆಗೆ ಈ ಸೇವೆ ನಿಮಗೆ ಉಚಿತವಾಗಿ ಲಭಿಸುತ್ತದೆ. ಇದಕ್ಕಾಗಿ ಭಾರತೀಯ ಸ್ಟೇಟ್ ಬ್ಯಾಂಕ್ Tax2win ಜೊತೆಗೆ ಒಪಾಂದ ಮಾಡಿಕೊಂಡಿದೆ ಮತ್ತು ತನ್ನ YONO ಆಪ್ ನಲ್ಲಿಯೂ ಕೂಡ ಬ್ಯಾಂಕ್ ಈ ಸೌಲಭ್ಯ ಒದಗಿಸಿದೆ.

ಇದನ್ನೂ ಓದಿ-SBI ಗ್ರಾಹಕರಿಗೆ ಸಿಹಿ ಸುದ್ದಿ : FD ಬಡ್ಡಿ ಸರ್ಟಿಫಿಕೇಟ್ ಅನ್ನ ಆನ್‌ಲೈನ್‌ನಲ್ಲಿ ಪಡೆಯಬಹುದು : ಹೇಗೆ ಇಲ್ಲಿದೆ ನೋಡಿ

ಇಲ್ಲಿದೆ ಪ್ರಕ್ರಿಯೆ
1. ಒಂದು ವೇಳೆ ನೀವೂ ಸಹ SBI YONO ಬಳಸುತ್ತಿದ್ದರೆ, ಮೊದಲು ಮೊಬೈಲ್ ಪಿನ್‌ನೊಂದಿಗೆ ಲಾಗಿನ್ ಆಗಿ.
2. ಈಗ Shop & Order ಆಯ್ಕೆಯನ್ನು ಕ್ಲಿಕ್ ಮಾಡಿ.
3. ಈಗ ನಿಮ್ಮ ಮುಂದೆ ಹೊಸ ಪುಟ ತೆರೆಯುತ್ತದೆ. ಇಲ್ಲಿ Top Categories ಆಯ್ಕೆಯಲ್ಲಿ View All ಕ್ಲಿಕ್ ಮಾಡಿ.
4. ಇಲ್ಲಿ ಪುಟದ ಕೆಳಭಾಗದಲ್ಲಿರುವ Tax & Investment ಕ್ಲಿಕ್ ಮಾಡಿ.
5. ಈಗ ನೀವು ಇಲ್ಲಿ Tax2win ಆಯ್ಕೆಯನ್ನು ಕ್ಲಿಕ್ ಮಾಡಿ.
6. ಇಲ್ಲಿ 'ಫೈಲ್ ಐಟಿಆರ್ ನೌ' ಆಯ್ಕೆ ಬರುತ್ತದೆ. ಇಲ್ಲಿ ನಿಮಗೆ  File it yourself ಹಾಗೂ Get a personal eCA ಆಯ್ಕೆಗಳು ಸಿಗಲಿವೆ.

ಇದನ್ನೂ ಓದಿ-Debit or Credit Card ಇಲ್ಲದೆಯೇ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಇಲ್ಲಿದೆ ಸುಲಭ ವಿಧಾನ

ಪರ್ಸನಲ್ CA ಶುಲ್ಕ
ಇಲ್ಲಿ ನಿಮಗೆ Personal e-CA ಗಾಗಿ ಆರಂಭಿಕ ಪ್ಯಾಕೇಜ್ ರೂ.199 ಗಳದ್ದಾಗಿದ್ದು, ಇದು ರಿಯಾಯ್ತಿಯನ್ನು ಒಳಗೊಂಡಿದೆ. ಹಾಗೆ ನೋಡಿದರೆ ಈ ಸೇವೆಯ ಮೂಲ ಶುಲ್ಕ ರೂ. 549 ಆಗಿದೆ. ಇದಲ್ಲದೆ, ಸಿಎ ಸೇವಾ ಶುಲ್ಕವೂ ವಿಭಿನ್ನ ರೀತಿಯ ಆದಾಯದ ಆಧಾರದ ಮೇಲೆ ಭಿನ್ನವಾಗಿರುತ್ತದೆ.

ಇದನ್ನೂ ಓದಿ-SBI: ತನ್ನ 44 ಕೋಟಿ ಗ್ರಾಹಕರಿಗೆ ವಿಡಿಯೋ ಸಂದೇಶ ನೀಡಿರುವ ಎಸ್‌ಬಿಐ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News