ನೀವು ಪಿಎಫ್ ಖಾತೆಯ UAN ಮರೆತಿದ್ದರೆ, ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ಮಾಹಿತಿ ಪಡೆಯಿರಿ
ಯಾವುದೇ ಖಾಸಗಿ, ಸರ್ಕಾರಿ ಅಥವಾ ಅರೆ ಸರ್ಕಾರಿ ಕಂಪನಿಯಲ್ಲಿನ ನೌಕರರ ವೇತನದಿಂದ ಪಿಎಫ್ ಅನ್ನು ಕಡಿತಗೊಳಿಸಲಾಗುತ್ತದೆ.
ನವದೆಹಲಿ: ಯಾವುದೇ ಖಾಸಗಿ, ಸರ್ಕಾರಿ ಅಥವಾ ಅರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರ ವೇತನದಿಂದ ಪಿಎಫ್ ಕಡಿತಗೊಳಿಸಲಾಗುವುದು. ಇದಕ್ಕಾಗಿ ಎಪಿಎಫ್ (Employees' Provident Fund Organisation) ಖಾತೆದಾರರಿಗೆ ಪ್ರತ್ಯೇಕ UAN ನಂಬರ್ ಒದಗಿಸುತ್ತದೆ. ಇದರ ಮೂಲಕ ನೀವು ನಿಮ್ಮ ಪಿಎಫ್ ಖಾತೆಯ ಬಗ್ಗೆ ಪೂರ್ಣ ಮಾಹಿತಿ ಪಡೆಯಬಹುದಾಗಿದೆ. ಹಲವು ಬಾರಿ ಪಿಎಫ್ ಖಾತೆ ಚಾಲ್ತಿಯಲ್ಲಿರುತ್ತದೆ. ಆದರೆ ಖಾತೆದಾರರು ಅವರ UAN ನಂಬರ್ ಅನ್ನು ಮರೆತುಬಿಡುತ್ತಾರೆ. ಈ ರೀತಿ ನೀವು ಕೂಡ ತೊಂದರೆಗೆ ಒಳಗಾಗಿದ್ದರೆ ಚಿಂತೆ ಬಿಡಿ. UAN ನಂಬರ್ ಇಲ್ಲದೆಯೂ ನಿಮ್ಮ ಖಾತೆಗೆ ಸಂಬಂಧಿಸಿದಂತೆ ಸುಲಭವಾಗಿ ಮಾಹಿತಿ ಪಡೆಯಬಹುದು.
EPFO ಮಿಸ್ಡ್ ಕಾಲ್ ಸೇವೆ:
ನಿಮ್ಮ ಮೊಬೈಲ್ ನಂಬರ್ EPFO ಖಾತೆಯಲ್ಲಿ ಪಿಎಫ್ ಖಾತೆಯೊಂದಿಗೆ ಲಿಂಕ್ ಆಗಿದ್ದರೆ ಕೇವಲ ಒಂದು ಮಿಸ್ಡ್ ಕಾಲ್ ನೀಡುವ ಮೂಲಕ ನೀವು ನಿಮ್ಮ ಖಾತೆಯ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಇದಕ್ಕಾಗಿ ನೀವು 011-22901406 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬೇಕಾಗುತ್ತದೆ. ಮಿಸ್ಡ್ ಕಾಲ್ ನೀಡುತ್ತಿದ್ದಂತೆ ನಿಮ್ಮ ನಂಬರಿಗೆ ಸಂದೇಶದ ಮೂಲಕ ನಿಮ್ಮ ಪಿಎಫ್ ಸಂಬಂಧಿತ ಮಾಹಿತಿ ಲಭ್ಯವಾಗಲಿದೆ. ಇದರಲ್ಲಿ UAN ನಂಬರ್, ನಿಮ್ಮ ಖಾತೆಯಲ್ಲಿ ಎಷ್ಟು ಹಣ ಜಮಾ ಮಾಡಲಾಗಿದೆ ಎಂಬಿತ್ಯಾದಿ ಮಾಹಿತಿ ಲಭ್ಯವಾಗಲಿದೆ.
ಇದನ್ನೂ ಓದಿ - WhatsApp helpline service: PF ಖಾತೆಗೆ ಸಂಬಂಧಿಸಿದ ಈ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿ
EPFO ಎಸ್ಎಂಎಸ್ ಸೇವೆ:
ಇದಲ್ಲದೆ ಎಸ್ಎಂಎಸ್ ಮೂಲಕವೂ ಸಹ ನೀವು ಪಿಎಫ್ (PF)ಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದು. ಇದಕ್ಕಾಗಿ ನೀವು ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಯಿಂದ 77382-99899 ಸಂಖ್ಯೆಗೆ "EPFOHO UAN" ಎಂದು ಟೈಪ್ ಮಾಡಿ ಎಸ್ಎಂಎಸ್ ಕಳುಹಿಸಬೇಕಾಗುತ್ತದೆ. ಒಂದೊಮ್ಮೆ ನಿಮ್ಮ ನಂಬರ್ ರಿಜಿಸ್ಟರ್ ಆಗಿದ್ದರೆ ಕೂಡಲೇ ನಿಮಗೆ ಸಂದೇಶ ಲಭ್ಯವಾಗುತ್ತದೆ. ಇದರಲ್ಲಿ ನಿಮ್ಮ ಪಿಎಫ್ ಖಾತೆಗೆ ಸಂಬಂಧಿಸಿದಂತೆ ಎಲ್ಲಾ ವಿವರ ಸಿಗಲಿದೆ.
EPFO ವೆಬ್ಸೈಟ್ ಮೂಲಕ ಮಾಹಿತಿ:
ಪಿಎಫ್ ಖಾತೆದಾರರು https://passbook.epfindia.gov.in/MemberPassBook/Login ನಲ್ಲಿ ಲಾಗಿನ್ ಆಗುವ ಮೂಲಕ ಕೂಡ ನಿಮ್ಮ ಖಾತೆಯ ವಿವರ ಪಡೆಯಬಹುದಾಗಿದೆ. ಇದಕ್ಕಾಗಿ ಮೊದಲು UAN ನಂಬರ್ ಮತ್ತು ಪಾಸ್ವರ್ಡ್ ನಮೂದಿಸಬೇಕು. ನಂತರ ಪಾಸ್ಬುಕ್ ನಲ್ಲಿ ನಿಮ್ಮ ಖಾತೆಯ ವಿವರವನ್ನು ಕಾಣಬಹುದು.
ಇದನ್ನೂ ಓದಿ - ಪಿಎಫ್ ಖಾತೆದಾರರೇ EPFOದ ಹೊಸ ಮಾರ್ಗಸೂಚಿಗಳನ್ನು ತಪ್ಪದೇ ತಿಳಿಯಿರಿ
Umang App ಮೂಲಕವೂ ಮಾಹಿತಿ ಲಭ್ಯ:
ಪಿಎಫ್ ಖಾತೆಯ ಬ್ಯಾಲೆನ್ಸ್ ತಿಳಿಯಲು ನೀವು ಪ್ಲೇ ಸ್ಟೋರ್ ಅಥವಾ App Storeನಲ್ಲಿ Umang App ಡೌನ್ಲೋಡ್ ಮಾಡಿ ಈ ಆಪ್ ಮೂಲಕ ನೀವು ಸರ್ಕಾರದ ಹಲವು ಸೇವೆಗಳನ್ನು ಪಡೆಯಬಹುದು. ಇದರಲ್ಲಿ ಇಪಿಎಫ್ಒ ಸೇವೆಯೂ ಲಭ್ಯವಿದೆ. ನೀವು ಇದರಲ್ಲಿ 'Employee Centric Service' ಆಯ್ಕೆ ಮಾಡಿ UAN ನಂಬರ್ ನಮೂದಿಸಬೇಕು. ನಂತರ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ನಲ್ಲಿ ಒಟಿಪಿ ಬರಲಿದೆ ಇದರ ಮೂಲಕ ನೀವು View Passbookನಲ್ಲಿ ಬ್ಯಾಲೆನ್ಸ್ ಚೆಕ್ ಮಾಡಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.