ಬೆಂಗಳೂರು : ನಿಮಗೆ ಗೊತ್ತಿರಲಿ. ನಿಮ್ಮ ಸಾಲರಿಯಲ್ಲಿ ಪಿಎಫ್ (EPF) ದುಡ್ಡು ಕಟ್ ಆಗುತ್ತಿರಬಹುದು. ಬಹುಶಃ ಸಾಕಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ನಿಮ್ಮ ಪಿಎಫ್ ಅಕೌಂಟ್ (PF Account) ಇದ್ದರೆ, ನಿಮಗೆ ಒಂದು ಇನ್ಶುರೆನ್ಸ್ ಸೌಲಭ್ಯ ಕೂಡಾ ಸಿಗುತ್ತದೆ. ಪಿಎಫ್ ಜೊತೆ ಜೊತೆಗೆ ಆ ವಿಮೆ ಕ್ಲೈಮ್ ಮಾಡಲು ಕೂಡಾ ನಿಮಗೆ ಅರ್ಹತೆ ಇರುತ್ತದೆ.
ಪಿಎಫ್ ವಿಮೆಯ ಪ್ರಯೋಜನಗಳೇನು..? :
ಒಂದು ವೇಳೆ ಪಿಎಫ್ (PF) ಖಾತೆ ಇರುವ ವ್ಯಕ್ತಿಯು ಸಾವಿಗೀಡಾದರೆ, ಆ ವ್ಯಕ್ತಿಯ ಪರಿವಾರಕ್ಕೆ ಒಂದಿಷ್ಟು ದುಡ್ಡು ಸಿಗುತ್ತದೆ. ಮೊದಲು ಇದರ ಮೊತ್ತ 6 ಲಕ್ಷ ಇತ್ತು. ಅದನ್ನು ಈಗ 1 ಲಕ್ಷ ಹೆಚ್ಚಿಸಿ 7 ಲಕ್ಷ ಮಾಡಲಾಗಿದೆ. ಪಿಎಫ್ ಜೊತೆ ಸಿಗುವ ಈ ವಿಮೆಯ ಹೆಸರು ಎಂಪ್ಲಾಯಿ ಡೆಪಾಸಿಟ್ ಲಿಂಕ್ಡ್ ಇನ್ಶೂರೆನ್ಸ್ (Employee Deposit Linked Insurance). ಸೇವಾವಧಿಯಲ್ಲಿ ಖಾತೆದಾರ ಸಾವಿಗೀಡಾದರೆ ಈ ವಿಮೆಯ ಒಂದಂಶ ಪರಿಹಾರ ಆಶ್ರಿತ ಕುಟುಂಬಕ್ಕೆ ಸಿಗಲಿದೆ. ನೆನಪಿರಲಿ ಎಲ್ಲರಿಗೂ 7 ಲಕ್ಷ ರೂಪಾಯಿ ಸಿಗುವುದಿಲ್ಲ. ನೌಕರ ಹಿಂದಿನ ಒಂದು ವರ್ಷದಲ್ಲಿ ಪಡೆದ ಮಾಸಿಕ ಸಾಲರಿಯ (Salary) 30 ಪಟ್ಟು ಹೆಚ್ಚು ಮೊತ್ತ ವಿಮೆಯಲ್ಲಿ (Insurance) ಸಿಗುತ್ತದೆ. ಆದರೆ, ಇದು 7 ಲಕ್ಷ ರೂಪಾಯಿ ದಾಟುವುದಿಲ್ಲ. ನೌಕರ ಆಕ್ಸಿಡೆಂಟ್ ಅಥವಾ ಸಾಮಾನ್ಯ ರೀತಿಯ ಸಾವಿಗೀಡಾದಾಗ ಈ ವಿಮೆ ಸಿಗುತ್ತದೆ. ಆದರೆ, ಇದಕ್ಕಾಗಿ ಕೆಲವೊಂದು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ : Digilocker : ಇನ್ನು ನಿಮ್ಮ ವಿಮಾ ಪಾಲಿಸಿ ಸೇಫ್..! ಸಿಗಲಿದೆ ಡಿಜಿಲಾಕರ್
ಈ ವಿಮೆಗೆ ನೀವು ಪ್ರೀಮಿಯಂ ಕಟ್ಟಬೇಕಿಲ್ಲ.!:
ನೌಕರರನ ಸಾಲರಿಯ ಶೇ. 12 ರಷ್ಟು ಮೊತ್ತ ಪಿಎಫ್ ಖಾತೆಗೆ ಸಲ್ಲುತ್ತದೆ. ಜೊತೆಗೆ ಉದ್ಯೋಗದಾತ (Employer) ಕೂಡಾ ಅಷ್ಟೇ ಮೊತ್ತದ ಹಣವನ್ನು ಪಿಎಫ್ ಖಾತೆಗೆ ವರ್ಗಾಯಿಸಬೇಕಾಗುತ್ತದೆ. ಇದಲ್ಲದೆ ಉದ್ಯೋಗದಾತ ಶೇ. 0.50 ಮೊತ್ತವನ್ನು ವಿಮೆಯ ಪ್ರಿಮಿಯಂಗಾಗಿ (Insurance premium) ಪಾವತಿಸಬೇಕಾಗುತ್ತದೆ. ಈ ವಿಮೆಗಾಗಿ ನೌಕರ ಯಾವುದೇ ರೀತಿಯಲ್ಲಿ ದುಡ್ಡು ಪಾವತಿಸಬೇಕಾದ ಅಗತ್ಯ ಇಲ್ಲ. ಈ ವಿಮೆಯಲ್ಲಿಯೇ ನೌಕರರಿಗೆ ಪರಿಹಾರ ಸಿಗುತ್ತದೆ.
ಇದನ್ನೂ ಓದಿ : Fixed Deposit ಮೇಲೆ ಹೆಚ್ಚಿನ ಬಡ್ಡಿ ಪಾವತಿಸುವ ಬ್ಯಾಂಕುಗಳ ಬಗ್ಗೆ ಇಲ್ಲಿದೆ ಮಾಹಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.