How to order PVC Aadhaar card from mAadhaar App: ಆಧಾರ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ.ಆಧಾರ್ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ವಿಶಿಷ್ಟ ಗುರುತನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಭಾರತ ಸರ್ಕಾರದ ಪರವಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ನೀಡಲಾಗುವ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ.ಇದನ್ನು ಗುರುತು ಮತ್ತು ವಿಳಾಸದ ಪುರಾವೆಯಾಗಿ ಎಲ್ಲಿ ಬೇಕಾದರೂ ಬಳಸಬಹುದು.ಆಧಾರ್ ಕಾರ್ಡ್ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿದ್ದು, ವ್ಯಕ್ತಿಯ ಭಾವಚಿತ್ರದೊಂದಿಗೆ ಬಯೋಮೆಟ್ರಿಕ್ ಮಾಹಿತಿಯನ್ನು  ಹೊಂದಿರುತ್ತದೆ.


COMMERCIAL BREAK
SCROLL TO CONTINUE READING

ಈ ಆಧಾರ್ ಪ್ರತಿಯೊಂದು ಕೆಲಸಕ್ಕೂ ಅಗತ್ಯವಾಗಿ ಬೇಕಾಗಿರುವ ದಾಖಲೆಯಾಗಿದೆ. ಬ್ಯಾಂಕಿಂಗ್‌ ವ್ಯವಹಾರ ಮಾಡುವಾಗ ಇದು ಅಗತ್ಯವಾಗಿ ಬೇಕಾಗಿರುತ್ತದೆ.ಇನ್ನು ಮಕ್ಕಳನ್ನು ಶಾಲೆಗೆ ಸೇರಿಸುವಾಗಲೂ ಆಧಾರ್ ಸಂಖ್ಯೆ ಅಗತ್ಯವಾಗಿ ನೀಡಬೇಕು. ಹೀಗಿರುವಾಗ ಈ ಪ್ರಮುಖ ದಾಖಲೆ ಕಳೆದುಹೋದರೆ ಅಥವಾ ಹರಿದರೆ ಏನು ಮಾಡುವುದು? ಆಧಾರ್ ಕಾರ್ಡ್ ಕಳೆದು ಹೋದರೆ ಚಿಂತಿಸಬೇಕಾಗಿಲ್ಲ.mAadhaar ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಕೇವಲ 50 ರೂ.ಗಳಲ್ಲಿ ಹೊಸ PVC ಕಾರ್ಡ್ ಅನ್ನು ಆರ್ಡರ್ ಮಾಡಬಹುದು.ಆದರೆ ಇದಕ್ಕಾಗಿ ಕೆಲವು ಪ್ರಮುಖ ಹಂತಗಳನ್ನು ಅನುಸರಿಸಬೇಕು.


ಇದನ್ನೂ ಓದಿ : Arecanut Price in Karnataka: ಶಿವಮೊಗ್ಗದಲ್ಲಿ 53 ಸಾವಿರ ಗಡಿ ದಾಟಿದ ಅಡಿಕೆ ಧಾರಣೆ


mAadhaar ಅಪ್ಲಿಕೇಶನ್ ಮೂಲಕ PVC ಆಧಾರ್ ಕಾರ್ಡ್ ಅನ್ನು ಹೇಗೆ ಆರ್ಡರ್ ಮಾಡುವುದು?: 


mAadhaar ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ :
ಮೊದಲು Google Play Store ಅಥವಾ Apple ಆಪ್ ಸ್ಟೋರ್‌ಗೆ ಹೋಗಿ ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ "mAadhaar" ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ .


-mAadhaar ಅಪ್ಲಿಕೇಶನ್ ತೆರೆಯಿರಿ
-ಲಾಗಿನ್ ಮಾಡಿ ಅಥವಾ ನೋಂದಾಯಿಸಿ
ನೀವು ಈಗಾಗಲೇ ಆಧಾರ್ ಖಾತೆಯನ್ನು ರಚಿಸಿದ್ದರೆ, ಕ್ರೆಡೆನ್ಶಿಯಲ್ ಬಳಸಿಕೊಂಡು ಲಾಗಿನ್ ಮಾಡಿ.ಇಲ್ಲದಿದ್ದರೆ, ನೋಂದಣಿ ಆಯ್ಕೆಯನ್ನು ಬಳಸಿಕೊಂಡು ಹೊಸ ಖಾತೆಯನ್ನು ರಚಿಸಿ.
-ಆ್ಯಪ್‌ಗೆ ಲಾಗಿನ್ ಆದ ನಂತರ ಆಧಾರ್ ಕಾರ್ಡ್ ವಿವರಗಳನ್ನು ನಮೂದಿಸಿ ಮತ್ತು ಪರಿಶೀಲಿಸಿ.
-ಆಧಾರ್ ಕಾರ್ಡ್ ವಿವರಗಳ ಪರಿಶೀಲನೆಯ ನಂತರ, "ಆರ್ಡರ್ ಆಧಾರ್ PVC ಕಾರ್ಡ್" ಆಯ್ಕೆಯನ್ನು ಆರಿಸಿ.
- ಶಿಪ್ಪಿಂಗ್ ವಿಳಾಸವನ್ನು ನಮೂದಿಸಿ. 
-ನಂತರ PVC ಆಧಾರ್ ಕಾರ್ಡ್‌ಗೆ ಶುಲ್ಕವನ್ನು ಪಾವತಿಸಿ. ಪಾವತಿಗಳನ್ನು ಮಾಡಲು ನೀವು UPI ಅನ್ನು ಬಳಸಬಹುದು.
- ಪಾವತಿಯ ನಂತರ ದೃಢೀಕರಿಸಿಕೊಳ್ಳಿ. 
-ನಿಮ್ಮ ಆರ್ಡರ್ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ
- ಹೊಸ ಆಧಾರ್ PVC ಕಾರ್ಡ್ ಅನ್ನು ನಿಮ್ಮ ವಿಳಾಸಕ್ಕೆ ಕಳುಹಿಸಲಾಗುತ್ತದೆ.
-ಈ ಹೊಸ PVC ಆಧಾರ್ ಕಾರ್ಡ್ ATM ಕಾರ್ಡ್‌ನಂತೆ ಕಾಣುತ್ತದೆ.ಈ ಕಾರ್ಡ್ ಪಡೆಯಲು 50 ರೂ.ಪಾವತಿಸಿದರೆ ಸಾಕು. 


ಇದನ್ನೂ ಓದಿ : ಇನ್ನು ಈ ಬ್ಯಾಂಕಿನ ಗ್ರಾಹಕರು ಖಾತೆಯಿಂದ ಹಣ ಪಡೆಯುವುದು ಸಾಧ್ಯವಿಲ್ಲ ! ಇಂದಿನಿಂದಲೇ ನಿರ್ಬಂಧ ಹೇರಿದ RBI


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.