Career Option: ರುಚಿ ರುಚಿಯಾದ ಆಹಾರ ತಯಾರಿಸುವ ಉತ್ಸಾಹವಿದೆಯೇ? ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸಿ
ಬಾಣಸಿಗರಾಗಲು ಹಲವು ರೀತಿಯ ಸರ್ಟಿಫಿಕೇಟ್, ಡಿಪ್ಲೊಮಾ ಮತ್ತು ಡಿಗ್ರಿ ಕೋರ್ಸ್‌ಗಳಿವೆ. 10 ಅಥವಾ 12ನೇ ತರಗತಿಯ ನಂತರ ವಿದ್ಯಾರ್ಥಿಗಳು ಈ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು.
ನವದೆಹಲಿ: ಇದು 21ನೇ ಶತಮಾನ. ನೀವು ಯಾವ ಕೆಲಸ ಮಾಡುತ್ತೀರೋ ಅದನ್ನು ಚೆನ್ನಾಗಿ ಮಾಡಿದ್ರೆ ಲಕ್ಷ ಲಕ್ಷ ಗಳಿಸಬಹುದು. ಹಿಂದೆ ಪೋಷಕರು ತಮ್ಮ ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಬೇಕೆಂದು ಬಯಸುತ್ತಿದ್ದರು. ಆದರೆ ಈಗ ಜಗತ್ತು ಬದಲಾಗಿದೆ, ಹಾಗೆಯೇ ಪೋಷಕರ ಮನಸ್ಥಿತಿಯೂ ಬದಲಾಗಿದೆ. ಈಗ ಪೋಷಕರು ತಮ್ಮ ಮಕ್ಕಳಲ್ಲಿರುವ ಆಸಕ್ತಿ ಗುರುತಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ. ಅದು ಕ್ರೀಡೆಯಾಗಿರಲಿ, ಸಂಗೀತವಾಗಲಿ ಅಥವಾ ಇನ್ನಾವುದೇ ಆಗಿರಲಿ ಮಕ್ಕಳ ಆಸೆ ಈಡೇರಿಸಲು, ಅವರ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯಲು ಪ್ರೋತ್ಸಾಹ ನೀಡುತ್ತಿದ್ದಾರೆ.
ಈಗ ಜನರು ತಮ್ಮ ಉತ್ಸಾಹವನ್ನು ವೃತ್ತಿಯಾಗಿ ಪರಿವರ್ತಿಸುತ್ತಿದ್ದಾರೆ. ಈ ಹಿಂದೆ ಜನಸಾಮಾನ್ಯರು ಇಷ್ಟಪಡದ ವೃತ್ತಿಯ ಬಗ್ಗೆ ಇಂದು ನಾವು ತಿಳಿಸಿಕೊಡಲಿದ್ದೇವೆ. ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು ಇಂದು ಲಕ್ಷ ಲಕ್ಷ ಹಣ ಸಂಪಾದಿಸುತ್ತಿದ್ದಾರೆ. ಇದು ಬಾಣಸಿಗ ವೃತ್ತಿ. ಈ ವೃತ್ತಿಗೆ ಇಂದು ಹೆಚ್ಚಿನ ಬೇಡಿಕೆ ಇದೆ. ಅಡುಗೆಯವರು ಮತ್ತು ಬಾಣಸಿಗ ಇಬ್ಬರೂ ಸಂಪೂರ್ಣವಾಗಿ ವಿಭಿನ್ನರು. ಅಡುಗೆಯವರು ಅಡುಗೆಮನೆಯಲ್ಲಿ ಆಹಾರ ತಯಾರಿಸುತ್ತಾರೆ. ಆದರೆ ಬಾಣಸಿಗರು ‘ಅಡುಗೆಯ ಮುಖ್ಯಸ್ಥ’ನಾಗಿರುತ್ತಾರೆ.
ಇದನ್ನೂ ಓದಿ: Skoda Vision 7S: 7 ಸೀಟರ್ ಎಲೆಕ್ಟ್ರಿಕ್ ಕಾರ್ ಬಿಡುಗಡೆ, ಇದರ ವೈಶಿಷ್ಟ್ಯಗಳನ್ನು ತಿಳಿಯಿರಿ
ಬಾಣಸಿಗರು ಕೂಡ ವಿವಿಧ ವರ್ಗಗಳಿಗೆ ಸೇರಿದ್ದಾರೆ. ಹೆಚ್ಚಿನ ಬಾಣಸಿಗರು ಅಡುಗೆ ಮಾಡುವುದಿಲ್ಲ, ಅವರು ಕೇವಲ ಮಾರ್ಗದರ್ಶನ ನೀಡುತ್ತಾರೆ. ಕೌಶಲ್ಯ ಮತ್ತು ಕೆಲಸದ ಆಧಾರದ ಮೇಲೆ ಬಾಣಸಿಗರ ವರ್ಗವನ್ನು ನಿರ್ಧರಿಸಲಾಗುತ್ತದೆ. ಬಾಣಸಿಗರಲ್ಲಿ ದೊಡ್ಡ ವರ್ಗವೆಂದರೆ executive chef. ಇವರು ಅಡುಗೆಮನೆಯ ವ್ಯವಸ್ಥಾಪಕರಾಗಿರುತ್ತಾರೆ. ಸೌಸ್ ಬಾಣಸಿಗ, ಪ್ಯಾಂಟ್ರಿ ಬಾಣಸಿಗ, ಪೇಸ್ಟ್ರಿ ಬಾಣಸಿಗ, ತರಕಾರಿ ಬಾಣಸಿಗ, ಮಾಂಸದ ಬಾಣಸಿಗ, ರೋಸ್ಟ್ ಚೆಫ್, ಫಿಶ್ ಚೆಫ್, ಕಾಮಿಸ್ ಚೆಫ್ ಮತ್ತು ಫ್ರೈ ಚೆಫ್‌ನಂತಹ ಬಾಣಸಿಗರೂ ಇದ್ದಾರೆ. ಇವರೆಲ್ಲರೂ ಆಯಾ ಕ್ಷೇತ್ರಗಳಲ್ಲಿ ಪರಿಣತರಾಗಿರುತ್ತಾರೆ.
ಬಾಣಸಿಗರಾಗಲು ಹಲವು ರೀತಿಯ ಸರ್ಟಿಫಿಕೇಟ್, ಡಿಪ್ಲೊಮಾ ಮತ್ತು ಡಿಗ್ರಿ ಕೋರ್ಸ್‌ಗಳಿವೆ. 10 ಅಥವಾ 12ನೇ ತರಗತಿಯ ನಂತರ ವಿದ್ಯಾರ್ಥಿಗಳು ಏನು ಮಾಡಬೇಕು..? ಇದಕ್ಕೆ ಉತ್ತರ ಅವರು ಬಾಣಸಿಗರಾಬಹುದು. ಬಾಣಸಿಗರ ಅಧ್ಯಯನದ ಕುರಿತು ಹೇಳುವುದಾದ್ರೆ, ನೀವು ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಬಿಎಸ್‌ಸಿ ಮತ್ತು ಎಂಎಸ್‌ಸಿ, ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಬ್ಯಾಚುಲರ್ ಆಫ್ ವೊಕೇಶನಲ್ ಪದವಿ, ಹಾಸ್ಪಿಟಾಲಿಟಿ ಮತ್ತು ಹೋಟೆಲ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಬಿಎಸ್‌ಸಿ, ಆಹಾರ ಉತ್ಪಾದನೆಯಲ್ಲಿ ಪದವಿ, ಆಹಾರ ಮತ್ತು ಪಾನೀಯ ಸೇವೆಗಳಲ್ಲಿ ಪದವಿ ಮುಂತಾದ ಕೋರ್ಸ್‌ಗಳಲ್ಲಿ ಪ್ರವೇಶ ತೆಗೆದುಕೊಳ್ಳಬಹುದು. ಇಲ್ಲಿ ಉಲ್ಲೇಖಿಸಿರುವ ಕೋರ್ಸ್‌ಗಳ ಹೊರತಾಗಿಯೂ ಇತರ ಕೋರ್ಸ್‌ಗಳಿವೆ.
ಇದನ್ನೂ ಓದಿ: ಎಸ್‌ಬಿಐ ಬಳಕೆದಾರರಿಗೆ ಗುಡ್ ನ್ಯೂಸ್! ಈಗ ವಾಟ್ಸಾಪ್‌ನಲ್ಲಿಯೇ ಪೂರ್ಣಗೊಳ್ಳಲಿದೆ ಈ ಕೆಲಸ
ಪ್ರವೇಶ ಹಂತದಲ್ಲಿ ಬಾಣಸಿಗರು ವಾರ್ಷಿಕ 4 ರಿಂದ 5 ಲಕ್ಷ ರೂ. ಸಂಪಾದಿಸಬಹುದು. ಇದಾದ ನಂತರ ಅನುಭವದೊಂದಿಗೆ ಸಂಬಳ ಹೆಚ್ಚುತ್ತಲೇ ಇರುತ್ತದೆ. ಹಿರಿಯ ಹಂತವನ್ನು ತಲುಪಿದ ನಂತರ ಪ್ರತಿ ಬಾಣಸಿಗನಿಗೆ 10 ರಿಂದ 30 ಲಕ್ಷ ರೂ.ಗಳ ಪ್ಯಾಕೇಜ್ ಸಿಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.