PM Kisan ರೈತರ ಗಮನಕ್ಕೆ : 12ನೇ ಕಂತಿನ ಬಗ್ಗೆ ಕೇಂದ್ರದಿಂದ ಮಹತ್ವದ ಆದೇಶ!

ಕೆವೈಸಿ ಮಾಡಲು ಇಂದು ಕೊನೆಯ ದಿನಾಂಕವಾಗಿದೆ. ಇ-ಕೆವೈಸಿ ಪೂರ್ಣಗೊಳಿಸದವರಿಗೆ ಕಂತಿನ ಹಣ ಸಿಗುವುದಿಲ್ಲ ಎಂದು ಈಗಾಗಲೇ ಸರ್ಕಾರ ತಿಳಿಸಿದೆ.

Written by - Channabasava A Kashinakunti | Last Updated : Aug 31, 2022, 12:38 PM IST
  • ರೈತರಿಗಾಗಿ ಆರಂಭಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ
  • 12ನೇ ಕಂತಿನ ಹಣ ಶೀಘ್ರದಲ್ಲೇ ರೈತರ ಖಾತೆಗೆ ಬರಲಿದೆ
  • ಕೆವೈಸಿ ಮಾಡಲು ಇಂದು ಕೊನೆಯ ದಿನಾಂಕವಾಗಿದೆ
PM Kisan ರೈತರ ಗಮನಕ್ಕೆ : 12ನೇ ಕಂತಿನ ಬಗ್ಗೆ ಕೇಂದ್ರದಿಂದ ಮಹತ್ವದ ಆದೇಶ! title=

PM Kisan Yojana : ದೇಶದ ಕೋಟ್ಯಂತರ ರೈತರಿಗಾಗಿ ಆರಂಭಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣ ಶೀಘ್ರದಲ್ಲೇ ರೈತರ ಖಾತೆಗೆ ಬರಲಿದೆ. ಸೆಪ್ಟೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಫಲಾನುಭವಿಗಳ ಖಾತೆಗೆ ಈ ಕಂತನ್ನು ವರ್ಗಾಯಿಸಬಹುದು ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ, ನೀವು ಇ-ಕೆವೈಸಿ ಮಾಡಿಸಿಕೊಳ್ಳುವುದು ತುಂಬಾ ಮುಖ್ಯವಾಗಿ. ಕೆವೈಸಿ ಮಾಡಲು ಇಂದು ಕೊನೆಯ ದಿನಾಂಕವಾಗಿದೆ. ಇ-ಕೆವೈಸಿ ಪೂರ್ಣಗೊಳಿಸದವರಿಗೆ ಕಂತಿನ ಹಣ ಸಿಗುವುದಿಲ್ಲ ಎಂದು ಈಗಾಗಲೇ ಸರ್ಕಾರ ತಿಳಿಸಿದೆ.

ಈ ಕೆಲಸದಿಂದ ಸಿಗಲಿದೆ 2 ಸಾವಿರ ರೂ.

ಇ-ಕೆವೈಸಿ ಮಾಡಿಸದಿದ್ದರೆ, ಕೇಂದ್ರ ಸರ್ಕಾರವು ನಡೆಸುತ್ತಿರುವ ಈ ಯೋಜನೆಯಲ್ಲಿ ಫಲಾನುಭವಿಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದೆ. ಹೀಗಾಗಿ, 2 ಸಾವಿರ ರೂ.ಗಳ ಲಾಭವನ್ನು ಪಡೆಯಲು, ನೀವು ಸರ್ಕಾರದ ಆದೇಶದಂತೆ ರಾತ್ರಿ 12 ಗಂಟೆಯ ಮೊದಲು ಇ-ಕೆವೈಸಿ ಪೂರ್ಣಗೊಳಿಸಬೇಕು. ಮೊದಲು ಈ ಗಡುವು ಜುಲೈ 31 ಆಗಿತ್ತು, ನಂತರ ಅದನ್ನು ಆಗಸ್ಟ್ 31 ಕ್ಕೆ ಹೆಚ್ಚಿಸಲಾಯಿತು.

ಇದನ್ನೂ ಓದಿ : Jio-Airtel-Vi-BSNLಗಿಂತಲೂ ಅಗ್ಗ!: 49 ರೂ.ಗೆ 180 ದಿನಗಳ ವ್ಯಾಲಿಡಿಟಿ ಜೊತೆಗೆ ಹೆಚ್ಚಿನ ಸೌಲಭ್ಯ

KYC ದಿನಾಂಕವನ್ನು ಈಗ ವಿಸ್ತರಿಸುವುದಿಲ್ಲ

ಅನೇಕ ಫಲಾನುಭವಿಗಳು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ತಪ್ಪಾದ ರೀತಿಯಲ್ಲಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಸರ್ಕಾರಕ್ಕೆ ಸಿಕ್ಕಿದೆ. ಇದರ ನಂತರ, ಸರ್ಕಾರವು ಫಲಾನುಭವಿಗಳಿಗೆ ಇ-ಕೆವೈಸಿ ಮಾಡುವಂತೆ ಕೇಳಿದೆ. ಇದರ ನಂತರ ಕೆವೈಸಿ ನಡೆಸುವ ದಿನಾಂಕವನ್ನು ವಿಸ್ತರಿಸುವುದಿಲ್ಲ ಎಂದು ಸರ್ಕಾರ ಹೇಳಿದೆ.

ಕೇಂದ್ರ ಸರ್ಕಾರವು ಯೋಜನೆಗೆ ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದಾಗಿನಿಂದ, ಅದರ ಫಲಾನುಭವಿಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದೆ. ಆಗಸ್ಟ್ ಮತ್ತು ನವೆಂಬರ್ 2021 ರ ನಡುವೆ 9 ನೇ ಕಂತಿನ ಹಣವನ್ನು 11.19 ಕೋಟಿ ರೈತರು ಸ್ವೀಕರಿಸಿದ್ದಾರೆ. ಇದರ ನಂತರ, ಸುಮಾರು 11.15 ಕೋಟಿ ರೈತರು ಡಿಸೆಂಬರ್ 2021 ಮತ್ತು ಮಾರ್ಚ್ 2022 ರ ನಡುವೆ 10 ನೇ ಕಂತು ಪಡೆದರು. 11ನೇ ಕಂತಿನಲ್ಲಿ ಫಲಾನುಭವಿಗಳ ಸಂಖ್ಯೆ 10.92 ಕೋಟಿಗೆ ಇಳಿದಿದೆ.

ಇದನ್ನೂ ಓದಿ : Arecanut Today Price: ಇಂದಿನ ಅಡಿಕೆ ಧಾರಣೆ ಹೀಗಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News