Indian Railway Rules : ಭಾರತದಲ್ಲಿ ಪ್ರತಿ ನಿತ್ಯ ರೈಲಿನಲ್ಲಿ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಬೇರಿಗೆ ಸಾರಿಗೆ ಸಾಧನಗಳಿಗೆ ಹೋಲಿಸಿದರೆ ರೈಲಿನಲ್ಲಿ ಪ್ರಯಾಣ ಮಾಡುವುದು ಹೆಚ್ಚು ಅನುಕೂಲಕರ ಎನ್ನುವುದು ಇದೇ ಕಾರಣಕ್ಕೆ. ಅದರಲ್ಲೂ ಜೊತೆಯಲ್ಲಿ ವಯಸ್ಕರು, ಪುಟ್ಟ ಮಕ್ಕಳು ಇದ್ದರೆ ರೈಲು ಪ್ರಯಾಣ ಬಲು ಆರಾಮದಾಯಕವಾಗಿರುತ್ತದೆ. ಊಟ, ತಿಂಡಿ ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಪೂರೈಸಬಹುದು. ಯಾವಗ ಬೇಕಾದರೂ ಶೌಚಾಲಯವನ್ನು ಬಳಸಬಹುದು. ಅಲ್ಲದೆ, ರೈಲು ಟಿಕೆಟ್ ದರಗಳು ಕೂಡಾ ಕಡಿಮೆ.ಪ್ರಸ್ತುತ ಭಾರತೀಯ ರೈಲ್ವೇಯಲ್ಲಿ ಪ್ರತಿದಿನ ಸುಮಾರು 2.5 ಕೋಟಿ ಪ್ರಯಾಣಿಕರು ಪ್ರಯಾಣಿಸುತ್ತಾರೆ. 


COMMERCIAL BREAK
SCROLL TO CONTINUE READING

ಕೆಲವೊಮ್ಮೆ ಅನೇಕ ರೈಲುಗಳು ವಿವಿಧ ಕಾರಣಗಳಿಂದ ವಿಳಂಬವಾಗುತ್ತವೆ ಅಥವಾ ರದ್ದುಗೊಳ್ಳುತ್ತವೆ. ಹೀಗಾದಾಗ ಭಾರತೀಯ ರೈಲ್ವೇ ಪ್ರಯಾಣಿಕರಿಗೆ ವಿಶೇಷ ಸೌಲಭ್ಯವನ್ನು ಒದಗಿಸುತ್ತಿದೆ. ಇದರ ಪ್ರಕಾರ ರೈಲು ವಿಳಂಬವಾದರೆ ಪ್ರಯಾಣಿಕರು ಸಂಪೂರ್ಣ ಮರುಪಾವತಿಯನ್ನು ಪಡೆಯಬಹುದು.  


ಇದನ್ನೂ ಓದಿ : March Deadline ಮಿಸ್ ಆಗೋದ್ರೋಳಗೆ ಈ ಕೆಲಸ ಮಾಡಿ, ಇಲ್ದಿದ್ರೆ!


ಭಾರತೀಯ ರೈಲ್ವೆಯ ಈ ನಿಯಮದ ಬಗ್ಗೆ ಅನೇಕ ಪ್ರಯಾಣಿಕರಿಗೆ ಮಾಹಿತಿ ಇರುವುದಿಲ್ಲ. ನೀವು ಎಲ್ಲಿಗಾದರೂ ತೆರೆಳಬೇಕಿದ್ದು, ನೀವು ಬುಕ್ ಮಾಡಿರುವ ರೈಲು ವಿಳಂಬವಾದರೆ, ಭಾರತೀಯ ರೈಲ್ವೆಯಿಂದ ಪೂರ್ಣ ಶುಲ್ಕದ ಮೊತ್ತವನ್ನು ವಾಪಸ್ ಪಡೆಯಬಹುದು. ಇದಕ್ಕಾಗಿ ಭಾರತೀಯ ರೈಲ್ವೆ ಕೆಲವು ಷರತ್ತುಗಳನ್ನು ವಿಧಿಸಿದೆ. ಈ ಷರತ್ತಿನ ಅನ್ವಯ ಹಣವನ್ನು ವಾಪಸ್ ಪಡೆಯಬಹುದು. 


ಪ್ರಯಾಣಿಕರು ಯಾವಾಗ ಮರುಪಾವತಿ ಪಡೆಯಬಹುದು ? :
ನಿಮ್ಮ ರೈಲು ವಿಳಂಬವಾಗಿದ್ದರೆ, ನಿಮ್ಮ ರೈಲು ಟಿಕೆಟ್‌ನ ಸಂಪೂರ್ಣ ಹಣವನ್ನು  ಸುಲಭವಾಗಿ ಪಡೆಯಬಹುದು. ಆದರೆ, ರೈಲು 3 ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ ಮಾತ್ರ ಪ್ರಯಾಣಿಕರು ಮರುಪಾವತಿ ಪಡೆಯಬಹುದು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಮರುಪಾವತಿಗಾಗಿ ನೀವು ಟಿಕೆಟ್ ಠೇವಣಿ ರಸೀದಿಯನ್ನು ನೀಡಬೇಕಾಗುತ್ತದೆ. IRCTCಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು TDR (ಟಿಕೆಟ್ ಠೇವಣಿ ರಸೀದಿ) ಯನ್ನು ನೀಡಬೇಕು.


ಇದನ್ನೂ ಓದಿ : ಮೈಸೂರು ಪೇಂಟ್ಸ್ ಕಾರ್ಖಾನೆಗೆ ಸದ್ಯದಲ್ಲೇ ಬ್ರ್ಯಾಂಡ್ ವರ್ಚಸ್ಸು: ಸಚಿವ ಎಂ ಬಿ ಪಾಟೀಲ


ಇದಲ್ಲದೇ ಟಿಕೆಟ್ ಕೌಂಟರ್ ಗೆ ಹೋಗಿ ಟಿಕೆಟ್ ಸರೆಂಡರ್ ಮಾಡಿದರೂ ಪೂರ್ತಿ ಹಣ ವಾಪಸ್ ಸಿಗುತ್ತದೆ. ಇನ್ನು ಆನ್‌ಲೈನ್‌ನಲ್ಲಿ ಮರುಪಾವತಿ ಪಡೆಯಲು ಮೊದಲು ನೀವು 
-IRCTC ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು.
- Booked Ticket History ಕ್ಲಿಕ್ ಮಾಡಿ.
- TDR ಅನ್ನು ಫೈಲ್ ಮಾಡಲು, ನಿರ್ದಿಷ್ಟ ಟಿಕೆಟ್‌ನ PNR ಮೇಲೆ ಕ್ಲಿಕ್ ಮಾಡಿ “File TDR” ಆಯ್ಕೆ ಮಾಡಿ.
- TDR ಪಡೆಯಲು ನೀವು ಮರುಪಾವತಿ ಬಯಸುವ ಪ್ರಯಾಣಿಕರ ಹೆಸರನ್ನು ಆಯ್ಕೆಮಾಡಿ.
- TDR ಅನ್ನು ಸಲ್ಲಿಸಲು ಏನು ಕಾರಣ ಎನ್ನುವುದನ್ನು ಕಾರಣಗಳ ಪಟ್ಟಿಯಿಂದ ಆಯ್ಕೆಮಾಡಿ. ಅಥವಾ “Others”  ಆಯ್ಕೆ ಆರಿಸಿಕೊಳ್ಳಿ. 
- ಈಗ “Submit” ಬಟನ್ ಮೇಲೆ ಕ್ಲಿಕ್ ಮಾಡಿ.
-ಒಂದು ವೇಳೆ ನೀವು “Others”  ಆಯ್ಕೆಯನ್ನು ಆರಿಸಿದ್ದರೆ ಟೆಕ್ಸ್ಟ್ ಬಾಕ್ಸ್ ತೆರೆಯುತ್ತದೆ. ಅಲ್ಲಿ ಮರುಪಾವತಿಗೆ ಕಾರಣವನ್ನು ಬರೆದು  ಸಬ್ಮಿಟ್ ಮಾಡಿ. 
TDR Filing Confirmation pageನಲ್ಲಿ ಎಲ್ಲಾ ವಿವರಗಳು ಸರಿಯಾಗಿವೆಯೇ  ಎನ್ನುವುದನ್ನು ಪರಿಶೀಲಿಸಿಕೊಳ್ಳಿ. 
"OK" ಕ್ಲಿಕ್ ಮಾಡಿ.


ಆದರೆ, ದೃಢೀಕರಿಸಿದ ತತ್ಕಾಲ್ ಟಿಕೆಟ್ ಅನ್ನು ರದ್ದುಗೊಳಿಸಿದರೆ ಯಾವುದೇ ಮರುಪಾವತಿಯನ್ನು ನೀಡಲಾಗುವುದಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.