March Deadline ಮಿಸ್ ಆಗೋದ್ರೋಳಗೆ ಈ ಕೆಲಸ ಮಾಡಿ, ಇಲ್ದಿದ್ರೆ!

Last Month Of Financial Year 2023-24: ವರ್ಷ 2023-24 ರ ಆರ್ಥಿಕ ವರ್ಷದ ಕೊನೆಯ ತಿಂಗಳು ನಡೆಯುತ್ತಿದ್ದು, ಈ ತಿಂಗಳು ಹಲವು ಮಹತ್ವದ ಕೆಲಸಗಳಿಗೆ ಡೆಡ್ಲೈನ್ ಆಗಿದೆ ಎಂದರೆ ತಪ್ಪಾಗಲಾರದು, ಮಾರ್ಚ್ ತಿಂಗಳಲ್ಲಿ ನೀವು ಪೂರ್ಣಗೊಳಿಸಬೇಕಾದ ಹಲವು ಪ್ರಮುಖ ಕೆಲಸಗಳಿವೆ. ಮಾರ್ಚ್ 31 ರೊಳಗೆ ನೀವು ಈ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸದಿದ್ದರೆ, ನಿಮಗೆ ಸಮಸ್ಯೆ ಹೆಚ್ಚಾಗಬಹುದು ಮತ್ತು ನಿಮ್ಮ ಜೇಬಿಗೆ ಅದರಿಂದ ಹೊರಬೀಳಬಹುದು. (Business News In Kannada)  

Written by - Nitin Tabib | Last Updated : Mar 11, 2024, 09:07 PM IST
  • ಫಾಸ್ಟ್ಯಾಗ್ KYC ಅನ್ನು ಅನಿವಾರ್ಯಗೊಳಿಸಲಾಗಿದೆ. ನಿಮ್ಮ ಫಾಸ್ಟ್ಯಾಗ್ KYC (FasTab KYC) ಅನ್ನು ನೀವು ಮಾಡಿಸದೆ ಇದ್ದರೆ ತಕ್ಷಣ ಮಾಡಿಸಿ.
  • ಏಕೆಂದರೆ ಮಾರ್ಚ್ 31 ರ ನಂತರ, KYC ಇಲ್ಲದ ಫಾಸ್ಟ್ಯಾಗ್ ನಿಷ್ಕ್ರಿಯಗೊಂಡು ಬ್ಲ್ಯಾಕ್ ಲಿಸ್ಟ್ ಸೇರಲಿದೆ.
  • ಅರ್ಥಾತ್ ಫಾಸ್ಟ್ಯಾಗ್‌ನಲ್ಲಿ ಬ್ಯಾಲೆನ್ಸ್ ಇದ್ದರೂ ನೀವು ಪಾವತಿ ಮಾಡಲು ಸಾಧ್ಯವಿಲ್ಲ.
March Deadline ಮಿಸ್ ಆಗೋದ್ರೋಳಗೆ ಈ ಕೆಲಸ ಮಾಡಿ, ಇಲ್ದಿದ್ರೆ! title=

Financial Year 2023-24 Last Month: ಆರ್ಥಿಕ ವರ್ಷ 2023-2024 ರ  ಕೊನೆಯ ತಿಂಗಳು ನಡೆಯುತ್ತಿದೆ. ಮಾರ್ಚ್ ತಿಂಗಳಲ್ಲಿ ನೀವು ಪೂರ್ಣಗೊಳಿಸಬೇಕಾದ ಹಲವು ಕೆಲಸಗಳಿವೆ. ಮಾರ್ಚ್ 31 ರೊಳಗೆ ನೀವು ಈ ಪ್ರಮುಖ ಕೆಲ್ಸಗಳನ್ನು ಪೂರ್ಣಗೊಳಿಸದಿದ್ದರೆ, ನಿಮಗೆ ಸಮಸ್ಯೆ ಎದುರಾಗಬಹುದು ಮತ್ತು ಅದು ನಿಮ್ಮ ಜೇಬಿಗೂ ಕೂಡ ಹೊಡೆತ ನೀಡಬಹುದು.  ಮಾರ್ಚ್ ತಿಂಗಳ ಅಂತ್ಯದೊಂದಿಗೆ, ಹೊಸ ಆರ್ಥಿಕ ವರ್ಷವೂ ಆರಂಭವಾಗುತ್ತದೆ, ಆದ್ದರಿಂದ ಮಾರ್ಚ್ ತಿಂಗಳ ಅಂತ್ಯದ ಮೊದಲು, ನೀವು ಹಣಕಾಸಿಗ ಸಂಬಂಧಿಸಿದ ಹಲವು ಕೆಲಸಗಳನ್ನು ಪೂರ್ಣಗೊಳಿಸಬೇಕಿದೆ. ಈ ಗಡುವನ್ನು (march deadlines to excape from problem) ಒಮ್ಮೆ ನೀವು ಮರೆತರೆ ನಿಮಗೆ ತೊಂದರೆ ಎದುರಾಗಬಹುದು. ಇವುಗಳಲ್ಲಿ ಕೆಲ ಕೆಲಸಗಳು ಎಷ್ಟು ಮುಖ್ಯವಾಗಿವೆ ಎಂದರೆ, ಒಂದು ವೇಳೆ ನೀವು ಅವುಗಳನ್ನು ಮಾರ್ಚ್‌ನಲ್ಲಿ ಪೂರ್ಣಗೊಳಿಸದಿದ್ದರೆ, ನೀವು ದಂಡವನ್ನು ಸಹ ಪಾವತಿಸಬೇಕಾಗಬಹುದು ಮತ್ತು ನಿಮ್ಮ ಖಾತೆ ಅಮಾನತುಗೊಳ್ಳುವ ಸಾಧ್ಯತೆ ಇದೆ. (Business News In Kannada)

ಆಧಾರ್ ನವೀಕರಣದ (Aadhaar Update) ಗಡುವು ಮರೆಯಬೇಡಿ: ನಿಮ್ಮ ಆಧಾರ್ ಅನ್ನು ನೀವು ನವೀಕರಿಸಲು ಬಯಸಿದರೆ, ನೀವು ಅದನ್ನು ಯಾವುದೇ ಶುಲ್ಕವಿಲ್ಲದೆ ಮಾರ್ಚ್ 14 ರವರೆಗೆ ನವೀಕರಿಸಬಹುದು. ಇದರ ನಂತರ ಆಧಾರ್ ಅಪ್ಡೇಟ್ ಗೆ ನೀವು ಶುಲ್ಕ ಪಾವತಿಸಬೇಕು. 

Paytm ಪಾವತಿ ಬ್ಯಾಂಕ್ ಕೊನೆಯ ದಿನಾಂಕ: ಮಾರ್ಚ್ 15 ರಿಂದ ಪೇಟಿಎಂ ಪೇಮೆಂಟ್ ಬ್ಯಾಂಕ್‌ನ (Paytm Payments Bank) ಬಹುತೇಕ ಸೇವೆಗಳನ್ನು ನಿಲ್ಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿದೆ. ಹೀಗಾಗಿ ಮಾರ್ಚ್ ನಂತರ ನೀವು Paytm ಪೇಮೆಂಟ್ ಬ್ಯಾಂಕ್ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ನೀವು ಸೇವೆಗಳನ್ನು ಬಳಸುತಿದ್ದಾರೆ, Paytm ಪಾವತಿ ಬ್ಯಾಂಕ್‌ನ ಖಾತೆ ಅಥವಾ ನಿಮ್ಮ Paytm ವ್ಯಾಲೆಟ್ ಅನ್ನು Paytm ಪಾವತಿ ಬ್ಯಾಂಕ್‌ಗೆ ಲಿಂಕ್ ಮಾಡಿದ್ದರೆ, ನೀವು ತಕ್ಷಣ ಅದನ್ನು ಇನ್ನೊಂದು ಬ್ಯಾಂಕ್‌ಗೆ ಲಿಂಕ್ ಮಾಡಬೇಕು. 

SBI FD ನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಕೊನೆಯ ಅವಕಾಶ: SBI ಅಮೃತ್ ಕಲಶ್‌ನಲ್ಲಿ (SBI Amrit Kalash FD Scheme) ಹೂಡಿಕೆ ಮಾಡಲು 31 ಮಾರ್ಚ್ 2024  ಅಂತಿಮ ಗಡುವು ನೀಡಲಾಗಿದೆ.  ಈ ಎಫ್‌ಡಿಯಲ್ಲಿ ನಿಮಗೆ  400 ದಿನಗಳವರೆಗೆ ಶೇ. 7.10 ಬಡ್ಡಿಯ ಲಾಭ ಸಿಗುತ್ತದೆ . ಅದೇ ಹಿರಿಯ ನಾಗರಿಕರಿಗೆ ಶೇ. 7.60 ಬಡ್ಡಿ ಸಿಗುತ್ತದೆ.

ಸುಕನ್ಯಾ ಸಮೃದ್ಧ್ ಯೋಜನೆ (SSY) ಮತ್ತು PPF: ನೀವು ಸುಕನ್ಯಾ ಸಮೃದ್ಧಿ ಯೋಜನೆ ಅಥವಾ ಸಾರ್ವಜನಿಕ ಭವಿಷ್ಯ ನಿಧಿ (PPF) ನಂತಹ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದರೆ, ನಿಮ್ಮ ಖಾತೆಗಳನ್ನು ಖಾತೆಯನ್ನು ಸಕ್ರಿಯವಾಗಿಡಲು ಅವುಗಳಲ್ಲಿ ಕನಿಷ್ಠ ಮೊತ್ತವನ್ನು ನಿರ್ವಹಿಸುವುದು ಅನಿವಾರ್ಯವಾಗಿದೆ. ನೀವು ಮಾರ್ಚ್ 31 ರವರೆಗೆ ಪಿಪಿಎಫ್, ಸುಕನ್ಯಾ ಸ್ಕೀಮ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಖಾತೆ ನಿಷ್ಕ್ರೀಯವಾಗಬಹುದು. 

ಆದಾಯ ತೆರಿಗೆ (Income Tax) ಉಳಿತಾಯದ ಅಂತಿಮ ಗಡುವು: ಹಣಕಾಸು ವರ್ಷ 2022-23ರ  ತೆರಿಗೆ ಉಳಿತಾಯ ಮಾಡಲು ನೀವು ಬಯಸುತ್ತಿದ್ದರೆ, ನಿಮಗೆ ಮಾರ್ಚ್ 31 ಅಂತಿಮ ದಿನಾಂಕವಾಗಿದೆ. ವಿವಿಧ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಇದಕ್ಕಾಗಿ ನೀವು ಮಾರ್ಚ್ 31 ರವರೆಗೆ ಹೂಡಿಕೆ ಮಾಡಬೇಕಾಗುತ್ತದೆ.

Paytm ಫಾಸ್ಟ್ಯಾಗ್‌ ವ್ಯಾಲೆಟ್ ಬಂದ್ ಆಗಲಿದೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳ ಪ್ರಕಾರ, ಮಾರ್ಚ್ 15 ರ ನಂತರ Paytm ಫಾಸ್ಟ್ಯಾಗ್ (Paytm Fasttag) ಕಾರ್ಯನಿರ್ವಹಿಸುವುದಿಲ್ಲ. ಮಾರ್ಚ್ 15 ರ ನಂತರ, ನೀವು Paytm ನ FASTag ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಮಾರ್ಚ್ 15 ರ ನಂತರ ನಿಮ್ಮ ಫಾಸ್ಟ್ಯಾಗ್ ನಿಷ್ಕ್ರಿಯಗೊಂಡು, ನೀವು ಡಬಲ್ ಟೋಲ್ ತೆರಿಗೆ ಪಾವತಿಸಬೇಕಾಗಬಹುದು.

ಫಾಸ್ಟ್ಯಾಗ್‌ನ KYC: ಫಾಸ್ಟ್ಯಾಗ್ KYC ಅನ್ನು ಅನಿವಾರ್ಯಗೊಳಿಸಲಾಗಿದೆ. ನಿಮ್ಮ ಫಾಸ್ಟ್ಯಾಗ್ KYC (FasTab KYC) ಅನ್ನು ನೀವು ಮಾಡಿಸದೆ ಇದ್ದರೆ ತಕ್ಷಣ ಮಾಡಿಸಿ. ಏಕೆಂದರೆ ಮಾರ್ಚ್ 31 ರ ನಂತರ, KYC ಇಲ್ಲದ ಫಾಸ್ಟ್ಯಾಗ್ ನಿಷ್ಕ್ರಿಯಗೊಂಡು ಬ್ಲ್ಯಾಕ್  ಲಿಸ್ಟ್ ಸೇರಲಿದೆ. ಅರ್ಥಾತ್  ಫಾಸ್ಟ್ಯಾಗ್‌ನಲ್ಲಿ ಬ್ಯಾಲೆನ್ಸ್ ಇದ್ದರೂ ನೀವು ಪಾವತಿ ಮಾಡಲು ಸಾಧ್ಯವಿಲ್ಲ.

IDBI ಬ್ಯಾಂಕ್ ವಿಶೇಷ FD ಯೋಜನೆ: ಐಡಿಬಿಐ ಬ್ಯಾಂಕ್ ತನ್ನ ವಿಶೇಷ ಎಫ್‌ಡಿ ಯೋಜನೆಯ ಗಡುವನ್ನು ಮಾರ್ಚ್ 31 ಕ್ಕೆ ಇರಿಸಿದೆ. ಈ ವಿಶೇಷ FD ಅಡಿಯಲ್ಲಿ, 300, 375, 444 ದಿನಗಳ FD ಗಳ ಮೇಲೆ ಕ್ರಮವಾಗಿ ಶೇ. 7.05 ಶೇ. 7.10 ಮತ್ತು ಶೇ. 7.25  ಬಡ್ಡಿ ನೀಡಲಾಗುತ್ತಿದೆ.

ಇದನ್ನೂ ಓದಿ-Chocolate, Swiss Watch ಪ್ರಿಯರಿಯೊಂದು ಸಂತಸದ ಸುದ್ದಿ!

SBI ಗೃಹ ಸಾಲ: ಎಸ್ಬಿಐ ಗೃಹ ಸಾಲದ ಮೇಲಿನ ರಿಯಾಯ್ತಿ ಲಾಭವನ್ನು ಪಡೆಯಲು ನೀವು ಬಯಸುತ್ತಿದ್ದರೆ,  ನಿಮಗೆ ಮಾರ್ಚ್ 31 ರವರೆಗೆ ಅಂತಿಮ ಸಮಯಾವಕಾಶ ಇದೆ. ಗೃಹ ಸಾಲದ ಮೇಲಿನ ರಿಯಾಯಿತಿಗಾಗಿ ಎಸ್‌ಬಿಐ ವಿಶೇಷ ಯೋಜನೆಯನ್ನು ನಡೆಸುತ್ತಿದೆ. ಆದರೆ, ಈ ಯೋಜನೆಯ ಪ್ರಯೋಜನವು CIBIL ಸ್ಕೋರ್ 700-800 ಕ್ಕಿಂತ ಹೆಚ್ಚಿರುವ ಜನರಿಗೆ ಮಾತ್ರ ಸಿಗುತ್ತದೆ. ಈ ಜನರಿಗೆ ಬ್ಯಾಂಕ್ ನಿಂದ ಶೇ.8.60ರ ಬಡ್ಡಿ ದರದಲ್ಲಿ ಗೃಹ ಸಾಲ ಸಿಗುತ್ತಿದೆ. ಯಾವುದೇ ವಿಶೇಷ ಕೊಡುಗೆ ಇಲ್ಲದೆ SBI ಗೃಹ ಸಾಲಕ್ಕೆ ಶೇ. 9.15 ಬಡ್ಡಿ ಪಡೆಯುತ್ತದೆ.

ಇದನ್ನೂ ಓದಿ-New PPF Interest Rates: ಸರ್ಕಾರದ ವತಿಯಿಂದ ಹೊಸ ಪಿಪಿಎಫ್ ಬಡ್ಡಿ ದರ ಘೋಷಣೆ, ಏಪ್ರಿಲ್ ನಿಂದ ಅನ್ವಯ!

ಅಡ್ವಾನ್ಸ್ ಟ್ಯಾಕ್ಸ್ ನಾಲ್ಕನೇ ಕಂತು: 2023-24ನೇ ಹಣಕಾಸು ವರ್ಷಕ್ಕೆ ಮುಂಗಡ ತೆರಿಗೆಯ ನಾಲ್ಕನೇ ಕಂತನ್ನು ಪಾವತಿಸಲು ಮಾರ್ಚ್ 15 ಕೊನೆಯ ದಿನವಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News