Import Duty on Gold-Silver : ಬಜೆಟ್‌ಗೂ ಮುನ್ನವೇ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ತೆರಿಗೆಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಚಿನ್ನ, ಬೆಳ್ಳಿ ಹಾಗೂ ಅಮೂಲ್ಯ ಲೋಹದ ನಾಣ್ಯಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಜನವರಿ 22 ರಂದು ಚಿನ್ನ ಮತ್ತು ಬೆಳ್ಳಿಯ ಹೊರತಾಗಿ ಬೆಲೆಬಾಳುವ ಲೋಹಗಳ ನಾಣ್ಯಗಳ ಮೇಲಿನ ಆಮದು ಸುಂಕವನ್ನು ಶೇಕಡಾ 15 ಕ್ಕೆ ಹೆಚ್ಚಿಸಲಾಯಿತು. 


COMMERCIAL BREAK
SCROLL TO CONTINUE READING

ಆಮದು ಸುಂಕ ತೆರಿಗೆ ಹೆಚ್ಚಳ :
ಬಜೆಟ್‌ಗೂ ಮುನ್ನವೇ ಚಿನ್ನ ಮತ್ತು ಬೆಳ್ಳಿಯ ಮೇಲೆ ಮಹತ್ವದ ನಿರ್ಧಾರ ಕೈಗೊಂಡಿರುವ ಹಣಕಾಸು ಸಚಿವಾಲಯ ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕವನ್ನು ಹೆಚ್ಚಿಸಲು ನಿರ್ಧರಿಸಿದೆ.ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ.12.50ರಿಂದ ಶೇ.15ಕ್ಕೆ ಸರ್ಕಾರ ಹೆಚ್ಚಿಸಿದೆ. ಚಿನ್ನ ಮತ್ತು ಬೆಳ್ಳಿಯ  ಸ್ಕ್ರೂ, ಹುಕ್  ಮತ್ತು ನಾಣ್ಯಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಸರ್ಕಾರದ ನಿರ್ಧಾರದ ಪ್ರಕಾರ, ಹೊಸ ದರಗಳು ಜನವರಿ 22, 2024 ರಿಂದ ಜಾರಿಗೆ ಬಂದಿವೆ. ಸರ್ಕಾರದ ಈ ನಿರ್ಧಾರದ ಉದ್ದೇಶ ದೇಶೀಯ ಆರ್ಥಿಕತೆಯನ್ನು ಬೆಂಬಲಿಸುವುದಾಗಿದೆ.  


ಇದನ್ನೂ ಓದಿ : Budget 2024 : ಪಿಂಚಣಿ ಮತ್ತು ವರ್ಷಾಶನ ಯೋಜನೆಗಳ ಮೇಲೆ ತೆರಿಗೆ ವಿನಾಯಿತಿ : ಸರ್ಕಾರದ ಪ್ಲಾನ್ ಹೀಗಿದೆ


ಚಿನ್ನ ಮತ್ತು ಬೆಳ್ಳಿಯ ಬೆಲೆಯ ಮೇಲೆ ಯಾವ ಪರಿಣಾಮ ಬೀರಲಿದೆ? :
ಭಾರತದಲ್ಲಿ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾನದಂಡದ ಬೆಲೆಗಳನ್ನು ಆಧರಿಸಿದೆ. ಆದರೆ, ಇದಕ್ಕಿಂತ ಹೆಚ್ಚಾಗಿ ಆಮದು ಸುಂಕದ ಕಾರಣದಿಂದಾಗಿ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆಮದು ಸುಂಕ ಹೆಚ್ಚಳವು ಚಿನ್ನ ಮತ್ತು ಬೆಳ್ಳಿಯ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ.ಆಮದು ಸುಂಕದ ತೆರಿಗೆ ಹೆಚ್ಚಳದಿಂದಾಗಿ, ಅದರ ಬೆಲೆಯ ಮೇಲೂ ಪರಿಣಾಮ ಬೀರಬಹುದು.


ಇದನ್ನೂ ಓದಿ : Ayodhya Ram Mandir:ರಾಮನ ಹೆಸರಿನಲ್ಲಿ 3,200 ಕೋಟಿ ರೂಪಾಯಿ ದೇಣಿಗೆ : ಅತಿ ಹೆಚ್ಚು ದಾನ ನೀಡಿದ್ದು ಅಂಬಾನಿ ಅದಾನಿ ಅಲ್ಲ ಈ ವ್ಯಕ್ತಿ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ