ಐ‌ಆರ್‌ಸಿ‌ಟಿ‌ಸಿಯ ಈ ಪ್ಯಾಕೇಜ್‌ನಲ್ಲಿ ಪ್ರವಾಸಿಗರಿಗೆ ಅಯೋಧ್ಯೆ ಸೇರಿದಂತೆ ಈ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ

IRCTC Tour Package: ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಲು ಬಯಸುವ ಯಾತ್ರಾರ್ಥಿಗಳಿಗಾಗಿ ಐ‌ಆರ್‌ಸಿ‌ಟಿ‌ಸಿ ಅದ್ಭುತ ಪ್ರವಾಸಿ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಟೂರ್ ಪ್ಯಾಕೇಜ್‌ನಲ್ಲಿ ಅಯೋಧ್ಯೆ, ಪ್ರಯಾಗರಾಜ್, ಚಿತ್ರಕೂಟ ಮತ್ತು ವಾರಣಾಸಿಗೆ ಪ್ರವಾಸ ಕೈಗೊಳ್ಳಬಹುದಾಗಿ. ಈ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿದೆ. 

Written by - Yashaswini V | Last Updated : Jan 23, 2024, 12:24 PM IST
  • ಯಾತ್ರಾ ಸ್ಥಳಗಳಿಗೆ ಭೇಟಿ ನೀಡಲು ಬಯಸುವ ಭಕ್ತರಿಗಾಗಿ ಭಾರತೀಯ ರೈಲ್ವೆ ಪ್ರವಾಸ ಪ್ಯಾಕೇಜ್‌ನ್ನು ಘೋಷಿಸಿದೆ
  • ಈ ಟೂರ್ ಪ್ಯಾಕೇಜ್‌ನಲ್ಲಿ 2024ರ ಫೆಬ್ರವರಿ 5 ರಿಂದ ಪ್ರಯಾಣವು ಪ್ರಾರಂಭವಾಗುತ್ತದೆ.
  • ಈ ಐ‌ಆರ್‌ಸಿ‌ಟಿ‌ಸಿಯ ಟೂರ್ ಪ್ಯಾಕೇಜ್‌ನಲ್ಲಿ, ಭಕ್ತರು ಅಯೋಧ್ಯೆ, ಪ್ರಯಾಗರಾಜ್, ಚಿತ್ರಕೂಟ, ವಾರಣಾಸಿ, ಉಜ್ಜಯಿನಿ ಮತ್ತು ನಾಸಿಕ್‌ನಲ್ಲಿರುವ ಜ್ಯೋತಿರ್ಲಿಂಗಕ್ಕೆ ಭೇಟಿ ನೀಡಬಹುದು.
ಐ‌ಆರ್‌ಸಿ‌ಟಿ‌ಸಿಯ ಈ ಪ್ಯಾಕೇಜ್‌ನಲ್ಲಿ ಪ್ರವಾಸಿಗರಿಗೆ ಅಯೋಧ್ಯೆ ಸೇರಿದಂತೆ ಈ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ  title=

IRCTC Package: ಭಾರತೀಯ ರೈಲ್ವೆ ಪ್ರವಾಸಿಗ ಹಿತದೃಷ್ಟಿಯಿಂದ ಹಾಗೂ ಪ್ರವಾಸಿಗರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಆಗಾಗ್ಗೆ ಹೊಸ ಹೊಸ ಪ್ಯಾಕೇಜ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಐ‌ಆರ್‌ಸಿ‌ಟಿ‌ಸಿ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಲು ಬಯಸುವ ಭಕ್ತಾಧಿಗಳಿಗಾಗಿ ವಿಶೇಷ ಧಾರ್ಮಿಕ ಪ್ರವಾಸ ಪ್ಯಾಕೇಜ್ ಅನ್ನು ಪರಿಚೈಸಿದೆ. ಈ ಟೂರ್ ಪ್ಯಾಕೇಜ್‌ನಲ್ಲಿ ಭಕ್ತರು ರಾಮಜನ್ಮಭೂಮಿ ಅಯೋಧ್ಯೆ, ಪ್ರಯಾಗರಾಜ್, ಚಿತ್ರಕೂಟ ಮತ್ತು ವಾರಣಾಸಿಗೆ ಭೇಟಿ ನೀಡಬಹುದಾಗಿದೆ. 

ಹೌದು, ಐ‌ಆರ್‌ಸಿ‌ಟಿ‌ಸಿ ಏಕ್ ಭಾರತ್ ಶ್ರೇಷ್ಠ ಭಾರತ್ ಅಡಿಯಲ್ಲಿ ಈ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಟೂರ್ ಪ್ಯಾಕೇಜ್‌ನಲ್ಲಿ ಭಕ್ತರು ಮೂರು ಜ್ಯೋತಿರ್ಲಿಂಗಗಳ ದರ್ಶನ ಪಡೆಯುತ್ತಾರೆ. ಐ‌ಆರ್‌ಸಿ‌ಟಿ‌ಸಿಯ ಈ ಪ್ರವಾಸ ಪ್ಯಾಕೇಜ್ ರಾಜ್‌ಕೋಟ್‌ನಿಂದ ಪ್ರಾರಂಭವಾಗಲಿದೆ.  ಐ‌ಆರ್‌ಸಿ‌ಟಿ‌ಸಿಯ ಈ ಪ್ರಸಿದ್ಧ ಪ್ರವಾಸಿ ಪ್ಯಾಕೇಜ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. 

ಇದನ್ನೂ ಓದಿ- 7th pay commission :ಈ ತಿಂಗಳಲ್ಲಿಯೇ ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ : ಖಾತೆ ಸೇರುವ ಒಟ್ಟು ಮೊತ್ತ ಎಷ್ಟು ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ

10 ದಿನಗಳ ಪ್ರವಾಸಿ ಪ್ಯಾಕೇಜ್: 
ಐ‌ಆರ್‌ಸಿ‌ಟಿ‌ಸಿಯ ಈ ಪ್ರವಾಸಿ ಪ್ಯಾಕೇಜ್ ಒಟ್ಟು 10 ದಿನಗಳವರೆಗಿನ ಪ್ಯಾಕೇಜ್ ಆಗಿರಲಿದೆ.  ಈ ಟೂರ್ ಪ್ಯಾಕೇಜ್‌ನ ಹೆಸರು " ಶ್ರೀ ರಾಮ ಜನ್ಮಭೂಮಿ ಅಯೋಧ್ಯೆ, ಪ್ರಯಾಗ್‌ರಾಜ್ ಸೇರಿದಂತೆ ಮೂರು ಜ್ಯೋತಿರ್ಲಿಂಗ ದರ್ಶನ". ಈ ಪ್ರವಾಸದ ಪ್ಯಾಕೇಜ್‌ನಲ್ಲಿ ಭಕ್ತರು ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಮೂಲಕ ಪ್ರಯಾಣಿಸುತ್ತಾರೆ. ಐ‌ಆರ್‌ಸಿ‌ಟಿ‌ಸಿಯ ಈ ಪ್ರವಾಸ ಪ್ಯಾಕೇಜ್ 9 ರಾತ್ರಿಗಳು ಮತ್ತು 10 ದಿನಗಳ ಪ್ರವಾಸವನ್ನು ಒಳಗೊಂಡಿರಲಿದೆ. 2024ರ ಫೆಬ್ರವರಿ 05ರಿಂಆರಂಭವಾಗಲಿರುವ ಈ ಪ್ರವಾಸದ ಪ್ಯಾಕೇಜ್‌ನಲ್ಲಿ, ಭಕ್ತರು ಅಯೋಧ್ಯೆ, ಪ್ರಯಾಗರಾಜ್, ಚಿತ್ರಕೂಟ, ವಾರಣಾಸಿ, ಉಜ್ಜಯಿನಿ ಮತ್ತು ನಾಸಿಕ್‌ನಲ್ಲಿರುವ ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡಬಹುದಾಗಿದೆ. 

ಐ‌ಆರ್‌ಸಿ‌ಟಿ‌ಸಿಯ ಈ ಪ್ರವಾಸಿ ಪ್ಯಾಕೇಜ್‌ನ ದರ: 
ಈ ಪ್ರವಾಸ ಪ್ಯಾಕೇಜ್‌ನ ಆರಂಭಿಕ  ಬೆಲೆ 20,500 ರೂ. ಆಗಿರಲಿದೆ. ಐ‌ಆರ್‌ಸಿ‌ಟಿ‌ಸಿಯ ಈ ಪ್ರವಾಸದ ಪ್ಯಾಕೇಜ್‌ನ ದರವು ವರ್ಗಕ್ಕೆ ಅನುಗುಣವಾಗಿ ಬದಲಾಗುತ್ತದೆ. ಪ್ರವಾಸಿಗರು ಆರ್ಥಿಕ ವರ್ಗ (SL),  ಕಂಫರ್ಟ್ ಕ್ಲಾಸ್‌ (3AC) ಮತ್ತು ಸುಪೀರಿಯರ್ ಕ್ಲಾಸ್‌ (2AC) ಗಳಲ್ಲಿ ತಮಗೆ ಅನುಕೂಲವಾದ ವರ್ಗಕ್ಕೆ ಟಿಕೆಟ್ ಕಾಯ್ದಿರಿಸಬಹುದು. 
>> ನೀವು ಎಕಾನಮಿ ಕ್ಲಾಸ್‌ನಲ್ಲಿ (ಸ್ಲೀಪರ್) ಪ್ರಯಾಣಿಸಿದರೆ, ಪ್ರತಿ ವ್ಯಕ್ತಿಗೆ 20,500 ರೂ. ವೆಚ್ಚವಾಗಲಿದೆ. 
>> ಈ ಪ್ರವಾಸ ಪ್ಯಾಕೇಜ್‌ನಲ್ಲಿ ಕಂಫರ್ಟ್ ಕ್ಲಾಸ್‌ನಲ್ಲಿ (3AC) ನೀವು ಪ್ರಯಾಣಿಸಿದರೆ, ಪ್ರತಿ ವ್ಯಕ್ತಿಗೆ 33,000 ರೂ.ದರವನ್ನು ಭರಿಸಬೇಕಾಗುತ್ತದೆ. 
>>  ಈ ಪ್ರವಾಸದ ಪ್ಯಾಕೇಜ್‌ನಲ್ಲಿ ನೀವು ಸುಪೀರಿಯರ್ ಕ್ಲಾಸ್‌ನಲ್ಲಿ (2AC) ಪ್ರಯಾಣಿಸಿದರೆ, ಪ್ರತಿ ವ್ಯಕ್ತಿಗೆ 46000 ರೂ. ವೆಚ್ಚವಾಗುತ್ತದೆ. 

ಇದನ್ನೂ ಓದಿ- Ram Mandir: ರಘುನಂದನ ಶ್ರೀರಾಮನ ಜೀವನದಿಂದ ಕಲಿಯಿರಿ ಫೈನಾನ್ಸಿಯಲ್ ಪ್ಲಾನಿಂಗ್ ಮಂತ್ರ, ನಿಮ್ಮ ಗಳಿಕೆ ರಕ್ಷಿಸುತ್ತಾನೆ ಭಗವಂತ

ಈ ಪ್ರವಾಸದ ಪ್ಯಾಕೇಜ್‌ನಲ್ಲಿ, ಪ್ರವಾಸವು ರಾಜ್‌ಕೋಟ್ - ಸುರೇಂದ್ರ ನಗರ - ವಿರಾಮ್‌ಗಮ್ - ಸಬರಮತಿ - ನಾಡಿಯಾಡ್ - ಆನಂದ್ - ಛಾಯಾಪುರಿ - ಗೋಧ್ರಾ - ದಾಹೋದ್ - ಮೇಘನಗರ ಮತ್ತು ರತ್ಲಂನಿಂದ ಇರುತ್ತದೆ. ಪ್ರವಾಸದ ಪ್ಯಾಕೇಜ್ ವಡೋದರಾ, ಆನಂದ್, ನಾಡಿಯಾಡ್, ಸಬರಮತಿ, ವಿರಾಮ್‌ಗಮ್, ಸುರೇಂದ್ರನಗರ, ರಾಜ್‌ಕೋಟ್, ಗೋಧ್ರಾ, ದಾಹೋದ್, ಮೇಘನಗರ ಮತ್ತು ರತ್ಲಂನಿಂದ ನಿರ್ಗಮಿಸುತ್ತದೆ. ಟೂರ್ ಪ್ಯಾಕೇಜ್‌ನಲ್ಲಿ ಭಕ್ತರಿಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಭೋಜನವನ್ನು ಒಳಗೊಂಡಿರುತ್ತದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News