ಬೆಂಗಳೂರು : ಕರೆನ್ಸಿ ನೋಟುಗಳಿಗೆ ಸಂಬಂಧಿಸಿದಂತೆ ದೇಶಾದ್ಯಂತ ವಿವಿಧ ರೀತಿಯ ಸುದ್ದಿಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ಸರ್ಕಾರ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದೆ. ಈ ಮಧ್ಯೆ, ಆರ್‌ಬಿಐ ಮಹತ್ವದ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ 'ಸ್ಟಾರ್' ಗುರುತು ಇರುವ 500 ರ ನೋಟಿನ ಬಗ್ಗೆ ಕೇಂದ್ರ ಬ್ಯಾಂಕ್ ಮಹತ್ವದ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. 
ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ 'ಸ್ಟಾರ್' ಗುರುತು ಮಾಡಿದ ನೋಟುಗಳ ಸಿಂಧುತ್ವದ ಬಗ್ಗೆ ಹೇಳಿಕೆ ನೀಡಿದೆ. 


COMMERCIAL BREAK
SCROLL TO CONTINUE READING

ಸ್ಟಾರ್ ಗುರುತು ಹಾಕಿದ ನೋಟುಗಳನ್ನು ಏಕೆ ನೀಡಲಾಗುತ್ತದೆ? : 
ತಪ್ಪಾಗಿ ಮುದ್ರಿತವಾಗಿರುವ ನೋಟಿನ ಬದಲಿಗೆ ಮುದ್ರಿಸಲಾಗಿರುವ ನೋಟುಗಳಲ್ಲಿ ಸ್ಟಾರ್ ಚಿಹ್ನೆಯನ್ನು ನೀಡಲಾಗಿದೆ.  ಈ ನೋಟುಗಳಲ್ಲಿ ಸರಣಿ ಸಂಖ್ಯೆಗಳ ಜಾಗದಲ್ಲಿ ಸ್ಟಾರ್ ಚಿಹ್ನೆಯನ್ನು ಹಾಕಲಾಗಿದೆ.  ನೋಟುಗಳ ಬಂಡಲ್‌ನಲ್ಲಿ ತಪ್ಪಾಗಿ ಮುದ್ರಿತ ನೋಟುಗಳಿಗೆ ಬದಲಾಗಿ  ಸ್ಟಾರ್ ಚಿಹ್ನೆ ಇರುವ ನೋಟುಗಳನ್ನು ನೀಡಲಾಗುತ್ತಿದೆ ಎಂದು ಆರ್ ಬಿಐ ಹೇಳಿದೆ. 


ಇದನ್ನೂ ಓದಿ : ತಿಂಗಳಿಗೆ 5 ರಿಂದ 10 ಲಕ್ಷ ರೂ.ಆದಾಯ ನೀಡುತ್ತೇ ಈ ಬಿಸ್ನೆಸ್! ಇಂದೇ ತಿಳಿದುಕೊಳ್ಳಿ


ನಕ್ಷತ್ರಗಳಿರುವ ನೋಟುಗಳು ಮಾನ್ಯವಾಗಿರುತ್ತವೆ : 
ತಮ್ಮ ನಂಬರ್ ಪ್ಯಾನೆಲ್‌ಗಳಲ್ಲಿ ಸ್ಟಾರ್ ಮಾರ್ಕ್‌ಗಳನ್ನು ಹೊಂದಿರುವ ನೋಟುಗಳ ಸಿಂಧುತ್ವದ ಬಗ್ಗೆ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸಂದೇಶಗಳು ಆತಂಕ ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಆರ್ ಬಿಐ ಈ ಆತಂಕವನ್ನು ದೂರ ಮಾಡಿದೆ. 


ಆರ್‌ಬಿಐ ನೀಡಿರುವ ಮಾಹಿತಿ : 
ಸ್ಟಾರ್‌ ಮಾರ್ಕ್‌ ಇರುವ ನೋಟು ಇತರ ಮಾನ್ಯ ನೋಟಿನಂತೆಯೇ  ಚಲಾವಣೆಯಲ್ಲಿ ಇರಲಿದೆ ಎಂದು ಆರ್‌ಬಿಐ ಹೇಳಿದೆ.  ನೋಟಿನ ಮೇಲಿರುವ ಸ್ಟಾರ್ ಮಾರ್ಕ್ ಆ ನೋಟು ಬದಲಾವಣೆ ಮಾಡಲಾದ ಅಥವಾ ಮರು ಮುದ್ರಣವಾದ ನೋಟು ಎನ್ನುವುದನ್ನು ಸೂಚಿಸುತ್ತದೆ. ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.  


ಇದನ್ನೂ ಓದಿ : ನಿಮ್ಮ ಖಾತೆಗೂ ಬಂದಿಲ್ಲವೇ 2 ಸಾವಿರ ರೂಪಾಯಿ! ಹಾಗಿದ್ದರೆ ತಕ್ಷಣ ಈ ನಂಬರ್ ಗೆ ಫೋನಾಯಿಸಿ !


ಸೆಪ್ಟೆಂಬರ್ 30 ರವರೆಗೆ  ನೋಟು ಬದಲಾವಣೆಗೆ ಅವಕಾಶ : 
2,000 ರೂಪಾಯಿಯ ನೋಟು ಹೊಂದಿರುವವರು ಅದನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು ಅಥವಾ ಬ್ಯಾಂಕ್‌ನಲ್ಲಿ  ಬದಲಾಯಿಸಬಹುದು ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ''ಸೆಪ್ಟೆಂಬರ್ 30ರ ಗಡುವಿನೊಳಗೆ ಬಹುತೇಕ 2000 ರೂ.ಗಳ ನೋಟುಗಳು ವಾಪಸಾಗುವ ಭರವಸೆ ಇದೆ'' ಎಂದು ಅವರು ಹೇಳಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.