ನಿಮ್ಮ ಖಾತೆಗೂ ಬಂದಿಲ್ಲವೇ 2 ಸಾವಿರ ರೂಪಾಯಿ! ಹಾಗಿದ್ದರೆ ತಕ್ಷಣ ಈ ನಂಬರ್ ಗೆ ಫೋನಾಯಿಸಿ !

PM Kisan 14th installment release :ಇಂದು ರಾಜಸ್ಥಾನದ ಸಿಕಾರ್ ನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ 14ನೇ ಕಂತಿನ ಹಣವನ್ನು  ಬಿಡುಗಡೆ ಮಾಡಿದ್ದಾರೆ. ನಿಮ್ಮ ಖಾತೆಗೆ ಈ ಹಣ ಬಂದಿಲ್ಲ ಎಂದಾದರೆ ತಕ್ಶನ್ ಈ ನಂಬರ್ ಗೆ ಕರೆ ಮಾಡಿ . 

Written by - Ranjitha R K | Last Updated : Jul 27, 2023, 01:22 PM IST
  • 8.5 ಕೋಟಿ ರೈತರಿಗೆ ಮೋದಿ ಗಿಫ್ಟ್
  • ಪಿಎಂ ಕಿಸಾನ್ ಸಮ್ಮಾನ್ ನಿಧಿಯ 14 ನೇ ಕಂತು ಬಿಡುಗಡೆ
  • ರಾಜಸ್ಥಾನದಿಂದ ಪ್ರಧಾನಿ ರೈತರ ಹಣ ಬಿಡುಗಡೆ
ನಿಮ್ಮ ಖಾತೆಗೂ ಬಂದಿಲ್ಲವೇ 2 ಸಾವಿರ ರೂಪಾಯಿ! ಹಾಗಿದ್ದರೆ ತಕ್ಷಣ ಈ ನಂಬರ್ ಗೆ ಫೋನಾಯಿಸಿ ! title=

PM Kisan 14th installment release : ಪ್ರಧಾನಿ ಮೋದಿ ಇಂದು ದೇಶದ 8.5 ಕೋಟಿ ರೈತರಿಗೆ ಉಡುಗೊರೆ ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ ಪಿಎಂ ಕಿಸಾನ್ ಸಮ್ಮಾನ್ ನಿಧಿ 14 ನೇ ಕಂತು ಬಿಡುಗಡೆಯಾಗಿದೆ. ನಿಮ್ಮ ಖಾತೆಗೂ ಪಿಎಂ ಕಿಸಾನ್‌ ಹಣ ಬಂದಿಲ್ಲ ಎಂದಾದರೆ   ಆತಂಕಗೊಳ್ಳುವ ಅಗತ್ಯವಿಲ್ಲ. ಖಾತೆಗೆ ಹಣ ವರ್ಗಾವಣೆಯಾಗದಿರುವ  ರೈತರು  ಈ ಒಂದು ನಂಬರ್ ‌ಗೆ ಕರೆ ಮಾಡಿದರೆ ಸಾಕು. ತಕ್ಷಣ ನಿಮ್ಮ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. 

ರಾಜಸ್ಥಾನದಿಂದ ಪ್ರಧಾನಿ ರೈತರ ಹಣ ಬಿಡುಗಡೆ :
ಇಂದು ರಾಜಸ್ಥಾನದ ಸಿಕಾರ್ ನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ 14ನೇ ಕಂತಿನ ಹಣವನ್ನು  ಬಿಡುಗಡೆ ಮಾಡಿದ್ದಾರೆ. ಈ ಹಣವನ್ನು ರೈತರ ಖಾತೆಗೆ ನೇರವಾಗಿ  ವರ್ಗಾಯಿಸಲಾಗಿದೆ. ಸರಕಾರ 8.5 ಕೋಟಿ ರೈತರ ಖಾತೆಗಳಿಗೆ 2000 ರೂ.  ಬಿಡುಗಡೆ ಮಾಡಿದೆ. 

ಇದನ್ನೂ ಓದಿ : ದಾಖಲೆ ಬೆಲೆಗೆ ಮಾರಾಟವಾದ ಹಳ್ಳಿಕಾರ್ ತಳಿಯ ಎರಡು ಹಲ್ಲಿನ ಒಂಟಿ ಎತ್ತು: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ನೀವು ಪಿಎಂ ಕಿಸಾನ್ ಹಣವನ್ನು ಸ್ವೀಕರಿಸಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಈ ರೀತಿ ಪರಿಶೀಲಿಸಿ  : 
>> ನೀವು ಹಣವನ್ನು ಪಡೆದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು  ನೀವು ಬೆನೆಫಿಶಿಯರಿ ಸ್ಟೇಟಸ್ ಮೂಲಕ ಕಂಡು ಹಿಡಿಯಬಹುದು. 
>> ಇದಕ್ಕಾಗಿ ನೀವು pmkisan.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. 
>> ಇದರ ನಂತರ, Farmers Corner ವಿಭಾಗದಲ್ಲಿ, ಬೆನೆಫಿಶಿಯರಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
>> ಈಗ ನೀವು ನಿಮ್ಮ ಮೊಬೈಲ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು. 
>> ನಂತರ Get Data ಮೇಲೆ  ಕ್ಲಿಕ್ ಮಾಡಿ. 
>> ಈಗ  ಬೆನೆಫಿಶಿಯರಿ ಸ್ಟೇಟಸ್  ಮೇಲೆ KYC ಯ ಮುಂದೆ NO ಎಂದು ಬರೆದರೆ,  ನಿಮ್ಮ ಕಂತು ಬಂದು ಸೇರಿಲ್ಲ ಎಂದರ್ಥ. 
>> ನಿಮ್ಮ ಇ-ಕೆವೈಸಿ ಅಪ್‌ಡೇಟ್ ಆಗಿರದಿದ್ದರೆ ನಿಮ್ಮ 14ನೇ ಕಂತಿನ ಹಣ  ಖಾತೆಗೆ ಸೇರುವುದಿಲ್ಲ. 

 ಲೆಕ್ಕಾಧಿಕಾರಿ ಮತ್ತು ಕೃಷಿ ಅಧಿಕಾರಿಯನ್ನು ಸಂಪರ್ಕಿಸಿ : 
ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿತ ರೈತರಿಗೆ ಈ ಯೋಜನೆಯ ಲಾಭವನ್ನು ನೀಡಲಾಗುತ್ತದೆ. ಆದರೆ, ನೀವು ನೋಂದಾಯಿತ ರೈತರಾಗಿದ್ದು, ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದಾದರೆ ಮೊದಲನೆಯದಾಗಿ  ಈ ಬಗ್ಗೆ  ನೋಂದಾಯಿಸಿಕೊಳ್ಳಬೇಕು. ಲೆಕ್ಕಾಧಿಕಾರಿ ಮತ್ತು ಕೃಷಿ ಅಧಿಕಾರಿಯನ್ನು ಸಂಪರ್ಕಿಸಿ. ಒಂದು ವೇಳೆ ಇಲ್ಲಿ ನಿಮಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ ಎಂದಾದರೆ ಸಂಬಂಧಿಸಿದ ಸಹಾಯವಾಣಿಗೆ ಕರೆ ಮಾಡಬಹುದು.

ಇದನ್ನೂ ಓದಿ : ಹಿರಿಯ ನಾಗರಿಕರಿಗಾಗಿ ಕೇಂದ್ರ ಸರ್ಕಾರದ ಯೋಜನೆ ! ಪ್ರತಿ ತಿಂಗಳು ಖಾತೆಗೆ 20,500 ರೂ. !

ನೀವು ಇಲ್ಲಿ ಸಂಪರ್ಕಿಸಬಹುದು : 
>> PM-KISAN ಹೆಲ್ಪ್ ಡೆಸ್ಕ್  ಸೋಮವಾರದಿಂದ ಶುಕ್ರವಾರದವರೆಗೆ ತೆರೆದಿರುತ್ತದೆ. ಇದರ ಹೊರತಾಗಿ, ನೀವು pmkisan-ict@gov.in
ಇ-ಮೇಲ್‌ನಲ್ಲಿಯೂ ಸಂಪರ್ಕಿಸಬಹುದು . ಇದು ಇನ್ನೂ ಕೆಲಸ ಮಾಡದಿದ್ದರೆ 011-23381092 (ನೇರ ಸಹಾಯವಾಣಿ) ಸಂಖ್ಯೆಗೆ ಕರೆ ಮಾಡಿ.

ಕೃಷಿ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, ನೀವು ಕಲ್ಯಾಣ ವಿಭಾಗದಲ್ಲಿ ಸಂಪರ್ಕಿಸಬಹುದು : 
, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವು ಯಾವುದೇ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ತಲುಪದಿದ್ದರೆ, ಅದನ್ನು ತಕ್ಷಣವೇ ಪರಿಹರಿಸಲಾಗುವುದು. ಇದಲ್ಲದೆ, ಈ ಯೋಜನೆಯ ಕಲ್ಯಾಣ ವಿಭಾಗವನ್ನು ಸಂಪರ್ಕಿಸಬಹುದು. 

>> PM ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
>> PM ಕಿಸಾನ್ ಸಹಾಯವಾಣಿ ಸಂಖ್ಯೆ: 155261
>> PM ಕಿಸಾನ್ ಲ್ಯಾಂಡ್‌ಲೈನ್ ಸಂಖ್ಯೆಗಳು: 011—23381092, 23382401
>> PM ಕಿಸಾನ್ ಹೊಸ ಸಹಾಯವಾಣಿ: 011-24300606,   0120-6025109

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News