ಬೆಂಗಳೂರು : ನೋಟು ಅಮಾನ್ಯೀಕರಣದ ನಂತರ ನೋಟುಗಳ ಬಗ್ಗೆ ಹಲವಾರು ರೀತಿಯ ಸುದ್ದಿಗಳು ಹೊರ ಬರುತ್ತಲೇ ಇವೆ. ಇದೀಗ 500 ರೂಪಾಯಿ ನೋಟಿಗೆ ಸಂಬಂಧಪಟ್ಟಂತೆ ಪ್ರಮುಖ ಸುದ್ದಿ ಹೊರ ಬಿದ್ದಿದೆ. ಹಾಗಿದ್ದರೆ 500 ರೂಪಾಯಿ ನೋಟಿನ ಬಗ್ಗೆ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿ ಏನು ನೋಡೋಣ.  


COMMERCIAL BREAK
SCROLL TO CONTINUE READING

ಚಲಾವಣೆಯಾಗುತ್ತಿವೆ 2 ಬಗೆಯ ನೋಟುಗಳು :
ಮಾರುಕಟ್ಟೆಯಲ್ಲಿ ಎರಡು  ರೀತಿಯ 500 ರೂ.ಗಳ ನೋಟುಗಳು ಕಂಡು ಬರುತ್ತಿವೆ. ಎರಡೂ ನೋಟುಗಳ ನಡುವೆ ಸ್ವಲ್ಪ ವ್ಯತ್ಯಾಸವಿದೆ. ಈ ಎರಡು ಬಗೆಯ ನೋಟುಗಳಲ್ಲಿ ಒಂದು ನಕಲಿ ಒಂದು ಅಸಲಿ ಎಂದು ಹೇಳಲಾಗುತ್ತಿದೆ. . ನೋಟಿನ ಅಸಲಿ ನಕಲಿಯ ಮಾಹಿತಿ ನೀಡುವ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 


ಇದನ್ನೂ ಓದಿ : ವಿಶ್ವದಲ್ಲೇ ಇದೇ ಮೊದಲು: ಈ ಎಟಿಎಂನಿಂದ ಹಣ ಅಲ್ಲ, ಚಿನ್ನದ ನಾಣ್ಯ ಹೊರಬರುತ್ತೆ!


ವಿಡಿಯೋದಲ್ಲಿ ಹೇಳಿದ್ದೇನು? :
 ನಕಲಿ ನೋಟಿನ ಬಗ್ಗೆ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಯಾವ 500 ರೂಪಾಯಿಯ ನೋಟಿನಲ್ಲಿ ಹಸಿರು ಪಟ್ಟಿಯು RBI ಗವರ್ನರ್ ಸಹಿಯ ಮೂಲಕ ಹಾದುಹೋಗುತ್ತದೆ ಅಥವಾ ಗಾಂಧೀಜಿಯ ಚಿತ್ರಕ್ಕೆ ತುಂಬಾ ಹತ್ತಿರದಲ್ಲಿದೆ ಅಂಥಹ ನೋಟುಗಳನ್ನು ಸ್ವೀಕರಿಸಬಾರದು ಎಂದು ವಿಡಿಯೋದಲ್ಲಿ ಹೇಳಲಾಗಿದೆ.  ಆದರೆ ಈ ವಿಡಿಯೋವನ್ನು ಪಿಐಬಿ ಪರಿಶೀಲನೆ ನಡೆಸಿದೆ.  ಇದಾದ ನಂತರ ಈ ವಿಡಿಯೋದಲ್ಲಿ ಹೇಳಿರುವುದು ಸುಳ್ಳು ಎನ್ನುವುದನ್ನು ಖಚಿತಪಡಿಸಲಾಗಿದೆ. 


ಎರಡೂ ವಿಧದ ನೋಟುಗಳು ಮಾನ್ಯವಾಗಿರುತ್ತವೆ :
ಈ ವಿಡಿಯೋವನ್ನು ಪರಿಶೀಲಿಸಿದ ನಂತರ ಈ ವಿಡಿಯೋ ಸಂಪೂರ್ಣ ನಕಲಿ ಎಂದು ತಿಳಿದು ಬಂದಿದೆ. ಮಾರುಕಟ್ಟೆಯಲ್ಲಿ ಚಾಲನೆಯಲ್ಲಿರುವ ಎರಡೂ ರೀತಿಯ ನೋಟುಗಳು ಮಾನ್ಯವಾಗಿರುತ್ತವೆ. ನಿಮ್ಮ ಬಳಿ ಯಾವುದೇ ನೋಟ್ ಇದ್ದರೂ ಚಿಂತಿಸಬೇಕಾಗಿಲ್ಲ. ಮಾರುಕಟ್ಟೆಯಲ್ಲಿ ಎರಡೂ ಬಗೆಯ ನೋಟುಗಳು ಚಲಾವಣೆಯಲ್ಲಿವೆ ಎಂದು ಆರ್‌ಬಿಐ ಹೇಳಿದೆ. 


ಇದನ್ನೂ ಓದಿ : Arecanut today price: ಕರ್ನಾಟಕದ ಮಾರುಕಟ್ಟೆಯಲ್ಲಿ ಮತ್ತೆ ಕುಸಿತ ಕಂಡ ಅಡಿಕೆ ಧಾರಣೆ


ಯಾವುದೇ ರೀತಿಯ ವಿಡಿಯೋ ಅಥವಾ ಸುದ್ದಿಗಳು ವೈರಲ್ ಆಗುತ್ತಿದೆ ಎಂದರೆ ಅದನ್ನು ತಕ್ಷಣ ನಂಬುವ ಅಗತ್ಯವಿಲ್ಲ.  ಅಲ್ಲದೆ ಆ ಸಂದೇಶಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಹೋಗಬೇಡಿ. ಅಲ್ಲದೆ, ಯಾವುದೇ ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾದರೆ,  ಇದಕ್ಕಾಗಿ ನೀವು ಅಧಿಕೃತ ಲಿಂಕ್ https://factcheck.pib.gov.in/ ಗೆ ಭೇಟಿ ನೀಡಬೇಕು . ಇದಲ್ಲದೆ, ನಿಮ್ಮ ಬಾಲಿ ಇರುವ ವೀಡಿಯೊವನ್ನು  WhatsApp ಸಂಖ್ಯೆ +918799711259 ಅಥವಾ pibfactcheck@gmail.comಗೂ ಮೇಲ್ ಮಾಡಬಹುದು.  


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.