ಅಗ್ಗದ ಮದ್ಯ ವಿಷಯದಲ್ಲಿ ಯಾವ ರಾಜ್ಯ ನಂಬರ್ 1 ಗೊತ್ತಾ? ಕರ್ನಾಟಕದಲ್ಲಿ ಎಷ್ಟು ತೆರಿಗೆ ಬೀಳುತ್ತೇ?
Where We Get Cheapest Liquor In India: ಮದ್ಯದ ವಿಷಯದಲ್ಲಿ ವಿವಿಧ ರಾಜ್ಯಗಳು ವಿಭಿನ್ನ ನೀತಿಗಳನ್ನು ಹೊಂದಿವೆ. ಅನೇಕ ರಾಜ್ಯಗಳಲ್ಲಿ ಮದ್ಯವು ಅಗ್ಗದ ದರದಲ್ಲಿ ಸಿಗುತ್ತದೆ. ಇದೇ ವೇಳೆ, ಇದು ಅನೇಕ ರಾಜ್ಯಗಳಲ್ಲಿ ಹಲವು ಪಟ್ಟು ಹೆಚ್ಚು ದುಬಾರಿಯಾಗಿದೆ. ಇಂಟರ್‌ನ್ಯಾಶನಲ್ ಸ್ಪಿರಿಟ್ಸ್ ಮತ್ತು ವೈನ್ ಅಸೋಸಿಯೇಶನ್‌ನ ಇತ್ತೀಚಿನ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ವಿಸ್ಕಿ, ರಮ್, ವೋಡ್ಕಾ ಮತ್ತು ಜಿನ್ ಬಾಟಲಿಗಳ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ Business News In Kannada.
ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಮದ್ಯವನ್ನು ನಿಷೇಧಿಸಲಾಗಿದೆ. ಇದೇ ವೇಳೆ, ಅನೇಕ ರಾಜ್ಯಗಳಲ್ಲಿ ಮದ್ಯವು ಅತ್ಯಂತ ಅಗ್ಗದ ದರದಲ್ಲಿ ಲಭ್ಯವಿದೆ. ದೇಶದಲ್ಲಿ ಅಗ್ಗದ ಮದ್ಯದ ವಿಷಯದಲ್ಲಿ ಗೋವಾ ಮೊದಲ ಸ್ಥಾನದಲ್ಲಿದೆ. ಇನ್ನೊಂದೆಡೆ, ಕರ್ನಾಟಕದಲ್ಲಿ ಅತ್ಯಂತ ದುಬಾರಿ ಮದ್ಯ ಸಿಗುತ್ತದೆ. ಉದಾಹರಣೆಗೆ, ಗೋವಾದಲ್ಲಿ 100 ರೂ.ಗೆ ಬಾಟಲಿ ಲಭ್ಯವಿದೆ. ಅದೇ ಬಾಟಲಿ ದೆಹಲಿಯಲ್ಲಿ 134 ರೂ.ಗೆ ಲಭ್ಯವಿದೆ. ಕರ್ನಾಟಕದಲ್ಲಿ ಅದೇ ಮದ್ಯದ ಬಾಟಲಿಯ ಬೆಲೆ 513 ರೂ. ಇಂಟರ್‌ನ್ಯಾಶನಲ್ ಸ್ಪಿರಿಟ್ಸ್ ಮತ್ತು ವೈನ್ ಅಸೋಸಿಯೇಶನ್‌ನ ಇತ್ತೀಚಿನ ವರದಿಯ ಪ್ರಕಾರ, ವಿಸ್ಕಿ, ರಮ್, ವೋಡ್ಕಾ ಮತ್ತು ಜಿನ್ ಬಾಟಲಿಗಳ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.
ಗೋವಾಕ್ಕಿಂತ ಐದು ಪಟ್ಟು ಹೆಚ್ಚು ಬೆಲೆ
ಕರ್ನಾಟಕದಲ್ಲಿ ವಿಸ್ಕಿ, ರಮ್, ವೋಡ್ಕಾ ಮತ್ತು ಜಿನ್‌ಗಳ ಬೆಲೆ ಗೋವಾಕ್ಕಿಂತ ಐದು ಪಟ್ಟು ಹೆಚ್ಚಾಗಿವೆ. ಗೋವಾಕ್ಕೆ ಹೋಲಿಸಿದರೆ, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಬೆಲೆಗಳು ಎರಡು ಪಟ್ಟು ಹೆಚ್ಚು. ಗೋವಾದಲ್ಲಿ MRP ಮೇಲೆ ಶೇ. 49 ತೆರಿಗೆ ಇದೆ. ಕರ್ನಾಟಕದಲ್ಲಿ MRP ಮೇಲೆ 83% ತೆರಿಗೆ ಇದೆ. ದೆಹಲಿಯಲ್ಲಿ MRP ಮೇಲೆ 62% ತೆರಿಗೆ ಇದೆ. ಮಹಾರಾಷ್ಟ್ರದಲ್ಲಿ 71% ತೆರಿಗೆ ಇದೆ. ರಾಜ್ಯಗಳಾದ್ಯಂತ ತೆರಿಗೆ ದರಗಳಲ್ಲಿನ ವ್ಯತ್ಯಾಸದಿಂದಾಗಿ ದೆಹಲಿ ಮತ್ತು ಮುಂಬೈನಲ್ಲಿ ಸ್ಕಾಚ್ ಮತ್ತು ವಿಸ್ಕಿ ಬ್ರಾಂಡ್‌ಗಳ ಬೆಲೆಗಳಲ್ಲಿ ಸುಮಾರು ಶೇ.20 ರಷ್ಟು ವ್ಯತ್ಯಾಸವಿದೆ.
ವಿವಿಧ ರಾಜ್ಯಗಳಲ್ಲಿ 750 ಮಿಲಿ ಮದ್ಯದ ಬಾಟಲಿಯ ಬೆಲೆ
ಇಂಟರ್‌ನ್ಯಾಶನಲ್ ಸ್ಪಿರಿಟ್ಸ್ ಅಂಡ್ ವೈನ್ ಅಸೋಸಿಯೇಷನ್‌ನ ಅಂಕಿಅಂಶಗಳ ಪ್ರಕಾರ, 750 ಮಿಲಿ ಜಾನಿ ವಾಕರ್ ಬೆಲೆ ದೆಹಲಿಯಲ್ಲಿ 3100 ರೂ., ಮುಂಬೈನಲ್ಲಿ 4000 ರೂ. ಮತ್ತು ಗೋವಾದಲ್ಲಿ 3250 ರೂ. ಗಲಾಗಿದೆ. 750 ಮಿಲಿಯ ಜಾಕ್ ಡೇನಿಯಲ್ಸ್ ಓಲ್ಡ್ ನಂಬರ್ 7 ವಿಸ್ಕಿಯ ಬೆಲೆ ದೆಹಲಿಯಲ್ಲಿ 2,780 ರೂ., ಮುಂಬೈನಲ್ಲಿ 3,250 ರೂ. ಮತ್ತು ಗೋವಾದಲ್ಲಿ 2800 ರೂ.ಗಳಾಗಿದೆ. ಪಾಲ್ ಜಾನ್ ನ 750 ಮಿಲಿ ಬಾಟಲಿಯ ಬೆಲೆ ದೆಹಲಿಯಲ್ಲಿ 2500 ರೂ., ಮುಂಬೈನಲ್ಲಿ 4250 ರೂ., ಗೋವಾದಲ್ಲಿ 2100 ರೂ. ಗಳಾಗಿದೆ. ಬ್ಲ್ಯಾಕ್ ಡಾಗ್ ಸೆಂಟಿನರಿ ಸ್ಕಾಚ್‌ನ 750 ಮಿಲಿ ಬಾಟಲಿಯನ್ನು ದೆಹಲಿಯಲ್ಲಿ 1580 ರೂ., ಮುಂಬೈನಲ್ಲಿ 2080 ರೂ. ಮತ್ತು ಗೋವಾದಲ್ಲಿ 1390 ರೂ.ಗೆ ಮಾರಾಟ ಮಾಡಲಾಗುತ್ತದೆ.
ಇದನ್ನೂ ಓದಿ-ವ್ಯವಸ್ಥಿತ ಹೂಡಿಕೆಯ ಯೋಜನೆಗಳಲ್ಲಿ ಎಷ್ಟು ವಿಧಗಳಿವೆ ನಿಮಗೆ ಗೊತ್ತಾ !
ಕರ್ನಾಟಕದಲ್ಲಿ ಎಂಆರ್‌ಪಿ ಮೇಲೆ ಶೇ.83ರಷ್ಟು ತೆರಿಗೆ ಇದೆ. ತೆಲಂಗಾಣದಲ್ಲಿ ಶೇ.68, ಮಹಾರಾಷ್ಟ್ರದಲ್ಲಿ ಶೇ.71, ರಾಜಸ್ಥಾನದಲ್ಲಿ ಶೇ.69, ಉತ್ತರ ಪ್ರದೇಶದಲ್ಲಿ ಶೇ.66, ಹರಿಯಾಣದಲ್ಲಿ ಶೇ.47, ದೆಹಲಿಯಲ್ಲಿ ಶೇ.62 ಮತ್ತು ಗೋವಾದಲ್ಲಿ ಶೇ.49ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.