ಸ್ಟೇಟ್ ಬ್ಯಾಂಕ್ ಸೇರಿದಂತೆ 3 ಬ್ಯಾಂಕ್ ಗಳಿಗೆ ಭಾರಿ ದಂಡ ವಿಧಿಸಿದ ಆರ್ಬಿಐ, ನೀವು ಗ್ರಾಹಕರಾಗಿದ್ದಾರೆ ಸುದ್ದಿ ತಪ್ಪದೆ ಓದಿ!

RBI Action: ಮಾರ್ಗಸೂಚಿಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಅನುಸರಿಸದ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಇಂಡಿಯನ್ ಬ್ಯಾಂಕ್ ಹಾಗೂ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ಗಳಿಗೆ ಆರ್‌ಬಿಐ ಭಾರಿ ದಂಡ ವಿಧಿಸಿದೆ Business News In Kannada.  

Written by - Nitin Tabib | Last Updated : Sep 25, 2023, 08:41 PM IST
  • ಸೆಂಟ್ರಲ್ ಬ್ಯಾಂಕ್, ಫೆಡ್‌ಬ್ಯಾಂಕ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ ಗೂ ಕೂಡ 8.80 ಲಕ್ಷ ದಂಡವನ್ನೂ ವಿಧಿಸಿದೆ.
  • ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಲ್ಲಿ (ಎನ್‌ಬಿಎಫ್‌ಸಿ) ವಂಚನೆಯನ್ನು ತಡೆಗಟ್ಟಲು ಸಂಬಂಧಿಸಿದ ಕೆಲವು ನಿಬಂಧನೆಗಳನ್ನು ಅನುಸರಿಸದಿದ್ದಕ್ಕಾಗಿ ಈ ದಂಡವನ್ನು ವಿಧಿಸಲಾಗಿದೆ.
  • ಆರ್‌ಬಿಐನ ಈ ನಿರ್ಧಾರದಿಂದ ಬ್ಯಾಂಕ್ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಕೇಂದ್ರೀಯ ಬ್ಯಾಂಕ್ ಸ್ಪಷ್ಟಪಡಿಸಿದೆ.
ಸ್ಟೇಟ್ ಬ್ಯಾಂಕ್ ಸೇರಿದಂತೆ 3 ಬ್ಯಾಂಕ್ ಗಳಿಗೆ ಭಾರಿ ದಂಡ ವಿಧಿಸಿದ ಆರ್ಬಿಐ, ನೀವು ಗ್ರಾಹಕರಾಗಿದ್ದಾರೆ ಸುದ್ದಿ ತಪ್ಪದೆ ಓದಿ! title=

ಬೆಂಗಳೂರು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿಯಮಗಳನ್ನು ನಿರ್ಲಕ್ಷಿಸಿದ ಕಾರಣ ಸಾರ್ವಜನಿಕ ವಲಯದ ಮೂರು ಬ್ಯಾಂಕ್‌ಗಳಿಗೆ ಭಾರಿ ದಂಡ ವಿಧಿಸಿದೆ. ದಂಡ ವಿಧಿಸಿದ ಬ್ಯಾಂಕ್‌ಗಳಲ್ಲಿ ದೊಡ್ಡ ಹೆಸರುಗಳು ಶಾಮೀಲಾಗಿವೆ (Business News In Kannada). ಮಾರ್ಗಸೂಚಿಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಅನುಸರಿಸದ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಇಂಡಿಯನ್ ಬ್ಯಾಂಕ್ ಹಾಗೂ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ಗಳಿಗೆ ಆರ್‌ಬಿಐ ದಂಡ ವಿಧಿಸಿದೆ.

ಎಸ್‌ಬಿಐಗೆ 1.3 ಕೋಟಿ ರೂ ದಂಡ
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐಗೆ ಕೇಂದ್ರ ಬ್ಯಾಂಕ್ 1.3 ಕೋಟಿ ರೂಪಾಯಿ ದಂಡ ವಿಧಿಸಿದೆ. 'ಸಾಲಗಳು ಮತ್ತು ಮುಂಗಡಗಳು ಶಾಸನಬದ್ಧ ಹಾಗೂ ಇತರ ನಿರ್ಬಂಧಗಳು' ಮತ್ತು ಗುಂಪಿನೊಳಗಿನ ವಹಿವಾಟುಗಳು ಮತ್ತು ಸಾಲಗಳ ನಿರ್ವಹಣೆಯ ಕುರಿತು ನೀಡಲಾದ ಸೂಚನೆಗಳ ಕೆಲವು ನಿಬಂಧನೆಗಳನ್ನು ಅನುಸರಿಸದಿದ್ದಕ್ಕಾಗಿ ಈ ವಿತ್ತೀಯ ದಂಡವನ್ನು ವಿಧಿಸಲಾಗಿದೆ.

ಇಂಡಿಯನ್ ಬ್ಯಾಂಕ್‌ಗೆ ಎಷ್ಟು ದಂಡ
ಮತ್ತೊಂದೆಡೆ ಇಂಡಿಯನ್ ಬ್ಯಾಂಕ್ ಗೂ ಕೂಡ 'ಸಾಲಗಳು ಮತ್ತು ಮುಂಗಡಗಳ ಶಾಸನಬದ್ಧ ಹಾಗೂ  ಇತರ ನಿರ್ಬಂಧಗಳು', KYC ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನಗಳು, 2016 ರ ಕೆಲವು ನಿಬಂಧನೆಗಳನ್ನು ಅನುಸರಿಸದಿದ್ದಕ್ಕಾಗಿ 1.62 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು RBI ಹೇಳಿದೆ.

ಇದನ್ನೂ ಓದಿ-ವ್ಯವಸ್ಥಿತ ಹೂಡಿಕೆಯ ಯೋಜನೆಗಳಲ್ಲಿ ಎಷ್ಟು ವಿಧಗಳಿವೆ ನಿಮಗೆ ಗೊತ್ತಾ !

ಇದಲ್ಲದೇ ಪಂಜಾಬ್ & ಸಿಂಧ್ ಬ್ಯಾಂಕ್ ಗೆ 1 ಕೋಟಿ ರೂ.  ದಂಡ ವಿಧಿಸಲಾಗಿದೆ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ ಯೋಜನೆಯ ಕೆಲವು ನಿಬಂಧನೆಗಳನ್ನು ಅನುಸರಿಸದಿದ್ದಕ್ಕಾಗಿ ಈ ದಂಡವನ್ನು ವಿಧಿಸಲಾಗಿದೆ.

ಇದನ್ನೂ ಓದಿ-Mutual Fund ಬಳಕೆದಾರರು ಮುಂದಿನ 7 ದಿನಗಳಲ್ಲಿ ಈ ಕೆಲಸ ಮಾಡದೆ ಹೋದ್ರೆ...!

ಈ ಎನ್‌ಬಿಎಫ್‌ಸಿಗೆ 8.80 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ
ಸೆಂಟ್ರಲ್ ಬ್ಯಾಂಕ್,  ಫೆಡ್‌ಬ್ಯಾಂಕ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ ಗೂ ಕೂಡ 8.80 ಲಕ್ಷ ದಂಡವನ್ನೂ ವಿಧಿಸಿದೆ. ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಲ್ಲಿ (ಎನ್‌ಬಿಎಫ್‌ಸಿ) ವಂಚನೆಯನ್ನು ತಡೆಗಟ್ಟಲು ಸಂಬಂಧಿಸಿದ ಕೆಲವು ನಿಬಂಧನೆಗಳನ್ನು ಅನುಸರಿಸದಿದ್ದಕ್ಕಾಗಿ ಈ ದಂಡವನ್ನು ವಿಧಿಸಲಾಗಿದೆ. ಆರ್‌ಬಿಐನ ಈ ನಿರ್ಧಾರದಿಂದ ಬ್ಯಾಂಕ್ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಕೇಂದ್ರೀಯ ಬ್ಯಾಂಕ್ ಸ್ಪಷ್ಟಪಡಿಸಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News