ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಚ್ಚುವರಿ ಬಡ್ಡಿಯ ಲಾಭ ಪಡೆಯಿರಿ, ಆರ್ಬಿಐ ಹೇಳಿದ್ದೇನು?
Government Of India Floating Rate Bond: ಸಾಮಾನ್ಯವಾಗಿ ಸಿಕ್ಯೋರಿಟಿ ಬಾಂಡ್ ಗಳನ್ನು ಫ್ಲೋಟಿಂಗ್ ರೇಟ್ ಬಾಂಡ್ ಗಳೆಂದು ಕರೆಯುತ್ತಾರೆ. ಇವುಗಳ ಮೇಲೆ ಯಾವುದೇ ನಿಶ್ಚಿತ ಕೂಪನ್ ರೇಟ್ ಅಥವಾ ಬಡ್ಡಿದರ ಇರುವುದಿಲ್ಲ. ಇದಕ್ಕೆ ಒಂದೇ ರೀತಿಯ ಅಲ್ಲ ಹಲವು ರೀತಿಯ ಕೂಪನ್ ರೇಟ್ ಗಳಿರುತ್ತವೆ. ಮೊದಲೇ ನಿರ್ಧರಿಸಿದಂತೆ ಒಂದು ನಿಶ್ಚಿತ ಸಮಯದ ನಂತರ ಅವುಗಳನ್ನು ಪುನಃ ಪರಿಷ್ಕರಿಸಲಾಗುತ್ತದೆ. ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ಈ ಬಾಂಡ್ ಗಳ ಬಡ್ಡಿ ದರ ಪರಿಶರಿಸಿದೆ. ಪ್ರಸ್ತುತ ಈ ಬಾಂಡ್ ಗಳ ಮೇಲೆ ಎಷ್ಟು ಬಡ್ಡಿ ಸಿಗುತ್ತಿದೆ ತಿಳಿದುಕೊಳ್ಳೋಣ ಬನ್ನಿ,
RBI Floating Rate Bond: ನೀವು ಸಹ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದರೆ, ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗಷ್ಟೇ ನಿಮಗಾಗಿ ಒಂದು ಮಹತ್ವದ ಘೋಷಣೆ ಮಾಡಿದೆ. RBI ಕೇಂದ್ರ ಸರ್ಕಾರದ ಫ್ಲೋಟಿಂಗ್ ರೇಟ್ ಬಾಂಡ್, 2031 (ಎಫ್ಆರ್ಬಿ 2031) ಬಡ್ಡಿ ದರವನ್ನು ಪರಿಷ್ಕರಿಸಿದ್ದು, ಈ ಬಡ್ಡಿ ದರಗಳು ಡಿಸೆಂಬರ್ 7, 2022 ರಿಂದ ಜೂನ್ 6, 2023 ರವರೆಗೆ ಅನ್ವಯಿಸುತ್ತದೆ. ಆರ್ ಬಿಐ ನೀಡಿರುವ ಮಾಹಿತಿ ಪ್ರಕಾರ ಈ ಬಾರಿ ಈ ಬಡ್ಡಿ ದರ ವಾರ್ಷಿಕ ಶೇ.7.69 ರಷ್ಟು ಇರಲಿದೆ ಎಂದು ಹೇಳಿದೆ.
ಇದನ್ನೂ ಓದಿ-ದೇಶದ ಕೋಟ್ಯಾಂತರ ಸಣ್ಣ ವ್ಯಾಪಾರಿಗಳಿಗೊಂದು ಭಾರಿ ನೆಮ್ಮದಿಯ ಸುದ್ದಿ!
ಬಡ್ಡಿಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಈ ಕುರಿತು ತನ್ನ ಹೇಳಿಕೆಯಲ್ಲಿ ಮಾಹಿತಿಯನ್ನು ನೀಡಿರುವ ಆರ್ಬಿಐ, 'ಎಫ್ ಆರ್ ಬಿ 2031ರಲ್ಲಿ ಒಂದು ಕೂಪನ್ ಇರುತ್ತದೆ ಮತ್ತು ಅದರ ಮೂಲ ಮೌಲ್ಯ 182 ದಿನಗಳ ಟಿ -ಬಿಲ್ಸ್ ಗಳ ಹಿಂದಿನ ಮೂರು ಹರಾಜುಗಳ (ದರ ನಿಗದಿಯ ದಿನ ಅಂದರೆ 7 ಡಿಸೆಂಬರ್ 2022 ರಿಂದ) ವೆಟೆಡ್ ಎವರೆಜ್ ಈಲ್ಡಗೆ ಸಮನಾಗಿರುತ್ತದೆ. ಈ ವೆಟೆಡ್ ಎವರೇಜ್ ಯೀಲ್ಡ ಅನ್ನು ಒಂದು ವರ್ಷದಲ್ಲಿನ 365 ದಿನಗಳ ಲೆಕ್ಕಾಚಾರದಲ್ಲಿ ನಿರ್ಧರಿಸಲಾಗುತ್ತದೆ' ಎಂದು ಹೇಳಿದೆ.
ಇದನ್ನೂ ಓದಿ-LIC ಪಾಲಸಿ ಹೊಂದಿರುವವರಿಗೆ ಬಿಗ್ ಶಾಕ್... ಇನ್ಮುಂದೆ ಪಾಲಸಿಗಳ ಮೇಲೆ ಸಿಗಲ್ಲ ಈ ಲಾಭ!
ಏನಿದು ಫ್ಲೋಟಿಂಗ್ ಬಾಂಡ್?
ಸಾಮಾನ್ಯವಾಗಿ ಸಿಕ್ಯೋರಿಟಿ ಬಾಂಡ್ ಗಳನ್ನು ಫ್ಲೋಟಿಂಗ್ ರೇಟ್ ಬಾಂಡ್ ಗಳೆಂದು ಕರೆಯುತ್ತಾರೆ. ಇವುಗಳ ಮೇಲೆ ಯಾವುದೇ ನಿಶ್ಚಿತ ಕೂಪನ್ ರೇಟ್ ಅಥವಾ ಬಡ್ಡಿದರ ಇರುವುದಿಲ್ಲ. ಇದಕ್ಕೆ ಒಂದೇ ರೀತಿಯ ಅಲ್ಲ ಹಲವು ರೀತಿಯ ಕೂಪನ್ ರೇಟ್ ಗಳಿರುತ್ತವೆ. ಮೊದಲೇ ನಿರ್ಧರಿಸಿದಂತೆ ಒಂದು ನಿಶ್ಚಿತ ಸಮಯದ ನಂತರ ಅವುಗಳನ್ನು ಮರುಹೊಂದಿಸಲಾಗುತ್ತದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.