Income Tax Alert! ಹೊಸ ಪೋರ್ಟಲ್ ನಲ್ಲಿ ತಾಂತ್ರಿಕ ಅಡಚಣೆ, 15CA ಹಾಗೂ 15CB ಅರ್ಜಿ ಸಲ್ಲಿಕೆಯ ಗಡುವು ವಿಸ್ತರಣೆ
Income Tax Alert! ಆದಾಯ ತೆರಿಗೆ ಇಲಾಖೆ ತನ್ನ ಹೊಸ ಇ-ಫೈಲಿಂಗ್ ಪೋರ್ಟಲ್ ಅನ್ನು ಜೂನ್ 7, 2021 ರಂದು ಬಿಡುಗಡೆಗೊಳಿಸಿದೆ. ಆದರೆ, ಹೊಸ ಪೋರ್ಟಲ್ ನಲ್ಲಿ ಬಳಕೆದಾರರಿಗೆ ನಿರಂತರವಾಗಿ ತಾಂತ್ರಿಕ ದೋಷಗಳು ಎದುರಾಗುತ್ತಿವೆ.
Income Tax Alert! ಕೆಲ ದಿನಗಳ ಹಿಂದೆಯಷ್ಟೇ ಆದಾಯ ತೆರಿಗೆ ಇಲಾಖೆ (Income Tax Department)ತನ್ನ ಹೊಸ ವೆಬ್ಸೈಟ್ (New e-Filing Portal)ಬಿಡುಗಡೆ ಮಾಡಿತ್ತು. ಈ ಹೊಸ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಆನ್ಲೈನ್ ಫಾರ್ಮ್ ಸಲ್ಲಿಸುವಿಕೆಯಲ್ಲಿ (Online Form Submission) ಅಡಚಣೆ ಎದುರಾಗುತ್ತಿರುವ ಕುರಿತು ಹಲವು ತೆರಿಗೆ ಪಾವತಿದಾರರು ದೂರಿದ್ದಾರೆ. ಈ ಹಿನ್ನೆಲೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಿಸ್ (Central Board Of Direct Taxes) 15CA ಹಾಗೂ 15CB ಫಾರ್ಮ್ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಿದೆ. CBDT ಪ್ರಕಾರ ಇದೀಗ ಈ ಎರಡೂ ಫಾರ್ಮ್ ಗಳನ್ನು ಅಧಿಕೃತ ಡೀಲರ್ ಗಳ ಬಳಿ ವೈಯಕ್ತಿಕ ಫಾರ್ಮ್ಯಾಟ್ ನಲ್ಲಿ ಜೂನ್ 30, 2021ರವರೆಗೆ ಸಲ್ಲಿಸಬಹುದಾಗಿದೆ. ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ಪೋರ್ಟಲ್ https://incometax.gov.in ಬಿಡುಗಡೆಯಾದಾಗಿನಿಂದಲೇ ತೆರಿಗೆ ಪಾವತಿದಾರರು ನಿರಂತರವಾಗಿ ದೂರು ನೀಡುತ್ತಿದ್ದಾರೆ.
ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ, ಫಾರ್ಮ್ 15CA/15CB ಗಳನ್ನು ಆನ್ಲೈನ್ ನಲ್ಲಿಯೇ ಸಲ್ಲಿಸುವುದು ಅನಿವಾರ್ಯವಾಗಿದೆ. ಪ್ರಸ್ತುತ ತೆರಿಗೆ ಪಾವತಿದಾರರಿಗೆ ಫಾರೆನ್ ರೆಮಿಟೆನ್ಸ್ ಪ್ರಕರಣಗಳಲ್ಲಿ ಇ-ಫೈಲಿಂಗ್ ಪೋರ್ಟಲ್ ಮೇಲೆ ಫಾರ್ಮ್ 15CA ಹಾಗೂ 15CB ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಸರ್ಟಿಫಿಕೆಟ್ (CA Certificate) ಅಪ್ಲೋಡ್ ಮಾಡಬೇಕಾಗುತ್ತದೆ. ಬಳಿಕ ಈ ಕಾಪಿಯನ್ನು ಅಧಿಕೃತ ಡೀಲರ್ ಬಳಿ ಸಬ್ಮಿಟ್ ಮಾಡಬೇಕು.
ಇದನ್ನೂ ಓದಿ- PAN-Aadhaar Link: ಜೂನ್ 30ರೊಳಗೆ ಕೆಲಸ ಮಾಡದಿದ್ದಲ್ಲಿ ತೆರಬೇಕಾಗುತ್ತದೆ ಭಾರೀ ದಂಡ
ಅಧಿಕೃತ ಡೀಲರ್ ಬಳಿ ಜೂನ್ 30ರವರೆಗೆ ಫಾರ್ಮ್ ಸಲ್ಲಿಸಬೇಕು
ಈ ಕುರಿತು ಹೇಳಿಕೆ ಹೊರಡಿಸಿರುವ ಕೇಂದ್ರ ವಿತ್ತ ಸಚಿವಾಲಯ ಹೊಸ ಇ-ಫೈಲಿಂಗ್ ಪೋರ್ಟಲ್ ಮೇಲೆ ದಾಖಲೆಯ ಐಡೆಂಟಿಫಿಕೇಶನ್ ನಂಬರ್ ಜನರೇಟ್ (How To Generate Identification Number) ಮಾಡುವ ಉದ್ದೇಶದಿಂದ ನಂತರ ಈ ಫಾರಂ ಗಳನ್ನೂ ಅಪ್ಲೋಡ್ ಮಾಡಲು ಸೌಲಭ್ಯ ಒದಗಿಸಲಾಗುವುದು ಎನ್ನಲಾಗಿದೆ. ಸಚಿವಾಲಯ ಹೊರಡಿಸಿರುವ ಹೇಳಿಕೆಯ ಪ್ರಕಾರ ಫಾರೆನ್ ರೆಮಿಟೆನ್ಸ್ ಪ್ರಕರಣಗಳಲ್ಲಿ ಅಧಿಕೃತ ಡೀಲರ್ ಗಳಿಗೆ ಫಾರ್ಮ್ 15CA/15CB ಸ್ವಿಕೃತಿಯ ದಿನಾಂಕವನ್ನು ಜೂನ್ 30, 2021ರವರೆಗೆ ವಿಸ್ತರಿಸಲು ಕೋರಲಾಗಿದೆ ಎಂದಿದೆ. ತೆರಿಗೆ ಪಾವತಿದಾರರು (Tax Payers) ಈ ಡೀಲರ್ ಗಳ ಬಳಿ ವೈಯಕ್ತಿಕ ಭೇಟಿ ನೀಡುವ ಮೂಲಕ ಈ ಫಾರ್ಮ್ ಅನ್ನು ಸಲ್ಲಿಕೆ ಮಾಡಬೇಕು.
ಇದನ್ನೂ ಓದಿ- ಕೇಂದ್ರ ಸರ್ಕಾರಿ ನೌಕರರ DA ಹೆಚ್ಚಳ, DR ಪ್ರಯೋಜನಗಳಿಗೆ ಸಂಬಂಧಿಸಿದಂತೆ ಸಿಹಿ ಸುದ್ದಿ!
ಜೂನ್ 1 ರಂದು ಬಿಡುಗಡೆಯಾಗಿತ್ತು ಹೊಸ ಇ-ಫೈಲಿಂಗ್ ಪೋರ್ಟಲ್
ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ಪೋರ್ಟಲ್ (IT Department New e-Filing Portal) ಜೂನ್ 7, 2021ರಂದು ಬಿಡುಗಡೆಯಾಗಿತ್ತು. ಆದರೆ, ಅದಾದ ಬಳಿಕ ಬಳಕೆದಾರರು ನಿರಂತರವಾಗಿ ತಾಂತ್ರಿಕ ಅಡಚಣೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಲಾಗಿನ್ ಗಾಗಿ ತುಂಬಾ ಕಾಯಬೇಕಾಗುತ್ತಿದೆ. ಈ ಹಿನ್ನೆಲೆ ನೋಟಿಸ್ ಗಳ ಮೂಲಕ ಸೂಚನೆ ನೀಡುವುದು ಕೂಡ ಸಾಧ್ಯವಾಗುತ್ತಿಲ್ಲ ಹಾಗೂ ಎಲ್ಲಾ ವೈಶಿಷ್ಟ್ಯಗಳು ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿಲ್ಲ. ತೆರಿಗೆ ಪಾವತಿದಾರರ ಇ-ಫೈಲಿಂಗ್ ಅನ್ನು ಸುಲಭಗೊಳಿಸಲು ಈ ಹೊಸ ಪೋರ್ಟಲ್ ಅನ್ನು ಇಲಾಖೆ ಆರಂಭಿಸಿತ್ತು.
ಇದನ್ನೂ ಓದಿ- ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರ..! ತಪ್ಪಿದರೆ ಎದುರಾದೀತು ಈ ಸಮಸ್ಯೆಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.