7th Pay Commission : ಕೇಂದ್ರ ಸರ್ಕಾರಿ ನೌಕರರ  DA ಹೆಚ್ಚಳ, DR ಪ್ರಯೋಜನಗಳಿಗೆ ಸಂಬಂಧಿಸಿದಂತೆ ಸಿಹಿ ಸುದ್ದಿ!

ಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ

Last Updated : Jun 15, 2021, 12:58 PM IST
  • 18 ತಿಂಗಳುಗಳಿಂದ ತುಟ್ಟಿಭತ್ಯೆಗಾಗಿ ಕಾಯುತ್ತಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ
  • ಜುಲೈ ವೇತನದಲ್ಲಿ ತುಟ್ಟಿಭತ್ಯೆಯನ್ನ ಸೇರಿಸುವ ಮೂಲಕ ಪಾವತಿ ಮಾಡಲಾಗುತ್ತದೆ ಎನ್ನಲಾಗ್ತಿದೆ
  • ಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ
7th Pay Commission : ಕೇಂದ್ರ ಸರ್ಕಾರಿ ನೌಕರರ  DA ಹೆಚ್ಚಳ, DR ಪ್ರಯೋಜನಗಳಿಗೆ ಸಂಬಂಧಿಸಿದಂತೆ ಸಿಹಿ ಸುದ್ದಿ! title=

ನವದೆಹಲಿ : 18 ತಿಂಗಳುಗಳಿಂದ ತುಟ್ಟಿಭತ್ಯೆಗಾಗಿ (DA) ಕಾಯುತ್ತಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಶೀಘ್ರದಲ್ಲೇ ತುಟ್ಟಿ ಭತ್ಯ ಸಿಗಲಿದೆ. ರಾಷ್ಟ್ರೀಯ ಜಂಟಿ ಸಮಾಲೋಚನಾ ಯಂತ್ರ ಮಂಡಳಿ (GCM) ಹಣಕಾಸು ಸಚಿವಾಲಯ ಮತ್ತು ಸಿಬ್ಬಂದಿ ಹಾಗೂ ತರಬೇತಿ ಇಲಾಖೆ (DOPT) ಅಧಿಕಾರಿಗಳ ಸಭೆ ಜೂನ್ 26, 2021ರಂದು ನಡೆಯಲಿದೆ. ಈ ಸಭೆಯಲ್ಲಿ ಡಿಎ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದ್ದು, ಜುಲೈ ವೇತನದಲ್ಲಿ ತುಟ್ಟಿಭತ್ಯೆಯನ್ನ ಸೇರಿಸುವ ಮೂಲಕ ಪಾವತಿ ಮಾಡಲಾಗುತ್ತದೆ ಎನ್ನಲಾಗ್ತಿದೆ.

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ(DA) ಪಾವತಿಯನ್ನ ಜನವರಿ 2020ರಿಂದ ನಿಲ್ಲಿಸಲಾಗಿದೆ. ಅಂದ್ರೆ ಒಟ್ಟು ಮೂರು ಕಂತುಗಳನ್ನ ಪಾವತಿಸಬೇಕಾಗುತ್ತದೆ. ಈ ಮೂರು ಕಂತುಗಳ ಹಣವನ್ನ ಏಕಕಾಲದಲ್ಲಿ ನೀಡಬಹುದು.

ಇದನ್ನೂ ಓದಿ : ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರ..! ತಪ್ಪಿದರೆ ಎದುರಾದೀತು ಈ ಸಮಸ್ಯೆಗಳು

ಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರ(Central Govt Employees)ರ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ ಮತ್ತು ಅದೇ ಸಮಯದಲ್ಲಿ ಕಳೆದ 18 ತಿಂಗಳುಗಳಿಂದ ನಿಲ್ಲಿಸಲಾದ ಡಿಎಗೂ ಪಾವತಿಸಲಾಗುವುದು. ಇದರ ನಂತ್ರ ಉದ್ಯೋಗಿಗಳ ತುಟ್ಟಿಭತ್ಯೆಯು 28 ಪ್ರತಿಶತಕ್ಕೆ ಹೆಚ್ಚಾಗುತ್ತದೆ, ಇದು ಪ್ರಸ್ತುತ 17 ಪ್ರತಿಶತವಾಗಿದೆ.

ಇದನ್ನೂ ಓದಿ : Gold-Silver Rate : ಚಿನ್ನ-ಬೆಳ್ಳಿ ಖರೀದಿದಾರರಿಗೆ ಸಿಹಿ ಸುದ್ದಿ : ದಾಖಲೆ ಮಟ್ಟದಲ್ಲಿ ಬೆಲೆಯಲ್ಲಿ ಇಳಿಕೆ!

ಸಂಬಳ ಎಷ್ಟು ಹೆಚ್ಚಾಗಬಹುದು?

7ನೇ ವೇತನ ಆಯೋಗ(7th Pay Commission)ದ ಅಡಿಯಲ್ಲಿ, ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ 18000 ರೂ. ಆಗಿದ್ದು, ಇದರಲ್ಲಿ 15 ಪ್ರತಿಶತ ತುಟ್ಟಿಭತ್ಯೆಯನ್ನ ಸೇರಿಸುವ ನಿರೀಕ್ಷೆಯಿದೆ. ಅಂದ್ರೆ, ತಿಂಗಳಿಗೆ ರೂ 2700 ಅನ್ನು ನೇರವಾಗಿ ವೇತನಕ್ಕೆ ಸೇರಿಸಲಾಗುವುದು.

ಇದನ್ನೂ ಓದಿ : Central Govt Employees Guidelines : ಕೇಂದ್ರ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ!

ನಾವು ಅದನ್ನು ವಾರ್ಷಿಕ ಆಧಾರದ ಮೇಲೆ ನೋಡಿದ್ರೆ, ಕೇಂದ್ರ ಸರ್ಕಾರಿ ನೌಕರರು(Employees) ಡಿಎಯಲ್ಲಿ ಒಟ್ಟು 32400 ರೂ. ಪ್ರಯೋಜನ ಪಡೆಯುತ್ತಾರೆ. ಸರ್ಕಾರಿ ಮೂಲಗಳ ಪ್ರಕಾರ, ಜೂನ್ 2021ರ ತುಟ್ಟಿಭತ್ಯೆ ಸ್ವಲ್ಪ ವಿಳಂಬವಾಗಲಿದೆ. ಆದ್ರೆ, ಅದೂ ಸಹ ಶೇಕಡಾ 4ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಮತ್ತು ಅದನ್ನ ಅಕ್ಟೋಬರ್ ವೇಳೆಗೆ ಪಾವತಿಸಬಹುದು. ಆ ಸಮಯದಲ್ಲಿ ತುಟ್ಟಿಭತ್ಯೆ ಒಟ್ಟು 32 ಪ್ರತಿಶತಕ್ಕೆ ಹೆಚ್ಚಾಗುತ್ತದೆ.

ಇದನ್ನೂ ಓದಿ : LPG Subsidy: ನಿಮ್ಮ ಖಾತೆಯಲ್ಲಿ ಎಲ್‌ಪಿಜಿ ಸಬ್ಸಿಡಿ ಬರುತ್ತಿದೆಯೋ ಇಲ್ಲವೋ? ಕೆಲವೇ ನಿಮಿಷಗಳಲ್ಲಿ ಈ ರೀತಿ ಪರಿಶೀಲಿಸಿ

ಬಾಕಿಯನ್ನು ನಿರೀಕ್ಷಿಸಬಹುದೇ?

ಕಳೆದ 18 ತಿಂಗಳುಗಳಿಂದ ಅವರಿಗೆ ಡಿಎ(DA Blance) ಬಾಕಿ ಪಾವತಿಯನ್ನ ಸಹ ನೀಡಬೇಕು ಎಂದು ಉದ್ಯೋಗಿ ಒಕ್ಕೂಟಗಳು ಒತ್ತಾಯಿಸುತ್ತಿವೆ. ರಾಷ್ಟ್ರೀಯ ಜೆಸಿಎಂ ಮಂಡಳಿಯ ಶಿವಗೋಪಾಲ್ ಮಿಶ್ರಾ ಅವರ ಪ್ರಕಾರ, ಲೆವೆಲ್-1 ಉದ್ಯೋಗಿಗಳ ಡಿಎ ಬಾಕಿ 11,880 ರಿಂದ 37,554 ರೂ. ಆಗಿದೆ. ಆದರೆ, ಲೆವೆಲ್-13 (7ನೇ ಸಿಪಿಸಿ ಮೂಲ ವೇತನ ಶ್ರೇಣಿ ರೂ 1,23,100 ರಿಂದ ರೂ 2,15,900) ಅಥವಾ ಲೆವೆಲ್-14 (ವೇತನ ಶ್ರೇಣಿ) ಗೆ ಲೆಕ್ಕಾಚಾರಗಳನ್ನ ಮಾಡಿದ್ರೆ, ಆಗ ಉದ್ಯೋಗಿಗೆ ನೀಡಲಾದ ಡಿಎ ಬಾಕಿಸುಮಾರು ರೂ 1,44,200 ರಿಂದ 2,18,200 ಆಗಿರಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News