New Tax Regime: ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿರುವ ತೆರಿಗೆದಾರರಿಗೆ ಸರ್ಕಾರ ಭಾರಿ ದೊಡ್ಡ ರಿಲೀಫ್ ನೀಡಿದೆ. ಹೌದು, ಇನ್ಮುಂದೆ 7 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. ಇದಕ್ಕಾಗಿ ಹಣಕಾಸು ಮಸೂದೆಯಲ್ಲಿ ತಿದ್ದುಪಡಿ ತರಲಾಗಿದೆ. ತಿದ್ದುಪಡಿಯಲ್ಲಿ, ತೆರಿಗೆ ಮುಕ್ತ ಆದಾಯದ 7 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಆದಾಯವನ್ನು ಗಳಿಸುವ ವ್ಯಕ್ತಿಗಳು ಹೆಚ್ಚುವರಿ ಆದಾಯಕ್ಕೆ ಮಾತ್ರ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಲೋಕಸಭೆಯು ಇಂದು ಭಾರಿ ಕೋಲಾಹಲದ ಮಧ್ಯೆ ಹಣಕಾಸು ಮಸೂದೆ 2023ಕ್ಕೆ ಅನುಮೋದನೆ ನೀಡಿದೆ. ಇದರಲ್ಲಿ ತಿದ್ದುಪಡಿ ಮೂಲಕ ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆದಾರರಿಗೆ ಸ್ವಲ್ಪ ರಿಲೀಫ್ ನೀಡಲಾಗಿದೆ. ಹೊಸ ತೆರಿಗೆ ಪದ್ಧತಿಯು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.


ಈ ತೆರಿಗೆದಾರರಿಗೆ ಪರಿಹಾರ ಸಿಗಲಿದೆ
ಹೊಸ ತಿದ್ದುಪಡಿ ಮಾಡಲಾದ ನಿಬಂಧನೆಯನ್ನು ವಿವರಿಸಿದ ಹಣಕಾಸು ಸಚಿವಾಲಯ, ಹೊಸ ತೆರಿಗೆ ಪದ್ಧತಿಯಲ್ಲಿ, ತೆರಿಗೆ ಪಾವತಿದಾರರು 7 ಲಕ್ಷ ವಾರ್ಷಿಕ ಆದಾಯವನ್ನು ಹೊಂದಿದ್ದರೆ, ಅವರು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ ಎಂದು ಹೇಳಿದ್ದಾರೆ. ಈ ಮೊದಲೀನ ಪ್ರಸ್ತಾಪನೆಯ ಪ್ರಕಾರ, ಒಂದು ವೇಳೆ ತೆರಿಗೆ ಪಾವತಿದಾರನ ಆದಾಯ ಏಳು ಲಕ್ಷ ಮೀರಿದರೆ ಅಂದರೆ,  ಉದಾಹರಣೆಗಾಗಿ 7,00,100 ಆಗಿದ್ದರೆ ಅದರ ಮೇಲೆ ಆತ ಸಂಪೂರ್ಣ 25,010 ರೂಪಾಯಿ ತೆರಿಗೆ ಕಟ್ಟಬೇಕಾಗುತ್ತಿತ್ತು. ಅಂದರೆ ಕೇವಲ ಹೆಚ್ಚುವರಿ 100 ರೂಪಾಯಿ ಆದಾಯದ ಕಾರಣ ತೆರಿಗೆದಾರರು 25,010 ರೂಪಾಯಿ ತೆರಿಗೆ ಪಾವತಿಸಬೇಕಾಗುತ್ತದೆ. ಹೀಗಾಗಿ ವ್ಯಕ್ತಿ ಪಾವತಿಸುವ ತೆರಿಗೆಯು 7 ಲಕ್ಷ ರೂಪಾಯಿಗಳ ತೆರಿಗೆ ಮುಕ್ತ ಆದಾಯದಿಂದ ಮುಂದಿನ ಆದಾಯಕ್ಕೆ ಮಾತ್ರ ಸೀಮಿತವಾಗಿರಬೇಕು ಎಂಬ ಸಣ್ಣ ಪರಿಹಾರವನ್ನು ನೀಡಲು ಪ್ರಸ್ತಾಪಿಸಲಾಗಿದೆ. ಅಂದರೆ ಈ ವೇಳೆ 7 ಲಕ್ಷಕ್ಕಿಂತ ಹೆಚ್ಚಿನ ಆದಾಯ 100 ರೂ.ಆದ್ದರಿಂದ ಅದೇ ಮೊತ್ತಕ್ಕೆ ತೆರಿಗೆಯನ್ನೂ ವಿಧಿಸಬೇಕು.

ಈ ಕುರಿತು ಮಾಹಿತಿ ನೀಡಿರುವ ನಂಗಿಯಾ ಆಂಡರ್ಸನ್ ಎಲ್‌ಎಲ್‌ಪಿಯ ಪಾಲುದಾರ ಸಂದೀಪ್ ಜುನ್‌ಜುನ್‌ವಾಲಾ, ತೆರಿಗೆ ಮುಕ್ತ ಆದಾಯಕ್ಕಿಂತ ಸ್ವಲ್ಪ ಹೆಚ್ಚು ಆದಾಯ ಹೊಂದಿರುವ ವೈಯಕ್ತಿಕ ತೆರಿಗೆದಾರರಿಗೆ ಸ್ವಲ್ಪ ಪರಿಹಾರವನ್ನು ಒದಗಿಸಲು ಹಣಕಾಸು ಮಸೂದೆಯಲ್ಲಿ ತಿದ್ದುಪಡಿಯನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ-DA Hike: ಡಿಎ ಹೆಚ್ಚಳ ಘೋಷಣೆಗೆ ಕ್ಷಣಗಣನೆ ಆರಂಭ, ಈಗಾಗಲೇ ಮುದ್ರೆಯೋತ್ತಿದೆ ಮೋದಿ ಸರ್ಕಾರ! ಎಷ್ಟು ಲಾಭ ಇಲ್ಲಿ ತಿಳಿಯಿರಿ


7 ಲಕ್ಷದವರೆಗೆ ಆದಾಯ ತೆರಿಗೆ ಮುಕ್ತ
2023-24ರ ಹಣಕಾಸು ವರ್ಷದ ಬಜೆಟ್‌ನಲ್ಲಿ, ಹೊಸ ತೆರಿಗೆ ಪದ್ಧತಿಯನ್ನು ಅಳವಡಿಸಿಕೊಳ್ಳುವ ತೆರಿಗೆದಾರರು ವಾರ್ಷಿಕ ಆದಾಯ 7 ಲಕ್ಷ ರೂ.ವರೆಗೆ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಹೇಳಲಾಗಿತ್ತು. ಹೊಸ ತೆರಿಗೆ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಂಬಳದ ವರ್ಗದ ತೆರಿಗೆದಾರರನ್ನು ಪ್ರೇರೇಪಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತಜ್ಞರು ಹೇಳಿದ್ದಾರೆ.


ಇದನ್ನೂ ಓದಿ-ಆದಾಯ ತೆರಿಗೆ ಪಾವತಿದಾರರಿಗೆ ಆಡಿಟ್ ಬಳಿಕ ಸಿಗಲಿವೆ 41104 ರೂ.ಗಳು! ಸರ್ಕಾರ ನೀಡಿದೆ ಈ ಮಹತ್ವದ ಮಾಹಿತಿ


ಹೊಸ ತೆರಿಗೆ ಪದ್ಧತಿಯಲ್ಲಿ ಹೂಡಿಕೆಗೆ ಯಾವುದೇ ವಿನಾಯಿತಿ ಇಲ್ಲ
ಹೊಸ ತೆರಿಗೆ ಪದ್ಧತಿಯಲ್ಲಿ ಹೂಡಿಕೆಗೆ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ. ಈಗ ಹಣಕಾಸು ಮಸೂದೆಯಲ್ಲಿ ತಿದ್ದುಪಡಿ ಮಾಡುವ ಮೂಲಕ ಈ ತೆರಿಗೆದಾರರಿಗೆ ಇನ್ನೂ ಸ್ವಲ್ಪ ಪರಿಹಾರವನ್ನು ನೀಡಲು ಸರ್ಕಾರ ಮನಸ್ಸು ಮಾಡಿದೆ. ಆದರೆ, 7 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ತೆರಿಗೆದಾರರು ಈ ಪರಿಹಾರಕ್ಕೆ ಎಷ್ಟು ಅರ್ಹರು ಎಂಬುದನ್ನು ಸರ್ಕಾರ ಉಲ್ಲೇಖಿಸಿಲ್ಲ. 7,27,777 ವರೆಗೆ ಆದಾಯವಿರುವ ವೈಯಕ್ತಿಕ ತೆರಿಗೆದಾರರು ಈ ನಿಬಂಧನೆಯ ಲಾಭವನ್ನು ಪಡೆಯಬಹುದು ಎಂದು ತೆರಿಗೆ ತಜ್ಞರು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.