ಆದಾಯ ತೆರಿಗೆ ಪಾವತಿದಾರರಿಗೆ ಆಡಿಟ್ ಬಳಿಕ ಸಿಗಲಿವೆ 41104 ರೂ.ಗಳು! ಸರ್ಕಾರ ನೀಡಿದೆ ಈ ಮಹತ್ವದ ಮಾಹಿತಿ

Income Tax Latest News: ಇ-ಮೇಲ್ ನೋಡಿದಾಕ್ಷಣ ಅದು ಮೊದಲ ನೋಟಕ್ಕೆ ಆದಾಯ ತೆರಿಗೆ ಇಲಾಖೆಯಿಂದ ಬಂದಿದೆ ಏನೋ ಎಂಬಂತೆ ಕಾಣಿಸುತ್ತದೆ. ಇ-ಮೇಲ್ ಪಡೆದವರು ಆದಾಯ ತೆರಿಗೆ ಇಲಾಖೆಯಿಂದ ರೂ.41,104 ಮರಳಿ ಪಡೆಯಲು ಅರ್ಹರಾಗಿದ್ದಾರೆ ಎಂದು ಅದರಲ್ಲಿ ಹೇಳಲಾಗುತ್ತಿದೆ.  

Written by - Nitin Tabib | Last Updated : Mar 24, 2023, 03:48 PM IST
  • ಆದಾಯ ತೆರಿಗೆ ಇಲಾಖೆಯು ಖಾತೆ ಲೆಕ್ಕಪರಿಶೋಧನೆಯ ಕೆಲಸವನ್ನು ಪೂರ್ಣಗೊಳಿಸಿದೆ ಎಂದು ಈ ಇ-ಮೇಲ್‌ನಲ್ಲಿ ಬರೆಯಲಾಗಿದೆ.
  • ಆದ್ದರಿಂದ ನೀವು ರೂ 41,104.22 ಪಡೆಯಲು ಅರ್ಹರಾಗಿದ್ದೀರಿ. ಆದರೆ ನಿಮ್ಮ ಒಂದು ವಿವರ ತಪ್ಪಾಗಿದೆ.
  • ದಯವಿಟ್ಟು ಕ್ರಾಸ್ ಚೆಕ್ ಮಾಡಿ ಮತ್ತು ನಿಯಮಗಳ ಪ್ರಕಾರ ಮರುಪಾವತಿಗಾಗಿ ಅರ್ಜಿ ಸಲ್ಲಿಸಿ ಎಂದೂ ಕೂಡ ಅದರಲ್ಲಿ ಬರೆಯಲಾಗಿದೆ.
ಆದಾಯ ತೆರಿಗೆ ಪಾವತಿದಾರರಿಗೆ ಆಡಿಟ್ ಬಳಿಕ ಸಿಗಲಿವೆ 41104 ರೂ.ಗಳು! ಸರ್ಕಾರ ನೀಡಿದೆ ಈ ಮಹತ್ವದ ಮಾಹಿತಿ  title=
ಆದಾಯ ತೆರಿಗೆ ಪಾವತಿದಾರಿಗೊಂದು ಮಹತ್ವದ ಮಾಹಿತಿ!

PIB Fact Check: ನೀವು ಕೂಡ ಈ ಬಾರಿ ಐಟಿಆರ್ ಸಲ್ಲಿಸಿದ್ದರೆ ಈ ಸುದ್ದಿಯನ್ನು ನೀವು ತಪ್ಪದೆ ಓದಬೇಕು. ನೀವು ITR ಅನ್ನು ಸಲ್ಲಿಸದಿದ್ದರೂ ಸಹ, ಈ ಸುದ್ದಿಯಲ್ಲಿ ನೀಡಲಾದ ಮಾಹಿತಿ ಜೊತೆ ಅಪ್ಡೇಟ್ ಆಗುವುದು ಮಹತ್ವದ್ದಾಗಿದೆ. ವಾಸ್ತವದಲ್ಲಿ, ಇತ್ತೀಚಿನ ದಿನಗಳಲ್ಲಿ ಜನರ ಇ-ಮೇಲ್ ಐಡಿಯಲ್ಲಿ ಮೇಲ್ ವೊಂದು ಬರುತ್ತಿದೆ, ಬಹುಶಃ ಈ ಇಮೇಲ್ ನಿಮ್ಮ ಮೇಲ್‌ಗೂ ಬಂದಿರಬಹುದು. ಇ-ಮೇಲ್ ಸ್ವೀಕರಿಸುವವರು 41,104 ರೂ.ಗಳನ್ನು ಮರಳಿ ಪಡೆಯಲು ಅರ್ಹರಾಗಿದ್ದಾರೆ ಎಂದು ಅದರಲ್ಲಿ ಹೇಳಲಾಗುತ್ತಿದೆ.

ಇದರ ಸ್ಕ್ರೀನ್ ಶಾಟ್ ಕೂಡ ವೈರಲ್ ಆಗುತ್ತಿದೆ
ಈ ಇ-ಮೇಲ್ ಅನ್ನು ಮೊದಲ ನೋಟಕ್ಕೆ ಆದಾಯ ತೆರಿಗೆ ಇಲಾಖೆಯಿಂದ ಬಂದಿದೆ ಏನೋ ಎಂಬಂತೆ ತೋರುತ್ತದೆ. ಆದರೆ ಇದು ಸಂಪೂರ್ಣ ನಕಲಿ ಸಂದೇಶವಾಗಿದೆ. ಈ ಇ-ಮೇಲ್ ನ ಸ್ಕ್ರೀನ್ ಶಾಟ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿ ಅನೇಕರು ಗೊಂದಲಕ್ಕೊಳಗಾಗುತ್ತಿದ್ದಾರೆ. ಏನಿದು ಸಂಪೂರ್ಣ ವಿಷಯ ತಿಳಿದುಕೊಳ್ಳೋಣ ಬನ್ನಿ.

ಇ-ಮೇಲ್‌ನಲ್ಲಿ ಯಾವ ಮಾಹಿತಿಯನ್ನು ನೀಡಲಾಗಿದೆ?
ಆದಾಯ ತೆರಿಗೆ ಇಲಾಖೆಯು ಖಾತೆ ಲೆಕ್ಕಪರಿಶೋಧನೆಯ ಕೆಲಸವನ್ನು ಪೂರ್ಣಗೊಳಿಸಿದೆ ಎಂದು ಈ ಇ-ಮೇಲ್‌ನಲ್ಲಿ ಬರೆಯಲಾಗಿದೆ. ಆದ್ದರಿಂದ ನೀವು ರೂ 41,104.22 ಪಡೆಯಲು ಅರ್ಹರಾಗಿದ್ದೀರಿ. ಆದರೆ ನಿಮ್ಮ ಒಂದು ವಿವರ ತಪ್ಪಾಗಿದೆ. ದಯವಿಟ್ಟು ಕ್ರಾಸ್ ಚೆಕ್ ಮಾಡಿ ಮತ್ತು ನಿಯಮಗಳ ಪ್ರಕಾರ ಮರುಪಾವತಿಗಾಗಿ ಅರ್ಜಿ ಸಲ್ಲಿಸಿ ಎಂದೂ ಕೂಡ ಅದರಲ್ಲಿ ಬರೆಯಲಾಗಿದೆ. ಇ-ಮೇಲ್ ವಿಷಯದಲ್ಲಿ, ಆದಾಯ ತೆರಿಗೆ ಉಪ ಆಯುಕ್ತರಿಂದ ಈ ಇ-ಮೇಲ್ ನೀಡಲಾಗಿದೆ ಎಂಬ ಮಾಹಿತಿಯನ್ನು ಕೆಳಭಾಗದಲ್ಲಿ ನೀಡಲಾಗಿದೆ.

ಇದನ್ನೂ ಓದಿ-Big Update: ಪ್ರಯಾಣಿಕರಿಗಾಗಿ ಬಂಪರ್ ಘೋಷಣೆ ಮೊಳಗಿಸಿದ ನಿತೀನ್ ಗಡ್ಕರಿ, ಕೇಳಿ ಕುಣಿದು ಕುಪ್ಪಳಿಸುವಿರಿ!

ಸಂಪೂರ್ಣ ನಕಲಿ
ಪ್ರಸ್ತುತ ಈ ಇ-ಮೇಲ್‌ನ ಸ್ಕ್ರೀನ್ ಶಾಟ್ ವೈರಲ್ ಆದ ಕಾರಣ ಅದನ್ನು ಪರಿಶೀಲನೆಗೆ ಒಳಪಡಿಸಿದಾಗ ಅದೊಂದು ಸಂಪೂರ್ಣ ನಕಲಿ ಸಂದೇಶ ಎಂಬ ಮಾಹಿತಿ ಬಹಿರಂಗಗೊಂಡಿದೆ.  ಇ-ಮೇಲ್‌ನ ಪಿಐಬಿ ಫ್ಯಾಕ್ಟ್ ಚೆಕ್ ನಂತರ ಆದರೆ ನೈಜತೆ ಹೊರಬಿದ್ದಿದೆ. ವಾಸ್ತವ ಪರಿಶೀಲನೆಯ ಆಧಾರದ ಮೇಲೆ ಇನ್ಕಮ್ ಟಾಕ್ಸ್ ಇಂಡಿಯ ಹೆಸರಿನಲ್ಲಿ ಬರುತ್ತಿರುವ ಇ-ಮೇಲ್ ಸಂಪೂರ್ಣ ನಕಲಿಯಾಗಿದೆ ಮತ್ತು ಅದರಲ್ಲಿ ಮಂಡಿಸಲಾಗುತ್ತಿರುವ ಹಕ್ಕು ಸಂಪೂರ್ಣವಾಗಿ ಸುಳ್ಳು ಎಂದು ಹೇಳಲಾಗಿದೆ. ಈ ಇ-ಮೇಲ್ ಅನ್ನು webmanager@incometax.gov.in ನಿಂದ ಜನರಿಗೆ ಕಳುಹಿಸಲಾಗುತ್ತಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ-ಪಿಂಚಣಿದಾರರ ಪಾಲಿಗೊಂದು ಸಂತಸದ ಸುದ್ದಿ, ಇನ್ಮುಂದೆ ಪ್ರತಿ ತಿಂಗಳು ಸಿಗಲಿದೆ 58300 ರೂ. ಪಿಂಚಣಿ!

ದಾರಿತಪ್ಪಿಸುವ ಇಂತಹ ಸಂದೇಶಗಳನ್ನು ಫಾರ್ವರ್ಡ್ ಮಾಡಬೇಡಿ
ಸರ್ಕಾರದ ಅಧಿಕೃತ ಸತ್ಯ ಪರಿಶೀಲನೆ ನಡೆಸುವ  'PIB ಫ್ಯಾಕ್ಟ್ ಚೆಕ್' ಇಂತಹ ಯಾವುದೇ ತಪ್ಪು ಸಂದೇಶವನ್ನು ಫಾರ್ವರ್ಡ್ ಮಾಡದಂತೆ ಜನರನ್ನು ಕೇಳಿಕೊಂಡಿದೆ. ಮೇಲಿನ ಸಂದೇಶವನ್ನು PIB ಫ್ಯಾಕ್ಟ್ ಚೆಕ್, ಸಂಪೂರ್ಣವಾಗಿ ನಕಲಿ ಎಂದು ಹೇಳಿದೆ. ಇಂತಹ  ಯಾವುದೇ ಆದೇಶವನ್ನು ಹಣಕಾಸು ಸಚಿವಾಲಯ ನೀಡಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News