ಸೇವಿಂಗ್ಸ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಡೆಪಾಸಿಟ್ ಮಾಡಿದ್ರೆ TAX ಬೀಳೋದು ಗ್ಯಾರಂಟಿ..!
Income Tax Act: ನಗದು ವಹಿವಾಟಿನ ಮೇಲ್ವಿಚಾರಣೆ ಮಾಡಲು ಮತ್ತು ನಗದು ವ್ಯವಹಾರಗಳನ್ನು ನಿಯಂತ್ರಿಸಲು ಆದಾಯ ತೆರಿಗೆ ಕಾನೂನು 2024 ಅನ್ನು ಜಾರಿಗೆ ತಂದಿದ್ದು ಇದು ನಿಮ್ಮ ಸೇವಿಂಗ್ಸ್ ಖಾತೆಗೆ ಜಮಾ ಮಾಡುವ ನಗದು ಹಣದ ಮೇಲೆ ಕಣ್ಣಿಟ್ಟಿರುತ್ತದೆ.
Income Tax Act: ಸೇವಿಂಗ್ಸ್ ಖಾತೆಯಲ್ಲಿ ಯಾವಾಗ ಬೇಕಾದರೂ ಹಣ ಹಾಕಬಹುದು ಯಾವಾಗಬೇಕಾದರೂ ತೆಗೆಯಬಹುದು. ಆದರೆ ಎಷ್ಟು ಹಣವನ್ನಾದರೂ ಹಾಕಬಹುದು-ತೆಗೆಯಬಹುದು ಎಂದು ಭಾವಿಸಬೇಡಿ. ಹೊಸ ಆದಾಯ ತೆರಿಗೆ ಕಾನೂನು 2014 ಸೇವಿಂಗ್ಸ್ ಖಾತೆಯಲ್ಲಿ ನಗದು ವ್ಯವಹಾರ ಮಾಡಲು ಮಿತಿಯನ್ನು ವಿಧಿಸಿದೆ. ಈ ಮಿತಿಗಿಂತ ನೀವು ಹೆಚ್ಚಿಗೆ ಹಣವನ್ನು ಡಿಪಾಸಿಟ್ ಮಾಡಿದರೆ ಆಗಲೂ ನೀವು ತೆರಿಗೆ ಪಾವತಿಸಬೇಕಾಗುತ್ತದೆ.
ನಗದು ವಹಿವಾಟಿನ ಮೇಲ್ವಿಚಾರಣೆ ಮಾಡಲು ಮತ್ತು ನಗದು ವ್ಯವಹಾರಗಳನ್ನು ನಿಯಂತ್ರಿಸಲು ಆದಾಯ ತೆರಿಗೆ ಕಾನೂನು 2024 ಅನ್ನು ಜಾರಿಗೆ ತಂದಿದ್ದು ಇದು ನಿಮ್ಮ ಸೇವಿಂಗ್ಸ್ ಖಾತೆಗೆ ಜಮಾ ಮಾಡುವ ನಗದು ಹಣದ ಮೇಲೆ ಕಣ್ಣಿಟ್ಟಿರುತ್ತದೆ. ಯಾವುದೇ ರೀತಿಯ ದೊಡ್ಡ ಮೊತ್ತದ ನಗದು ಜಮಾ, ತೆರಿಗೆ ವಂಚನೆ ಹಾಗು ಇನ್ನಿತರ ಅಕ್ರಮ ಹಣಕಾಸು ಚಟುವಟಿಕೆಗಳು ತಡೆಯಲು ಈ ಕಾನೂನನ್ನು ತರಲಾಗಿದೆ.
ಇದನ್ನೂ ಓದಿ- ಐಟಿಆರ್ ಫೈಲ್ ಯಾರಿಂದ ಮಾಡಿಸುತ್ತಿರಿ ಎನ್ನುವುದೂ ಮುಖ್ಯ, ಯಾರಿಂದಲೋ ಮಾಡಿಸಿದರೆ ಸಮಸ್ಯೆ ಗ್ಯಾರಂಟಿ!
ಹೊಸ ಆದಾಯ ತೆರಿಗೆ ಕಾನೂನು 2024ರ ಪ್ರಕಾರ ಒಬ್ಬ ವ್ಯಕ್ತಿ ಒಂದು ವರ್ಷಕ್ಕೆ ಗರಿಷ್ಟ 10 ಲಕ್ಷ ರೂಪಾಯಿಗಳನ್ನು ಮಾತ್ರ ನಗದು ರೂಪದಲ್ಲಿ ಸೇವಿಂಗ್ಸ್ ಖಾತೆಗೆ ಜಮಾ ಮಾಡಬಹುದು. ಅದಕ್ಕಿಂತ ಹೆಚ್ಚು ಮೌಲ್ಯದ ನಗದು ರೂಪದ ವ್ಯವಹಾರವಾದರೆ ಆದಾಯ ಇಲಾಖೆ ಹಣದ ಮೂಲ ಮತ್ತು ತೆರಿಗೆ ವಂಚನೆ ಕುರಿತು ನಿಮಗೆ ನೋಟಿಸ್ ನೀಡುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ- ಆದಾಯ ತೆರಿಗೆ ಇಲಾಖೆ ನಿಮ್ಮ ಹೆಂಡತಿ/ಗಂಡನಿಗೂ ನೋಟಿಸ್ ಕಳುಹಿಸಬಹುದು ಎಚ್ಚರ!
ನೀವು ಚಾಲ್ತಿ ಖಾತೆದಾರರಾಗಿದ್ದರೆ ಹೊಸ ಆದಾಯ ತೆರಿಗೆ ಕಾನೂನು 2024ರ ಪ್ರಕಾರ ವರ್ಷಕ್ಕೆ 50 ಲಕ್ಷ ರೂಪಾಯಿ ವರಗೆ ನಗದು ರೂಪದಲ್ಲಿ ಜಮಾ ಮಾಡಬಹುದು. ಅದಕ್ಕಿಂತ ಹೆಚ್ಚು ನಗದು ರೂಪದಲ್ಲಿ ಜಮಾ ಆದರೆ ಆಗಲೂ ನಿಮ್ಮ ಬ್ಯಾಂಕ್ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುತ್ತದೆ. ಅದರ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆ ನಿಮಗೆ ನೋಟಿಸ್ ನೀಡುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.