ಆದಾಯ ತೆರಿಗೆ ಇಲಾಖೆ ನಿಮ್ಮ ಹೆಂಡತಿ/ಗಂಡನಿಗೂ ನೋಟಿಸ್ ಕಳುಹಿಸಬಹುದು ಎಚ್ಚರ!

Income Tax Rules: ನಿಮ್ಮ ಖಾತೆಯಿಂದ ಹೆಂಡತಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವವರು ಇನ್ನು ಮುಂದೆ ಹುಷಾರಾಗಿರಬೇಕು. ನಿಮ್ಮ ಹೆಂಡತಿ ಆ ಹಣವನ್ನು ಹೇಗೆ ಖರ್ಚು ಮಾಡುತ್ತಾರೆ ಎಂಬುದನ್ನೂ ನೋಡಿ. ಏಕೆಂದರೆ ಅವರು ಮಾಡುವ ಖರ್ಚಿನ ಮೇಲೂ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿರುತ್ತದೆ. ಗೃಹಿಣಿಯಾಗಿ ನೀವೂ ಇಷ್ಟು ಹಣ ಖರ್ಚು ಮಾಡಲು ಹಣ ಎಲ್ಲಿಂದ ಬಂತು ಎಂದು ನೋಟಿಸ್ ನೀಡಬಹುದು. ಹೆಂಡತಿ ಖರ್ಚಿನ ಬಗ್ಗೆ ನಿಮಗೂ ನೋಟಿಸ್ ನೀಡಬಹುದು.

Written by - Yashaswini V | Last Updated : Dec 16, 2024, 09:47 AM IST
  • ನಿಮ್ಮ ಹೆಂಡತಿಗೆ ನೀಡುವ ಹಣವನ್ನು ಅವರು ಎಸ್‌ಐಪಿ ಅಥವಾ ಇನ್ನಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅದಕ್ಕಾಗಿ ಅವರು ತೆರಿಗೆ ಕಟ್ಟಬೇಕಾಗಿರುವುದಿಲ್ಲ.
  • ಹೆಂಡತಿ ಹೂಡಿಕೆಯಿಂದ ಬರುವ ಆದಾಯ ನಿಮ್ಮ ಆದಾಯಕ್ಕೆ ಸೇರಿ ತೆರಿಗೆ ಸ್ಲ್ಯಾಬ್ ಪ್ರಕಾರ ಆದಾಯ ತೆರಿಗೆ ಪಾವತಿಸುವ ಜವಾಬ್ದಾರಿ ನಿಮ್ಮದಾಗುತ್ತದೆ.
  • ಹೆಂಡತಿ ಹೂಡಿಕೆಯಿಂದ ಬಂದ ಆದಾಯವನ್ನು ಅವರೇ ಮರುಹೂಡಿಕೆ ಮಾಡಿದರೆ, ಅದರ ಆದಾಯವನ್ನು ಅವರ ಆದಾಯವೆಂದು ಪರಿಗಣಿಸಲಾಗುತ್ತದೆ. ಆಗ ಅವರೇ ತೆರಿಗೆ ಕಟ್ಟಬೇಕು.
ಆದಾಯ ತೆರಿಗೆ ಇಲಾಖೆ ನಿಮ್ಮ ಹೆಂಡತಿ/ಗಂಡನಿಗೂ ನೋಟಿಸ್ ಕಳುಹಿಸಬಹುದು ಎಚ್ಚರ! title=

Income Tax Rules: ನಿಮ್ಮ ಹಣವನ್ನು ನಿಮ್ಮ ಹೆಂಡತಿ ಖಾತೆಗೆ ಹಾಕುತ್ತಿದ್ದರೆ ಇನ್ನು ಮುಂದೆ ಹುಷಾರಾಗಿರಿ. ನಿಮ್ಮ ಹೆಂಡತಿ ನೀವು ಅವರ ಖಾತೆಗೆ ಹಾಕುವ ಹಣವನ್ನು ಯಾವ ರೀತಿ ಖರ್ಚು ಮಾಡುತ್ತಿದ್ದಾರೆ? ಹೇಗೆ ವಿನಿಯೋಗ ಮಾಡುತ್ತಿದ್ದಾರೆ ಎಂಬುದರ ಮೇಲೂ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿರುತ್ತದೆ. ಅನುಮಾನ ಬಂದರೆ ಆದಾಯದ ಮೂಲ ಕೇಳಿ ಅವರಿಗೂ ನೋಟಿಸ್ ಕೊಡಬಹುದು.

ಸಾಮಾನ್ಯವಾಗಿ ಮನೆಯೊಡತಿ ಗೃಹಿಣಿಯಾಗಿದ್ದರೆ ಅವರ ಸ್ವಂತ ಖರ್ಚಿಗೆ ಹಾಗೂ ಮನೆಯ ಖರ್ಚಿಗೆ ಅಂತಾ ಗಂಡನಾದವನು ಹಣ ಹಾಕುತ್ತಾನೆ. ಅದೇ ರೀತಿ ನೀವೂ ಮಾಡುತ್ತಿರಬಹುದು. ಹಿಂದೆ ನಗದು ರೂಪದಲ್ಲಿ ಹಣ ಕೊಡುತ್ತಿದ್ದೀರಿ, ಅವರೂ ನಗದು ರೂಪದಲ್ಲಿ ಖರ್ಚು ಮಾಡುತ್ತಿದ್ದರು. ಆದರೀಗ ಯುಪಿಐ ಬಳಕೆ ಹೆಚ್ಚಾದಂತೆ ಬಹುತೇಕ ಜನ ಹೆಂಡತಿ ಖಾತೆಗೆ ಹಣ ವರ್ಗಾವಣೆ ಮಾಡುತ್ತಾರೆ ಹೆಂಡತಿ ಅವರ ಅನುಕೂಲಕ್ಕೆ ತಕ್ಕಂತೆ ಯುಪಿಐ ಮೂಲಕ ಹಣ ಖರ್ಚು ಮಾಡುತ್ತಾರೆ.

ಇದನ್ನೂ ಓದಿ- ಇಷ್ಟು ಮೊತ್ತದ ಹಣ ವರ್ಗಾವಣೆ ಆಗಿದ್ರೆ 'ಐಟಿ ನೋಟೀಸ್' ಬರೋದು ಗ್ಯಾರಂಟಿ..!

ಹೀಗೆ, ನಿಮ್ಮ ಖಾತೆಯಿಂದ ಹೆಂಡತಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವವರು ಇನ್ನು ಮುಂದೆ ಹುಷಾರಾಗಿರಬೇಕು. ನಿಮ್ಮ ಹೆಂಡತಿ ಆ ಹಣವನ್ನು ಹೇಗೆ ಖರ್ಚು ಮಾಡುತ್ತಾರೆ ಎಂಬುದನ್ನೂ ನೋಡಿ. ಏಕೆಂದರೆ ಅವರು ಮಾಡುವ ಖರ್ಚಿನ ಮೇಲೂ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿರುತ್ತದೆ. ಗೃಹಿಣಿಯಾಗಿ ನೀವೂ ಇಷ್ಟು ಹಣ ಖರ್ಚು ಮಾಡಲು ಹಣ ಎಲ್ಲಿಂದ ಬಂತು ಎಂದು ನೋಟಿಸ್ ನೀಡಬಹುದು. ಹೆಂಡತಿ ಖರ್ಚಿನ ಬಗ್ಗೆ ನಿಮಗೂ ನೋಟಿಸ್ ನೀಡಬಹುದು.

ನೀವು ಪ್ರತಿ ತಿಂಗಳು ನಿಮ್ಮ ಹೆಂಡತಿಗೆ ಹಣ ನೀಡಿದರೆ ಹಾಗು ಅವರು ಆ ಹಣವನ್ನು ಎಸ್‌ಐಪಿ ಅಥವಾ ಇನ್ನಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅದಕ್ಕಾಗಿ ಅವರು ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ. ಆದರೆ ಇದರಿಂದ ಬರುವ ಆದಾಯ ನಿಮ್ಮ ಆದಾಯಕ್ಕೆ ಸೇರಿ ತೆರಿಗೆ ಸ್ಲ್ಯಾಬ್ ಪ್ರಕಾರ ಆದಾಯ ತೆರಿಗೆ ಪಾವತಿಸುವ ಜವಾಬ್ದಾರಿ ನಿಮ್ಮದಾಗುತ್ತದೆ. ಜೊತೆಗೆ ನಿಮ್ಮ ಹೆಂಡತಿ ಆದಾಯ ತೆರಿಗೆ ರಿಟರ್ನ್ (ITR ಫೈಲ್) ಸಲ್ಲಿಸಬೇಕಾದ ಅಗತ್ಯವೂ ಇರುವುದಿಲ್ಲ.

ಇದನ್ನೂ ಓದಿ- ಇಪಿಎಫ್‌ಒ ಪಿಂಚಣಿದಾರರಿಗೆ ಗುಡ್ ನ್ಯೂಸ್- ನಿಮ್ಮ ಪಿಂಚಣಿ ಹಣ ಆಗಲಿದೆ ದ್ವಿಗುಣ: ಸರ್ಕಾರದ ಪ್ಲಾನ್ ಏನು ಅಂತಾ ತಿಳಿಯಿರಿ!

ಒಂದೊಮ್ಮೆ ನಿಮ್ಮ ಹೆಂಡತಿ ಹೂಡಿಕೆಯಿಂದ ಬಂದ ಆದಾಯವನ್ನು ಅವರೇ ಮರುಹೂಡಿಕೆ ಮಾಡಿದರೆ, ಅದರಿಂದ ಬರುವ ಆದಾಯವನ್ನು ಹೆಂಡತಿಯ ಆದಾಯವೆಂದು ಪರಿಗಣಿಸಲಾಗುತ್ತದೆ. ಆಗ ತೆರಿಗೆ ಸ್ಲ್ಯಾಬ್ ಪ್ರಕಾರ ಆದಾಯ ತೆರಿಗೆ ಪಾವತಿಸುವುದು ಹೆಂಡತಿಯ ಜವಾಬ್ದಾರಿಯಾಗಿರುತ್ತದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News