IT Refunds: ಆದಾಯ ತೆರಿಗೆ ಇಲಾಖೆಯು 1.59 ಕೋಟಿ ತೆರಿಗೆದಾರರಿಗೆ ತೆರಿಗೆ ಮರುಪಾವತಿಯನ್ನು ನೀಡಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಪ್ರಕಾರ, ಏಪ್ರಿಲ್ 1, 2021 ಮತ್ತು ಜನವರಿ 10, 2022 ರ ನಡುವೆ 1.59 ಕೋಟಿ ತೆರಿಗೆದಾರರಿಗೆ 1,54,302 ಕೋಟಿ ರೂಪಾಯಿ ಮರುಪಾವತಿಯನ್ನು ನೀಡಲಾಗಿದೆ.


COMMERCIAL BREAK
SCROLL TO CONTINUE READING

1,56,57,444 ಪ್ರಕರಣಗಳಲ್ಲಿ 53,689 ಕೋಟಿ ರೂಪಾಯಿ ಮರುಪಾವತಿ ಮಾಡಲಾಗಿದೆ ಎಂದು ಆದಾಯ ತೆರಿಗೆ (Income Tax News) ಇಲಾಖೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಇದೇ ವೇಳೆ, 2,21,976 ಪ್ರಕರಣಗಳಲ್ಲಿ, 1 ಲಕ್ಷ ಕೋಟಿ ರೂ.ಗಿಂತ ಹೆಚ್ಚು (1,00,612 ಕೋಟಿ) ಕಾರ್ಪೊರೇಟ್ ತೆರಿಗೆ ಮರುಪಾವತಿಯನ್ನು ನೀಡಲಾಗಿದೆ. ಈ ಪೈಕಿ, 2021-22ರ ಮೌಲ್ಯಮಾಪನ ವರ್ಷಕ್ಕೆ 1.20 ಕೋಟಿ ಪ್ರಕರಣಗಳಲ್ಲಿ 23,406 ಕೋಟಿ ರೂಪಾಯಿ ಮರುಪಾವತಿಯನ್ನು ನೀಡಲಾಗಿದೆ.


ಇದನ್ನೂ ಓದಿ-Business Loan : ಕೇವಲ 30 ನಿಮಿಷಗಳಲ್ಲಿ ಮನೆಯಿಂದಲೇ ಸಿಗಲಿದೆ ಸಾಲ! ಹೇಗೆ ಇಲ್ಲಿದೆ ನೋಡಿ


Income Tax Refund Updates - 31ನೇ ಡಿಸೆಂಬರ್ 2021 ರೊಳಗೆ ತಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಿದ ತೆರಿಗೆದಾರರು ಮತ್ತು ಅವರ ಮರುಪಾವತಿಯನ್ನು ಮಾಡಲಾಗಿದ್ದರೆ, ಆದಾಯ ತೆರಿಗೆ ಇಲಾಖೆಯು ಐಟಿಆರ್ ಅನ್ನು ಪ್ರಕ್ರಿಯೆಗೊಳಿಸಿದ ನಂತರ ಅವರಿಗೆ ಮರುಪಾವತಿಯನ್ನು ನೀಡುತ್ತಿದೆ. ಇದೇ ವೇಳೆ, 2021-22 ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕವಾದ ಡಿಸೆಂಬರ್ 31, 2021 ರವರೆಗೆ, ಸುಮಾರು 5.89 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿದೆ. ಅದರೂ ಕೂಡ, ಆದಾಯ ತೆರಿಗೆ ರಿಟರ್ನ್ಸ್‌ಗಳನ್ನು ಆಡಿಟ್ ಮಾಡಬೇಕಾದವರಿಗೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಮಾರ್ಚ್ 15, 2022 ರವರೆಗೆ ವಿಸ್ತರಿಸಲಾಗಿದೆ.


Komaki Ranger: ಒಂದೇ ಚಾರ್ಜ್‌ನಲ್ಲಿ 250 ಕಿಲೋಮೀಟರ್ ಓಡಲಿದೆ, ಈ ಕ್ರೂಸರ್ ಮೋಟಾರ್‌ಸೈಕಲ್


ರಿಟರ್ನ್ ಪಾವತಿಸಿಲ್ಲವೇ? (Check Income Tax Refund Status)
ನೀವು ಡಿಸೆಂಬರ್ 31, 2021 ರೊಳಗೆ ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸದಿದ್ದರೆ, ನಿಮಗೆ 15 ಮಾರ್ಚ್ 2022 ರವರೆಗೆ ಅದನ್ನು ಪಾವತಿಸಲು ಸಮಯಾವಕಾಶವಿದೆ. ಆದರೆ ಇದೀಗ ನೀವು ರಿಟರ್ನ್ ಸಲ್ಲಿಸಲು ದಂಡವನ್ನು ಪಾವತಿಸಬೇಕಾಗುತ್ತದೆ. ನಿಮ್ಮ ತೆರಿಗೆಗೆ ಒಳಪಡುವ ಆದಾಯವು 5 ಲಕ್ಷಕ್ಕಿಂತ ಹೆಚ್ಚಿದ್ದರೆ ನೀವು 5,000 ರೂಪಾಯಿಗಳ ದಂಡವನ್ನು ಪಾವತಿಸಬೇಕಾಗುತ್ತದೆ ಮತ್ತು ತೆರಿಗೆಯ ಆದಾಯವು 5 ಲಕ್ಷಕ್ಕಿಂತ ಕಡಿಮೆಯಿದ್ದರೆ ನೀವು 1,000 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ಆದರೆ ನೀವು ಮಾರ್ಚ್ 15, 2022 ರ ನಂತರ ರಿಟರ್ನ್ ಅನ್ನು ಸಲ್ಲಿಸಿದರೆ, ನೀವು 10,000 ರೂಪಾಯಿಗಳ ದಂಡದ ಜೊತೆಗೆ ತೆರಿಗೆಗೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ-LPG ಸಿಲಿಂಡರ್‌ಗಿಂತ ತುಂಬಾ ಅಗ್ಗದ ಬೆಲೆಗೆ ಸಿಗುತ್ತೆ PNG ಗ್ಯಾಸ್! ಇದು ಬಳಕೆಗೆ ತುಂಬಾ ಉತ್ತಮ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.