Business Loan : ಕೇವಲ 30 ನಿಮಿಷಗಳಲ್ಲಿ ಮನೆಯಿಂದಲೇ ಸಿಗಲಿದೆ ಸಾಲ! ಹೇಗೆ ಇಲ್ಲಿದೆ ನೋಡಿ

ಸಾಲ ಮಂಜೂರಾಗಲು ಹಲವು ದಿನಗಳು ಬೇಕಾಗುವ ಸಂದರ್ಭದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬ್ಯಾಂಕ್‌ ಒಂದು ಮುಂದಾಗಿದೆ. ಈ ವಿಶೇಷ ವೈಶಿಷ್ಟ್ಯದ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.

Written by - Channabasava A Kashinakunti | Last Updated : Jan 13, 2022, 03:44 PM IST
  • ಮನೆಯಲ್ಲಿ ಕುಳಿತು ಸಾಲ ಪಡೆಯಬಹುದು
  • ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು
  • ಈ ಸೇವೆಯನ್ನು ಪ್ರಾರಂಭಿಸಿದ ಫೆಡರಲ್ ಬ್ಯಾಂಕ್
Business Loan : ಕೇವಲ 30 ನಿಮಿಷಗಳಲ್ಲಿ ಮನೆಯಿಂದಲೇ ಸಿಗಲಿದೆ ಸಾಲ! ಹೇಗೆ ಇಲ್ಲಿದೆ ನೋಡಿ title=

ನವದೆಹಲಿ : ದೇಶದ ಸಣ್ಣ ವ್ಯಾಪಾರಿಗಳಿಗೆ ಸಿಹಿ ಸುದ್ದಿ ಇದೆ. ಈಗ ಕೇವಲ 30 ನಿಮಿಷಗಳಲ್ಲಿ 50 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು. ಸಾಲ ಮಂಜೂರಾಗಲು ಹಲವು ದಿನಗಳು ಬೇಕಾಗುವ ಸಂದರ್ಭದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬ್ಯಾಂಕ್‌ ಒಂದು ಮುಂದಾಗಿದೆ. ಈ ವಿಶೇಷ ವೈಶಿಷ್ಟ್ಯದ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.

ಆನ್‌ಲೈನ್ ಸಾಲ ನೀಡುವ ವೇದಿಕೆ ಪ್ರಾರಂಭಿಸಿದೆ

ಖಾಸಗಿ ವಲಯದ ಫೆಡರಲ್ ಬ್ಯಾಂಕ್ ಆನ್‌ಲೈನ್ ಸಾಲಕ್ಕಾಗಿ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದೆ, Federalinstaloans.com. ಬ್ಯಾಂಕ್ ಭಾರತದಾದ್ಯಂತ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME) ಈ ಸೌಲಭ್ಯವನ್ನು ಪ್ರಾರಂಭಿಸಿದೆ. MSME ಗ್ರಾಹಕರು 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಫೆಡರಲ್ ಬ್ಯಾಂಕ್ ಹೇಳಿದೆ. ಇದಕ್ಕಾಗಿ ಅರ್ಹ ಉದ್ಯಮಿಗಳು ಪ್ರಸ್ತುತ ಪ್ಲಾಟ್‌ಫಾರ್ಮ್ ಮೂಲಕ 50 ಲಕ್ಷ ರೂ.ವರೆಗೆ ಪಡೆಯಬಹುದು. ಇದಕ್ಕಾಗಿ ಆದಾಯ ತೆರಿಗೆ ರಿಟರ್ನ್ (ITR), ಬ್ಯಾಂಕ್ ಖಾತೆ ಹೇಳಿಕೆ ಮತ್ತು ಸರಕು ಮತ್ತು ಸೇವಾ ತೆರಿಗೆ (GST) ವಿವರಗಳನ್ನು ಅಪ್‌ಲೋಡ್ ಮಾಡಬೇಕು.

ಇದನ್ನೂ ಓದಿ : LPG ಸಿಲಿಂಡರ್‌ಗಿಂತ ತುಂಬಾ ಅಗ್ಗದ ಬೆಲೆಗೆ ಸಿಗುತ್ತೆ PNG ಗ್ಯಾಸ್! ಇದು ಬಳಕೆಗೆ ತುಂಬಾ ಉತ್ತಮ

ಮನೆಯಲ್ಲಿ ಕುಳಿತು ಸಾಲ ಪಡೆಯಬಹುದು

ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಗ್ರಾಹಕರು ಬ್ಯಾಂಕ್ ಶಾಖೆಗೆ ಹೋಗಬೇಕಾಗಿಲ್ಲ ಎಂದು ಫೆಡರಲ್ ಬ್ಯಾಂಕ್(Federal Bank) ಹೇಳಿದೆ. ಅವರು ಆನ್‌ಲೈನ್‌ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳನ್ನು ಅಪ್‌ಲೋಡ್ ಮಾಡಿದ ದಾಖಲೆಗಳಿಂದ ಅಂದರೆ ಜಿಎಸ್‌ಟಿ, ಐಟಿಆರ್ ಮತ್ತು ಬ್ಯಾಂಕ್ ಖಾತೆ ವಿವರಗಳಿಂದ ಸ್ವಯಂಚಾಲಿತವಾಗಿ ಭರ್ತಿ ಮಾಡುವುದರಿಂದ ಗ್ರಾಹಕರ ಡೇಟಾ ಎಂಟ್ರಿಯನ್ನು ಕನಿಷ್ಠಕ್ಕೆ ಇರಿಸಲಾಗುತ್ತದೆ ಎಂದು ಬ್ಯಾಂಕ್ ಹೇಳಿದೆ. ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಾಲ ಲಭ್ಯವಾಗುತ್ತದೆ. ಪೇಪರ್‌ಗಳನ್ನು ಪೂರ್ಣಗೊಳಿಸಲು ಸಾಲಗಾರ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾಗುತ್ತದೆ.

ಫೆಡರಲ್ ಬ್ಯಾಂಕ್ FedFina ನ IPO ಅನ್ನು ಅನುಮೋದಿಸುತ್ತದೆ

ಫೆಡರಲ್ ಬ್ಯಾಂಕ್ ತನ್ನ ಅಂಗಸಂಸ್ಥೆ ಫೆಡ್‌ಬ್ಯಾಂಕ್ ಫೈನಾನ್ಷಿಯಲ್ ಸರ್ವೀಸಸ್ (FedFina) ದ ಆರಂಭಿಕ ಸಾರ್ವಜನಿಕ ಕೊಡುಗೆ (IPO) ಪ್ರಕ್ರಿಯೆಯನ್ನು ಅನುಮೋದಿಸಿದೆ. Fedfina ಪ್ರಸ್ತಾಪಿಸಿದ IPO ಗೆ ಸಂಬಂಧಿಸಿದಂತೆ ಬೆಲೆ ಮತ್ತು ಇತರ ವಿವರಗಳನ್ನು ಸರಿಯಾದ ಸಮಯದಲ್ಲಿ ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ : Gold Price: ದೇಶದ ಪ್ರಮುಖ ನಗರಗಳಲ್ಲಿ ಜನವರಿ 13 ರ ಚಿನ್ನ-ಬೆಳ್ಳಿ ದರ ಹೀಗಿದೆ

2010 ರಲ್ಲಿ, ಫೆಡ್ಫಿನಾ ನಾನ್-ಬ್ಯಾಂಕಿಂಗ್ ಫೈನಾನ್ಸ್ ಕಂಪನಿಯ ಪರವಾನಗಿಯನ್ನು ಪಡೆದುಕೊಂಡಿತು ಮತ್ತು ಪ್ರಸ್ತುತ ಅದು ದೇಶಾದ್ಯಂತ 435 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಕಂಪನಿಯು ಗೋಲ್ಡ್ ಲೋನ್, ಹೋಮ್ ಲೋನ್, ಪ್ರಾಪರ್ಟಿ ವಿರುದ್ಧ ಸಾಲ ಮತ್ತು ಬಿಸಿನೆಸ್ ಲೋನ್ ನೀಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News