ಭಾರತದ ಅತ್ಯಂತ ಹಿರಿಯ ಬಿಲಿಯನೇರ್ ಕೇಶುಬ್ ಮಹೀಂದ್ರಾ ವಿಧಿವಶ
Keshub Mahindra death: ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ವೈವಿಧ್ಯೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮಹೀಂದ್ರಾ ಗ್ರೂಪ್‌ನ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ 99 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
Mahindra Group Ex-Chairman Keshub Mahindra No More: ಭಾರತದ ಅತ್ಯಂತ ಹಿರಿಯ ಬಿಲಿಯನೇರ್, ಮಹೀಂದ್ರಾ ಗ್ರೂಪ್‌ನ ಮಾಜಿ ಅಧ್ಯಕ್ಷ ಮತ್ತು ಕೈಗಾರಿಕೋದ್ಯಮಿ ಕೇಶುಬ್ ಮಹೀಂದ್ರಾ ತಮ್ಮ 99ನೇ ವಯಸ್ಸಿನಲ್ಲಿ ಬುಧವಾರ(ಏಪ್ರಿಲ್ 12) ವಿಧಿವಶರಾಗಿದ್ದಾರೆ. ಇತ್ತೀಚೆಗಷ್ಟೇ ಫೋರ್ಬ್ಸ್ ಬಿಡುಗಡೆ ಮಾಡಿರುವ 2023ರ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕೇಶುಬ್ ಮಹೀಂದ್ರಾ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಅವರು ಭಾರತದ ಅತ್ಯಂತ ಹಿರಿಯ ಬಿಲಿಯನೇರ್ ಆಗಿ ಹೊರಹೊಮ್ಮಿದ್ದರು. ಕೇಶುಬ್ ಮಹೀಂದ್ರಾ ಅವರು ಮಹೀಂದ್ರಾ ಮತ್ತು ಮಹೀಂದ್ರಾದ ಪ್ರಸ್ತುತ ಅಧ್ಯಕ್ಷ ಆನಂದ್ ಮಹೇಂದ್ರ ಅವರ ಚಿಕ್ಕಪ್ಪ.
ಕೇಶುಬ್ ಮಹೀಂದ್ರಾ ನಿಧನದ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದ (INSPACe) ಅಧ್ಯಕ್ಷ ಪವನ್ ಗೋಯೆಂಕಾ, "ಕೈಗಾರಿಕಾ ಜಗತ್ತು ಇಂದು ಒಬ್ಬ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿದೆ. ಶ್ರೀ ಕೇಶುಬ್ ಮಹೀಂದ್ರಾ ಅವರಿಗೆ ಸರಿಸಾಟಿಯಾದವರು ಮತ್ತೊಬ್ಬರಿಲ್ಲ. ನಾನು ಸದಾ ಅವರೊಂದಿಗೆ ಎಂಟಿಜಿಎಸ್‌ಗಾಗಿ ಎದುರು ನೋಡುತ್ತಿದ್ದೆ ಮತ್ತು ಅವರು ವ್ಯಾಪಾರ, ಅರ್ಥಶಾಸ್ತ್ರ ಮತ್ತು ಸಾಮಾಜಿಕ ವಿಷಯಗಳನ್ನು ಹೇಗೆ ಸಂಪರ್ಕಿಸಿದರು ಎಂಬುದರ ಬಗ್ಗೆ ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ಓಂ ಶಾಂತಿ" ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಇನ್ನು ಚಿನ್ನ ಖರೀದಿ ಬರೀ ಕನಸು ! ಹಿಂದೆಂದೂ ಕಾಣದ ಬೆಲೆ ತಲುಪಿದ ಬಂಗಾರ
ಕೇಶುಬ್ ಮಹೀಂದ್ರಾ ಅವರು ಅಕ್ಟೋಬರ್ 9, 1923 ರಂದು ಶಿಮ್ಲಾದಲ್ಲಿ ಜನಿಸಿದರು. ಅವರು ಯುಎಸ್‌ನ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ಕೇಶುಬ್ 1947 ರಲ್ಲಿ ಮಹೀಂದ್ರಾ ಗ್ರೂಪ್‌ಗೆ ಸೇರಿದರು. 1963 ರಲ್ಲಿ ಅವರು ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಇದನ್ನೂ ಓದಿ- ಸರ್ಕಾರಿ ನೌಕರರಿಗೆ ಶಾಕ್ ನೀಡಿದ ಸರ್ಕಾರ! ಆಗಲಿದೆ ಬಹು ದೊಡ್ಡ ನಷ್ಟ
ಮಹೀಂದ್ರಾ ಸಮೂಹದ ವೈವಿಧ್ಯೀಕರಣದಲ್ಲಿ ಕೇಶುಬ್ ಮಹೀಂದ್ರಾ ಪ್ರಮುಖ ಪಾತ್ರವನ್ನು ವಹಿಸಿದರು ಎಂಬುದನ್ನೂ ಇಲ್ಲಿ ಸ್ಮರಿಸಬಹುದು. ಸುಮಾರು ಐದು ದಶಕಗಳ ಕಾಲ ಕಂಪನಿಯನ್ನು ಮುನ್ನಡೆಸಿದರು ಮತ್ತು ಆಗಸ್ಟ್ 2012 ರಲ್ಲಿ ಅಧ್ಯಕ್ಷರಾಗಿ ನಿವೃತ್ತರಾದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.