ಸರ್ಕಾರಿ ನೌಕರರಿಗೆ ಶಾಕ್ ನೀಡಿದ ಸರ್ಕಾರ! ಆಗಲಿದೆ ಬಹು ದೊಡ್ಡ ನಷ್ಟ

General Provident Fund :ಏಪ್ರಿಲ್ 1 ರಿಂದ, ಆಯ್ದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಹಣಕಾಸು ಸಚಿವಾಲಯವು ಬದಲಾಯಿಸಿದೆ. ಆದರೆ ಸಾಮಾನ್ಯ ಭವಿಷ್ಯ ನಿಧಿ ಬಡ್ಡಿದರವನ್ನು ಹೆಚ್ಚಿಸದಿರಲು ಸರ್ಕಾರ ನಿರ್ಧರಿಸಿದೆ. 

Written by - Ranjitha R K | Last Updated : Apr 12, 2023, 09:43 AM IST
  • ಸರ್ಕಾರಿ ನೌಕರರಿಗೆ ಭಾರೀ ದೊಡ್ಡ ಹೊಡೆತ
  • 65 ಲಕ್ಷ ಕೇಂದ್ರ ನೌಕರರಿಗೆ ಕೇಂದ್ರ ಸರ್ಕಾರ ಬಹು ದೊಡ್ಡ ಶಾಕ್
  • GPF ಮೇಲಿನ ಬಡ್ಡಿದರದಲ್ಲಿ ಬದಲಾವಣೆ ಇಲ್ಲ
ಸರ್ಕಾರಿ ನೌಕರರಿಗೆ ಶಾಕ್ ನೀಡಿದ ಸರ್ಕಾರ! ಆಗಲಿದೆ ಬಹು ದೊಡ್ಡ ನಷ್ಟ  title=

General Provident Fund : ಸರ್ಕಾರಿ ನೌಕರರಿಗೆ ಭಾರೀ ದೊಡ್ಡ ಹೊಡೆತ ಬಿದ್ದಿದೆ. 65 ಲಕ್ಷ ಕೇಂದ್ರ ನೌಕರರಿಗೆ ಕೇಂದ್ರ ಸರ್ಕಾರ ಬಹು ದೊಡ್ಡ ಶಾಕ್ ನೀಡಿದೆ. ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದ ನಂತರ, ಉದ್ಯೋಗಿಗಳ ಸಾಮಾನ್ಯ ಭವಿಷ್ಯ ನಿಧಿ (GPF) ಮೇಲಿನ ಬಡ್ಡಿದರವನ್ನು ಕೂಡಾ ಹೆಚ್ಚಿಸುವ ನಿರೀಕ್ಷೆಯಿತ್ತು. ಆದರೆ ಸತತ 14ನೇ ತ್ರೈಮಾಸಿಕದಲ್ಲಿ ಜಿಪಿಎಫ್ ಮೇಲಿನ ಬಡ್ಡಿ ದರದಲ್ಲಿ ಸರಕಾರ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ. ಬಡ್ಡಿ ದರ ಏರಿಕೆ ಮಾಡದ ಕಾರಣ ಉದ್ಯೋಗಿಗಳಿಗೆ  ನಷ್ಟ ಉಂಟಾಗಿದ್ದಂತೂ ಖಂಡಿತಾ.  

ಏಪ್ರಿಲ್ 1 ರಿಂದ ಬಡ್ಡಿದರದಲ್ಲಿ ಬದಲಾವಣೆ : 
 ಏಪ್ರಿಲ್-ಜೂನ್ 2023 ತ್ರೈಮಾಸಿಕದಲ್ಲಿಯೂ  GPF ಬಡ್ಡಿ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಲಾಗಿಲ್ಲ. ಏಪ್ರಿಲ್ 1 ರಿಂದ, ಆಯ್ದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಹಣಕಾಸು ಸಚಿವಾಲಯವು ಬದಲಾಯಿಸಿದೆ. ಆದರೆ ಸಾಮಾನ್ಯ ಭವಿಷ್ಯ ನಿಧಿ ಬಡ್ಡಿದರವನ್ನು ಹೆಚ್ಚಿಸದಿರಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಬಡ್ಡಿದರ ಏರಿಕೆ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರಿಗೆ ಶಾಕ್‌ ಸಿಕ್ಕಿದೆ.

ಇದನ್ನೂ ಓದಿ : Income Tax Slab: ಆದಾಯ ತೆರಿಗೆ ಪಾವತಿದಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ವಿತ್ತ ಸಚಿವಾಲಯ, ಇನ್ಮುಂದೆ ಇದರ ಮೇಲೂ ತೆರಿಗೆ ವಿನಾಯ್ತಿ ಸಿಗಲಿದೆ!

ಸತತ 14ನೇ ತ್ರೈಮಾಸಿಕದಲ್ಲಿ ಬಡ್ಡಿ ದರದಲ್ಲಿ ಹೆಚ್ಚಳ ಇಲ್ಲ :  
ಕಳೆದ 13 ತ್ರೈಮಾಸಿಕಗಳಿಂದ ಜಿಪಿಎಫ್‌ನ ಬಡ್ಡಿ ದರವನ್ನು ಹೆಚ್ಚಿಸಿಲ್ಲ. 14ನೇ ಬಾರಿಯೂ ಬಡ್ಡಿ ದರವನ್ನು ಮೊದಲಿನಂತೆಯೇ ಇಡಲಾಗಿದೆ. ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ (ಏಪ್ರಿಲ್ 1, 2023 ರಿಂದ ಜೂನ್ 30, 2023 ರವರೆಗೆ) ಸಾಮಾನ್ಯ ಭವಿಷ್ಯ ನಿಧಿ ಮತ್ತು ಇತರ ರೀತಿಯ ನಿಧಿಗಳಲ್ಲಿನ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡಾ 7.1  ರಷ್ಟೇ ಉಳಿಸುವುದಾಗಿ ಹಣಕಾಸು ಸಚಿವಾಲಯ ಘೋಷಿಸಿದೆ.

ಯಾರಿಗೆ ಸಿಗುತ್ತದೆ  GPF ? : 
ಸಾಮಾನ್ಯ ಭವಿಷ್ಯ ನಿಧಿಯನ್ನು  ಸರ್ಕಾರಿ ನೌಕರರಿಗೆ ಮಾತ್ರ ನೀಡಲಾಗುತ್ತದೆ. GPF ಅಡಿಯಲ್ಲಿ, ಸರ್ಕಾರಿ ನೌಕರರು ತಮ್ಮ ವೇತನದ ನಿರ್ದಿಷ್ಟ ಭಾಗವನ್ನು ಸಾಮಾನ್ಯ ಭವಿಷ್ಯ ನಿಧಿಯಲ್ಲಿ  ಹೂಡಿಕೆ ಮಾಡಲು ಅನುವೂ ನೀಡಲಾಗಿದೆ.  ಹೀಗೆ ಸಂಗ್ರಹವಾದ ಒಟ್ಟು ಮೊತ್ತವನ್ನು ನಿವೃತ್ತಿಯ ಸಮಯದಲ್ಲಿ ಉದ್ಯೋಗಿಗಳಿಗೆ  ನೀಡಲಾಗುವುದು. GPF ಮೇಲಿನ ಬಡ್ಡಿ ದರವನ್ನು ಹಣಕಾಸು ಸಚಿವಾಲಯವು ಪ್ರತಿ ತ್ರೈಮಾಸಿಕದಲ್ಲಿ ಪರಿಷ್ಕರಿಸುತ್ತದೆ.

ಇದನ್ನೂ ಓದಿ : Ration Card Update: ಬಂತು ಭಾರಿ ಸಂತಸದ ಸುದ್ದಿ, ರೇಷನ್ ಕಾರ್ಡ್ ನಿಯಮದಲ್ಲಿ ದೊಡ್ಡ ಬದಲಾವಣೆ, ಇದೀಗ ದುಪ್ಪಟ್ಟು ಲಾಭ ನಿಮ್ಮದಾಗಿಸಿಕೊಳ್ಳಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News