Indian Economy News: ಮುಂಬರುವ ವರ್ಷವು ದೇಶದ ದೇಶದ ಬೆಳವಣಿಗೆಯ ದರದ ವಿಷಯದಲ್ಲಿ ಸವಾಲಿನ ಸಂಗತಿಯಾಗಿರಲಿದೆ.  ಗ್ರಾಹಕರ ಬೇಡಿಕೆಯಲ್ಲಿ ಹಣದುಬ್ಬರ ಮತ್ತು ವಿತ್ತೀಯ ನೀತಿಯ ಸಾಮಾನ್ಯೀಕರಣದ ಬಗ್ಗೆ ಇರುವ ಕಳವಳದಿಂದಾಗಿ ಮುಂಬರುವ ವರ್ಷವು (Next Fiscal Year) ಹಿಂದಿನ ಎರಡು ವರ್ಷಗಳಿಗಿಂತ ಹೆಚ್ಚು ಅಪಾಯಕಾರಿಯಾಗಿರಬಹುದು. PTI ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ವಾಲ್ ಸ್ಟ್ರೀಟ್ ಬ್ರೋಕರೇಜ್ ಕಂಪನಿಯಾಗಿರುವ  BofA, ಮುಂದಿನ ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನದಲ್ಲಿ (GDP) ಶೇ. 8.2 ರಷ್ಟು ಬೆಳವಣಿಗೆಯಾಗುವ ಅಂದಾಜು ವ್ಯಕ್ತಪಡಿಸಿದೆ. ಇದರಲ್ಲಿ ಅನೇಕ ಅಪಾಯಕಾರಿ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.


COMMERCIAL BREAK
SCROLL TO CONTINUE READING

ಗ್ರಾಹಕರ ಬೇಡಿಕೆಯ ಹಳಿತಪ್ಪುವಿಕೆಯು ದೊಡ್ಡ ಅಪಾಯವಾಗಿದೆ
ಸುದ್ದಿಯ ಪ್ರಕಾರ, ಬ್ಯಾಂಕ್ ಆಫ್ ಅಮೇರಿಕಾ ಸೆಕ್ಯುರಿಟೀಸ್ ಇಂಡಿಯಾ (BOFA) ದ ಅರ್ಥಶಾಸ್ತ್ರಜ್ಞರು ತಮ್ಮ GDP ಮುನ್ಸೂಚನೆಯಲ್ಲಿ (BofA Forecast) ಗ್ರಾಹಕರ ಬೇಡಿಕೆಯ ಹಳಿತಪ್ಪುವಿಕೆಯೇ ದೊಡ್ಡ ಅಪಾಯ ಎಂದು ಹೇಳಿದ್ದಾರೆ, ಇದು ಕಳೆದ ಹಲವಾರು ವರ್ಷಗಳಿಂದ ಬೆಳವಣಿಗೆಯ ಪ್ರಮುಖ ಅಂಶವಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿಯೂ ಗ್ರಾಹಕರ ಬೇಡಿಕೆಯು ಬೆಳವಣಿಗೆಯ ಪ್ರಮುಖ ಅಂಶವಾಗಿ  ಮುಂದುವರಿಯುತ್ತದೆ ಎಂದು ಅವರು ಅಭಿಮತ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮ ಭಾರತದ ಆರ್ಥಿಕತೆಯ ಮೇಲೆ ಕಾಣಿಸಲಿದೆ ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ-New Composite Cylinder: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಸ ಹಗುರ ಸಿಲಿಂಡರ್, ಇಲ್ಲಿದೆ ವಿಶೇಷತೆ


RBI ರೆಪೊ ದರವನ್ನು 100 bps ವರೆಗೆ ಹೆಚ್ಚಿಸಬಹುದು
ಹಣದುಬ್ಬರ (ಹಣದುಬ್ಬರ) ಮತ್ತು ಗ್ರಾಹಕರ ಬೇಡಿಕೆಯ ಮೇಲೆ ವಿತ್ತೀಯ ನೀತಿ ಸಾಮಾನ್ಯೀಕರಣದ ಪ್ರಭಾವವನ್ನು ಈ ಮುನ್ಸೂಚನೆಯಲ್ಲಿ ಅತಿದೊಡ್ಡ ಅಪಾಯಕಾರಿ ಅಂಶಗಳೆಂದು ವಿವರಿಸಿದ ಅರ್ಥಶಾಸ್ತ್ರಜ್ಞರು, 2022-23 ರ ಹಣಕಾಸು ವರ್ಷದಲ್ಲಿ RBI ತನ್ನ ರೆಪೊ ದರವನ್ನು 100 bps ಹೆಚ್ಚಿಸಬಹುದು ಎಂದು ಹೇಳಿದ್ದಾರೆ. ಇದು ಗ್ರಾಹಕರ ಬೇಡಿಕೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಅವರು ಭೀತಿ ವ್ಯಕ್ತಪಡಿಸಿದ್ದಾರೆ. ವರದಿಯ ಪ್ರಕಾರ, ಮತ್ತೊಂದು ಪ್ರಮುಖ ಅಪಾಯವೆಂದರೆ ಮುಂದಿನ ವರ್ಷ ಕೆಟ್ಟ ಮಾನ್ಸೂನ್ ಮುನ್ಸೂಚನೆ ಕೂಡ ವ್ಯಕ್ತವಾಗಿದೆ. ಕಳೆದ ಮೂರು ವರ್ಷಗಳಿಂದ ಉತ್ತಮ ಮುಂಗಾರು ಮಳೆಯಾಗಿದ್ದು, ಕೃಷಿ ಕ್ಷೇತ್ರಕ್ಕೆ ಅನುಕೂಲವಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.


ಇದನ್ನೂ ಓದಿ-Debit Card, Credit Card ಹೊಂದಿದ ಗ್ರಾಹಕರಿಗೆ RBI ನಿಂದ ಮಹತ್ವದ ಮಾಹಿತಿ


ಗೋಲ್ಡ್ಮನ್ ಸ್ಯಾಚ್ಸ್ ಮುನ್ಸೂಚನೆ
ಕಳೆದ ತಿಂಗಳು, ಗೋಲ್ಡ್‌ಮನ್ ಸ್ಯಾಚ್ಸ್ ಮುಂದಿನ ಹಣಕಾಸು ವರ್ಷದಲ್ಲಿ ಅಂದರೆ 2022-23ರಲ್ಲಿ ಆರ್ಥಿಕ ಬೆಳವಣಿಗೆಯ ದರ ಶೇ. 9.8  ಇರಲಿದೆ ಎಂಬ ಮುನ್ಸೂಚನೆಯನ್ನು ವ್ಯಕ್ತಪಡಿಸಿದೆ. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನದ (GDP) ಬೆಳವಣಿಗೆ ದರವನ್ನು ಶೇ 8.5 ಎಂದು ಅಂದಾಜಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಅಂದರೆ, 2020-21ರಲ್ಲಿ ದೇಶದ ಬೆಳವಣಿಗೆ ದರ ಶೇ.7.3ಕ್ಕೆ ಇಳಿಕೆಯಾಗಿದೆ.


ಇದನ್ನೂ ಓದಿ-Bank Holidays in January: ಜನವರಿಯಲ್ಲಿ 14 ದಿನಗಳವೆಗೆ ಬ್ಯಾಂಕ್ ಬಂದ್, ರಜಾ ದಿನ ನೋಡಿಕೊಂಡು ವ್ಯವಹಾರ ನಡೆಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.