Bank Holidays in January: ಜನವರಿಯಲ್ಲಿ 14 ದಿನಗಳವೆಗೆ ಬ್ಯಾಂಕ್ ಬಂದ್, ರಜಾ ದಿನ ನೋಡಿಕೊಂಡು ವ್ಯವಹಾರ ನಡೆಸಿ

ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲೂ 14 ದಿನಗಳವರೆಗೆ ಬ್ಯಾಂಕ್‌ಗಳು ಮುಚ್ಚಿರುವುದಿಲ್ಲ. ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯ ಪ್ರಕಾರ, ಈ ರಜಾದಿನಗಳು ಆಯಾ ರಾಜ್ಯಗಳಿಗೆ ಸಂಬಂಧ ಪಟ್ಟದ್ದಾಗಿದೆ. 

Written by - Ranjitha R K | Last Updated : Dec 24, 2021, 04:03 PM IST
  • ಜನವರಿ 2022 ರಲ್ಲಿ 14 ದಿನಗಳ ಬ್ಯಾಂಕ್ ರಜೆ ಇರುತ್ತದೆ
  • ರಜಾ ಪಟ್ಟಿ ಬಿಡುಗಡೆ ಮಾಡಿದ ಆರ್‌ಬಿಐ ಪಟ್ಟಿ
  • ಎಲ್ಲಾ ರಾಜ್ಯಗಳಿಗೂ ರಜಾದಿನಗಳು ಅನ್ವಯಿಸುವುದಿಲ್ಲ
Bank Holidays in January: ಜನವರಿಯಲ್ಲಿ 14 ದಿನಗಳವೆಗೆ ಬ್ಯಾಂಕ್ ಬಂದ್, ರಜಾ ದಿನ ನೋಡಿಕೊಂಡು ವ್ಯವಹಾರ ನಡೆಸಿ  title=
ಜನವರಿ 2022 ರಲ್ಲಿ 14 ದಿನಗಳ ಬ್ಯಾಂಕ್ ರಜೆ ಇರುತ್ತದೆ (file photo)

ನವದೆಹಲಿ : ಹೊಸ ವರ್ಷದ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ವರ್ಷದ ಆರಂಭದ ಮೊದಲು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಜನವರಿ 2022 ರಲ್ಲಿ ಬ್ಯಾಂಕ್ ರಜಾದಿನಗಳ  (Bank holidays) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ, ಜನವರಿ 2022 ರಲ್ಲಿ ಒಟ್ಟು 14 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಈ ಕಾರಣದಿಂದಾಗಿ, ಬ್ಯಾಂಕ್ ನಲ್ಲಿ (Bank) ಯಾವುದೇ ಪ್ರಮುಖ ಕೆಲಸ ಹೊಂದಿದ್ದರೆ, ರಜಾ ದಿನವನ್ನು ಗಮನಿಸಿಕೊಂಡು ವ್ಯವಹಾರ ಇಟ್ಟುಕೊಳ್ಳುವುದು ಒಳಿತು. 

14 ದಿನ ಬ್ಯಾಂಕ್ ರಜೆ :
ಜನವರಿ 2022 ರಲ್ಲಿ,  ಒಟ್ಟು 14 ದಿನಗಳವರೆಗೆ ಬ್ಯಾಂಕ್ ರಜೆ (janaury bank holidays) ಇರುತ್ತದೆ. ಇದರಲ್ಲಿ 4 ಭಾನುವಾರಗಳು ಸೇರಿವೆ. ಅಲ್ಲದೆ ಕೆಲವು ರಜಾದಿನಗಳು ನಿರಂತರವಾಗಿ ಬೀಳುತ್ತವೆ. ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲೂ 14 ದಿನಗಳವರೆಗೆ ಬ್ಯಾಂಕ್‌ಗಳು ಮುಚ್ಚಿರುವುದಿಲ್ಲ. ಆರ್‌ಬಿಐನ (RBI) ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯ ಪ್ರಕಾರ, ಈ ರಜಾದಿನಗಳು ಆಯಾ ರಾಜ್ಯಗಳಿಗೆ ಸಂಬಂಧ ಪಟ್ಟದ್ದಾಗಿದೆ. ಈ ಎಲ್ಲಾ ರಜಾದಿನಗಳು ಎಲ್ಲಾ ರಾಜ್ಯಗಳಲ್ಲಿ ಅನ್ವಯಿಸುವುದಿಲ್ಲ. ಇನ್ನು ಆರ್‌ಬಿಐ (RBI Guidelines) ಮಾರ್ಗಸೂಚಿಗಳ ಪ್ರಕಾರ, ಭಾನುವಾರದ ಹೊರತಾಗಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಇದನ್ನೂ ಓದಿ : ಈ ನಗರದ ಗ್ರಾಹಕರಿಗೆ ಸಿಗಲಿದೆ Ola ಎಲೆಕ್ಟ್ರಿಕ್ ಸ್ಕೂಟರ್ , ನಿಮ್ಮ ನಗರದ ಇದರಲ್ಲಿದೆಯೇ ನೋಡಿಕೊಳ್ಳಿ

ಈ ದಿನಗಳಲ್ಲಿ ರಜೆ ಇರುತ್ತದೆ 

ದಿನಾಂಕ    ದಿನ  ಹಬ್ಬ 
1 ಜನವರಿ                                     ಶನಿವಾರ  ದೇಶಾದ್ಯಂತ ಹೊಸ ವರ್ಷದ ರಜೆ 
2 ಜನವರಿ  ಭಾನುವಾರ          ದೇಶದಾದ್ಯಂತ ಸಾಪ್ತಾಹಿಕ ರಜೆ
3 ಜನವರಿ    ಸೋಮವಾರ  ಸಿಕ್ಕಿಂ ಹೊಸ ವರ್ಷ ಮತ್ತು ಲಸುಂಗ್ ರಜೆ
4 ಜನವರಿ     ಮಂಗಳವಾರ   ಸಿಕ್ಕಿಂನಲ್ಲಿ ಲಸುಂಗ್ ಹಬ್ಬದ ರಜೆ
9 ಜನವರಿ         ಭಾನುವಾರ    ದೇಶಾದ್ಯಂತ, ವಾರದ ರಜೆ 
11 ಜನವರಿ  ಮಂಗಳವಾರ  ಮಿಷನರಿ ಡೇ ಮಿಜೋರಾಂ
12 ಜನವರಿ    ಬುಧವಾರ  ಸ್ವಾಮಿ ವಿವೇಕಾನಂದ ಜಯಂತಿ
14 ಜನವರಿ  ಶುಕ್ರವಾರ ಮಕರ ಸಂಕ್ರಾಂತಿ
15  ಜನವರಿ   ಶನಿವಾರ    ಪೊಂಗಲ್  (ಆಂಧ್ರಪ್ರದೇಶ, ಪುದುಚೇರಿ, ತಮಿಳುನಾಡು)
16 ಜನವರಿ ಭಾನುವಾರ         ದೇಶದಾದ್ಯಂತ ವಾರದ ರಜೆ
23 ಜನವರಿ    ಭಾನುವಾರ     ದೇಶಾದ್ಯಂತ ವಾರದ ರಜೆ
25 ಜನವರಿ     ಮಂಗಳವಾರ       ರಾಜ್ಯ ಸಂಸ್ಥಾಪನಾ ದಿನ ಹಿಮಾಚಲ ಪ್ರದೇಶ
26 ಜನವರಿ       ಬುಧವಾರ    ಗಣರಾಜ್ಯೋತ್ಸವ 
31  ಜನವರಿ   ಸೋಮವಾರ    ಅಸ್ಸಾಂನಲ್ಲಿ ರಜಾದಿನ 

ಇದನ್ನೂ ಓದಿ : eKYC ಇಲ್ಲದೆ ಖಾತೆಗೆ ಬರುವುದಿಲ್ಲ ಪಿಎಂ ಕಿಸಾನ್ 10ನೇ ಕಂತು, ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News