ನವದೆಹಲಿ: ಪ್ರಯಾಣಿಕರಿಗೆ ಉತ್ತಮ ಸೇವೆಗಳನ್ನು ಒದಗಿಸುವ ಸಲುವಾಗಿ ಭಾರತೀಯ ರೈಲ್ವೆ (Indian Railway) ಎಲ್ಲಾ ಪ್ರಯತ್ನಗಳನ್ನೂ ನಡೆಸುತ್ತಿದೆ. ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವತ್ತ ಹೆಚ್ಚಿನ ಗಮನ ಹರಿಸುತ್ತಿದೆ. ಇದೀಗ ಪ್ರಯಾಣಿಕರ ಸೌಲಭ್ಯದ ಜೊತೆಗೆ ಪ್ರೈವೆಸಿಯ (Privacy) ಬಗ್ಗೆಯೂ ರೈಲ್ವೆ ಇಲಾಖೆ ಗಮನ ಹರಿಸಿದೆ. ಈ ಹಿನ್ನೆಲೆಯಲ್ಲಿ ರೈಲಿನಲ್ಲಿ ಸ್ಮಾರ್ಟ್ ವಿಂಡೋ (Smart window) ಆರಂಭಿಸುವ ಬಗ್ಗೆ ಯೋಚಿಸಿದೆ. ದೆಹಲಿ ಹೌರಾ ರಾಜಧಾನಿ ರೈಲಿನಲ್ಲಿ ಈಗಾಗಲೇ ಈ ವಿಂಡೋವನ್ನು ಅಳವಡಿಸಲಾಗಿದೆ. ಈ ರೈಲಿನ ಫ್ಲಸ್ಟ್ ಕ್ಲಾಸ್ ಬೋಗಿಗಳಲ್ಲಿ ಈ ಸ್ಮಾರ್ಟ್ ವಿಂಡೋವನ್ನು ಅಳವಡಿಸಲಾಗಿದೆ.


COMMERCIAL BREAK
SCROLL TO CONTINUE READING

ಏನಿದು ಸ್ಮಾರ್ಟ್ ವಿಂಡೋ : 
ಸ್ಮಾರ್ಟ್ ವಿಂಡೋ (Smart window) ಅಳವಡಿಸಿದ ನಂತರ ರೈಲಿನ (Train) ಒಳಗೆ ಲೈಟ್ ಆಫ್ ಮಾಡಿದರೆ ನಂತರ ಹೊರಗಿನ ಬೆಳಕು ಬೋಗಿಯೊಳಗೆ ಬೀಳುವುದಿಲ್ಲ. ಅಲ್ಲದೆ ಪ್ಲಾಟ್ ಫಾರ್ಮ್ ನಲ್ಲಿ (Platform) ನಿಂತಿರುವವರು ಕೂಡಾ ರೈಲಿನೊಳಗೆ ನೋಡಲು ಸಾಧ್ಯವಾಗುವುದಿಲ್ಲ . ಒಂದು  ಸಲ  ಸ್ಮಾರ್ಟ್ ವಿಂಡೋವನ್ನು ಆನ್ ಮಾಡಿದ ಮೇಲೆ ಹೊರಗಿನ ಯಾವ ಬೆಳಕೂ ರೈಲಿನ ಒಳಗೆ ಬೀಳುವುದಿಲ್ಲ ಮಾತ್ರವಲ್ಲ ಹೊರಗಿನ ಶಬ್ದ ಕೂಡಾ ರೈಲಿನೊಳಗೆ ಕೇಳಿಸುವುದಿಲ್ಲ. ಈ ಸ್ಮಾರ್ಟ್ ವಿಂಡೋದಿಂದಾಗಿ ಪ್ರಯಾಣಿಕರು (Passenger) ಹೊರಗಿನಿಂದ ಯಾರಾದರೂ ರೈಲಿನೊಳಗೆ ಇಣಿಕಿ ನೋಡಬಹುದು ಎಂಬ ಆತಂಕದಿಂದ ಮುಕ್ತಿ ಹೊಂದಬಹುದು. ಸದ್ಯಕ್ಕೆ ಈ ಸ್ಮಾರ್ಟ್ ವಿಂಡೋವನ್ನು ದೆಹಲಿ ಹೌರಾ ರಾಜಧಾನಿ ರೈಲಿನ ಒಂದು ಬೋಗಿಯಲ್ಲಿ ಅಳವಡಿಸಲಾಗಿದೆ. ಮುಂದೆ ಎಲ್ಲಾ ರೈಲುಗಳಲ್ಲೂ ಈ ವಿಂಡೋವನ್ನು ಅಳವಡಿಸಲಾಗುವುದು. 


ಇದನ್ನೂ ಓದಿ : Update on Trains: ಪೂರ್ಣ ಪ್ರಮಾಣದ ರೈಲುಸಂಚಾರಕ್ಕೆ ಎರಡು ತಿಂಗಳು ಕಾಯಲೇಬೇಕು..!


ಭಾರತೀಯ ರೈಲ್ವೆ (Indian Railway) ತನ್ನ ಪ್ರಯಾಣಿಕರ ಊಟೋಪಚಾರಗಳ ಬಗ್ಗೆಯೂ ಗಮನ ಹರಿಸುತ್ತಿದೆ. ಇನ್ನು ಮುಂದೆ ರೈಲಿನಲ್ಲೂ ವಿಮಾನಯಾಣದಂತೆಯೇ (Flight) ರೆಡಿ ಟು ಈಟ್ ಆಹಾರ ಸಿಗಲಿದೆ. ಇದಕ್ಕಾಗಿ ಹಲ್ದಿರಾಂ, ಐಟಿಸಿ, ಎಂಟಿಆರ್, ಬಾಗ್ ಬಕ್ ರಿ ಯಂತಹ ಕಂಪನಿಗಳೊಂದಿಗೆ ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಇದಾದ ನಂತರ ರೈಲು ಪ್ರಯಾಣಿಕರಿಗೆ ರೆಡಿ ಟು ಈಟ್ ಆಹಾರ ಲಭ್ಯವಾಗಲಿದೆ. ಈ ಪ್ರಯತ್ನ ಸಫಲವಾದರೆ ಕಾಟರಿಂಗ್ ಸೇವೆಗಾಗಿ ಇಲಾಖೆ ಮಾಡುವ ಖರ್ಚಿನಲ್ಲಿ ಉಳಿತಾಯವಾಗಲಿದೆ. ಈ ಕಂಪನಿಗಳೊಂದಿಗಿನ (Companies) ವ್ಯವಹಾರದಿಂದಲೂ ಇಲಾಖೆಗೆ ಆದಾಯವಾಗಲಿದೆ. 


ಇದನ್ನೂ ಓದಿ : Indian Railways : ರೈಲು ಟಿಕೆಟ್‌ಗಳಲ್ಲಿ 10 % ರಿಯಾಯಿತಿ ಲಭ್ಯ! ಹೇಗೆಂದು ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.