Palace on wheels: ಅತಿದೊಡ್ಡ ರೈಲ್ವೆ ಸೇವೆಗೆ ಹೆಸರುವಾಸಿಯಾಗಿರುವ ಭಾರತೀಯ ರೈಲ್ವೆ ಆರಾಮದಾಯಕ ಹಾಗೂ ಬಜೆಟ್ ಸ್ನೇಹಿ ಪ್ರಯಾಣಕ್ಕೆ ಹೆಸರುವಾಸಿ ಆಗಿದೆ. ಪ್ಯಾಸೆಂಜರ್ ಮಾತ್ರವಲ್ಲದೆ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನೂ ಒದಗಿಸುವ ಭಾರತೀಯ ರೈಲ್ವೇಯೂ ರಾಯಲ್ ಫೀಲ್ ಕೊಡುವಂತಹ ವಿಶೇಷ ರೈಲು ಸೇವೆಗಳನ್ನು ಸಹ ಒದಗಿಸುತ್ತದೆ. ಅದರಲ್ಲಿ ಪ್ಯಾಲೇಸ್ ಆನ್ ವೀಲ್ಸ್ ಎಂಬ ವಿಶೇಷ ರೈಲು ಕೂಡ ಒಂದು. 


COMMERCIAL BREAK
SCROLL TO CONTINUE READING

* ಪ್ಯಾಲೇಸ್ ಆನ್ ವೀಲ್ಸ್‌
ರಾಜ ಮಹಾರಾಜರಂತೆ ಅನುಭವ ನೀಡುವ ಪ್ಯಾಲೇಸ್ ಆನ್ ವೀಲ್ಸ್‌ ಎಂಬ ವಿಶೇಷ ರೈಲು ಸೇವೆಯೂ ಸಹ ಭಾರತೀಯ ರೈಲ್ವೇಯಲ್ಲಿ ಲಭ್ಯವಿದೆ. 


* ಏನಿದು ಪ್ಯಾಲೇಸ್ ಆನ್ ವೀಲ್ಸ್? 
ಪ್ಯಾಲೇಸ್ ಆನ್ ವೀಲ್ಸ್- ವಿಶ್ವದ ಅತ್ಯಂತ ಪ್ರಸಿದ್ಧ ಪರಂಪರೆಯ ರೈಲುಗಳಲ್ಲಿ ಒಂದಾಗಿದೆ. ಹೆಸರೇ ಸೂಚಿಸುವಂತೆ ಇದು ರಾಯಲ್ ಟ್ರೈನ್ ಆಗಿದ್ದು, ಭಾರತೀಯ ರೈಲ್ವೆ ಮತ್ತು ರಾಜಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಆರ್‌ಟಿಡಿಸಿ) ಈ ರೈಲನ್ನು ನಿರ್ವಹಿಸುತ್ತದೆ.


ಇದನ್ನೂ ಓದಿ- ದಸರಾ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್


* 1982 ರಿಂದ  ಚಲಿಸುತ್ತಿರುವ ರೈಲು:
ಭಾರತದ ಸಾಂಸ್ಕೃತಿಕ ಪರಂಪರೆ, ರಾಜವೈಭೋಗದ ಇತಿಯಾಸವನ್ನು ಪ್ರದರ್ಶಿಸುವ ಈ ರೈಲನ್ನು 1982 ರಲ್ಲಿ ಪ್ರಾರಂಭಿಸಲಾಯಿತು. 


* ಏಳು ದಿನಗಳ ಪ್ರಯಾಣ: 
ಪ್ಯಾಲೇಸ್ ಆನ್ ವೀಲ್ಸ್ ರೈಲಿನಲ್ಲಿ ಪ್ರವಾಸಿಗಳು 7 ದಿನಗಳ ಪ್ರಯಾಣದ ಆನಂದವನ್ನು ಸವಿಯುವರು. ಇದರಲ್ಲಿ  ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಎಂಟು ನಗರಗಳಿಗೆ (ಜೈಪುರ, ಸವಾಯಿ ಮಾಧೋಪುರ್, ಚಿತ್ತೋರ್‌ಗಢ, ಉದಯಪುರ, ಜೈಸಲ್ಮೇರ್, ಜೋಧ್‌ಪುರ, ಭರತ್‌ಪುರ ಮತ್ತು ಆಗ್ರಾ) ಭೇಟಿ ನೀಡಲು ಅವಕಾಶವಿರುತ್ತದೆ. 


ಇದನ್ನೂ ಓದಿ- Travel Insurance: 1 ರೂಪಾಯಿ ಖರ್ಚಿಲ್ಲದೆ ಪಡೆಯಿರಿ ₹ 10,00,000 ವರೆಗಿನ ವಿಮೆ


* ಒಂದು ಟಿಕೆಟ್ ಬೆಲೆ ನಿಮ್ಮನ್ನು ಅಚ್ಚರಿಗೊಳಿಸುತ್ತದೆ:  
ಏಳು ದಿನಗಳ ಐಷಾರಾಮಿ ಪ್ರಯಾಣದ ಆನಂದವನ್ನು ಒದಗಿಸುವ ಪ್ಯಾಲೇಸ್ ಆನ್ ವೀಲ್ಸ್ ರೈಲಿನಲ್ಲಿ ಪ್ರಯಾಣಿಸಲು ಒಂದು ಕೊಠಡಿಯ (ಕ್ಯಾಬಿನ್) ಅಗ್ಗದ ಟಿಕೆಟ್ 12 ಲಕ್ಷ ರೂ. ಮತ್ತು ಅತ್ಯಂತ ದುಬಾರಿ ಟಿಕೆಟ್ 39 ಲಕ್ಷ ರೂ. ಎಂದು ಕೇಳಿದರೆ ನಿಮಗೆ ಅಚ್ಚರಿ ಆಗಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.