Railway Facts: ರೈಲ್ವೆ ನಿಲ್ದಾಣದಲ್ಲಿ ಬರೆಯಲಾಗುವ ಜಂಕ್ಷನ್, ಟರ್ಮಿನಲ್, ಸೆಂಟ್ರಲ್ ಸ್ಟೇಷನ್ಗಳ ಅರ್ಥವೇನು?
Railway Facts: ಸಾಮಾನ್ಯವಾಗಿ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಜಂಕ್ಷನ್ ಎಂದು ಬರೆದಿದ್ದರೆ ಕೆಲವು ನಿಲ್ದಾಣಗಳಲ್ಲಿ ಟರ್ಮಿನಲ್ ಎಂದು ಇನ್ನೂ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಸೆಂಟ್ರಲ್ ಸ್ಟೇಷನ್ ಎಂದು ಬರೆಯಲಾಗಿರುತ್ತದೆ. ಆದರೆ, ಇದರ ಅರ್ಥವೇನು? ಎಂದು ಎಂದಾದರೂ ಯೋಚಿಸಿದ್ದೀರಾ...
Railway Facts: ವಿಶ್ವದ ಅತಿದೊಡ್ಡ ಉದ್ದದ ರೈಲು ಜಾಲಗಳಲ್ಲಿ ಭಾರತೀಯ ರೈಲ್ವೆ ಕೂಡ ಒಂದು. ದೇಶಾದ್ಯಂತ ಸುಮಾರು ಏಳು ಸಾವಿರಕ್ಕೂ ಹೆಚ್ಚು ರೈಲು ನಿಲ್ದಾಣಗಳಿದ್ದು ಇಲ್ಲಿಂದ ಸರಿ ಸುಮಾರು 20 ಸಾವಿರಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳು ಮತ್ತು ಏಳು ಸಾವಿರಕ್ಕೂ ಅಧಿಕ ಸರಕು ರೈಲುಗಳು ಪ್ರತಿನಿತ್ಯ ಸಂಚರಿಸುತ್ತವೆ. ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿ ಆಗಿರುವ ರೈಲಿನಲ್ಲಿ ನಿತ್ಯ ಕೋಟ್ಯಾಂತರ ಜನ ಪ್ರಯಾಣಿಸುತ್ತಾರೆ. ರೈಲಿನಲ್ಲಿ ಪ್ರಯಾಣಿಸುವಾಗ ಕೆಲವು ನಿಲ್ದಾಣಗಳಲ್ಲಿ ಜಂಕ್ಷನ್ ಎಂದು ಬರೆದಿದ್ದರೆ ಕೆಲವು ನಿಲ್ದಾಣಗಳಲ್ಲಿ ಟರ್ಮಿನಲ್ ಎಂದು ಇನ್ನೂ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಸೆಂಟ್ರಲ್ ಸ್ಟೇಷನ್ ಎಂದು ಬರೆಯಲಾಗಿರುತ್ತದೆ. ಆದರೆ, ಎಂದಾದರೂ ಇವುಗಳ ಅರ್ಥವೇನು? ಎಂದು ಯೋಚಿಸಿದ್ದೀರಾ...
ರೈಲು ನಿಲ್ದಾಣಗಳಲ್ಲಿ ಕಾಣಿಸುವ ಜಂಕ್ಷನ್, ಟರ್ಮಿನಲ್, ಸೆಂಟ್ರಲ್ ಸ್ಟೇಷನ್ ಎಂಬ ಪದಗಳು ಭಾರತೀಯ ರೈಲ್ವೇಗೆ (Indian Railways) ಸಂಬಂಧಿಸಿದ ವಿಶೇಷ ಅರ್ಥವನ್ನು ಹೊಂದಿವೆ. ಈ ಕುರಿತಂತೆ ಇಲ್ಲಿದೆ ವಿಶೇಷ ಮಾಹಿತಿ.
ರೈಲ್ವೆ ಜಂಕ್ಷನ್:
ಭಾರತೀಯ ರೈಲ್ವೇಯಲ್ಲಿ ಜಂಕ್ಷನ್ (Indian Railway Junction) ಎಂದರೆ ಒಂದು ರೈಲು ನಿಲ್ದಾಣ ಎಂದರ್ಥ. ಯಾವುದೇ ಒಂದು ರೈಲು ನಿಲ್ದಾಣದಿಂದ ಕನಿಷ್ಠ ಮೂರು ವಿಭಿನ್ನ ಮಾರ್ಗಗಳಿಗೆ ರೈಲು ಸಂಚಾರ ವ್ಯವಸ್ಥೆ ಇದ್ದರೆ ಅಂತಹ ರೈಲು ನಿಲ್ದಾಣಗಳನ್ನು ರೈಲ್ವೆ ಜಂಕ್ಷನ್ ಎಂದು ಕರೆಯಲಾಗುತ್ತದೆ. ಇಂತಹ ರೈಲು ನಿಲ್ದಾಣಗಳಲ್ಲಿ ಏಕಕಾಲದಲ್ಲಿ ಎರಡಕ್ಕಿಂತ ಹೆಚ್ಚು ರೈಲುಗಳು ಸಂಚರಿಸುವ ವ್ಯವಸ್ಥೆ ಇರಲಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಮಥುರಾ ಜಂಕ್ಷನ್‌ನಲ್ಲಿ ಗರಿಷ್ಠ 7 ಮಾರ್ಗಗಳಿವೆ.
ಇದನ್ನೂ ಓದಿ- ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಆರ್‌ಬಿಐ ಮಹತ್ವದ ಬದಲಾವಣೆ, ಗ್ರಾಹಕರಿಗೆ ಬಂಪರ್ ಲಾಭ
ಟರ್ಮಿನಲ್ ಸ್ಟೇಷನ್:
ಟರ್ಮಿನಲ್/ಟರ್ಮಿನಸ್ ನಿಲ್ದಾಣಗಳ ನಡುವೆ ಯಾವುದೇ ಪ್ರಮುಖ ವ್ಯತ್ಯಾಸವಿರುವುದಿಲ್ಲ. ಟರ್ಮಿನಸ್ ಅಥವಾ ಟರ್ಮಿನಲ್ ಎಂಬ ಪದವು 'ಟರ್ಮಿನೇಷನ್' ಎಂಬ ಇಂಗ್ಲಿಷ್ ಪದದಿಂದ ಬಂದಿದೆ, ಇದರರ್ಥ ಅಂತ್ಯ. ದೆಹಲಿಯಲ್ಲಿರುವ ಆನಂದ್ ವಿಹಾರ್ ಟರ್ಮಿನಲ್, ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಟರ್ಮಿನಸ್. ಸಾಮಾನ್ಯವಾಗಿ, ಟರ್ಮಿನಲ್/ಟರ್ಮಿನಸ್ ನಿಲ್ದಾಣಗಳೆಂದರೆ ಯಾವುದೇ ಒಳಬರುವ ರೈಲುಗಳು ಮುಂದೆ ಸಾಗದೇ ಇರುವಂತಹ ನಿಲ್ದಾಣಗಳು. ಅರ್ಥಾತ್ ರೈಲುಗಳಿಗೆ ಇದು ಕೊನೆಯ ನಿಲ್ದಾಣವಾಗಿರುತ್ತದೆ.
ಇದನ್ನೂ ಓದಿ- ವಿಶ್ವದ ಪ್ರಬಲ ವಿಮಾ ಬ್ರ್ಯಾಂಡ್ ಆಗಿ ಹೊರಹೊಮ್ಮಿದ ಎಲ್‌ಐಸಿ
ಸೆಂಟ್ರಲ್ ರೈಲ್ವೆ ಸ್ಟೇಷನ್:
ದೇಶದ ಕೆಲವು ಪ್ರಮುಖ ನಗರಗಳಲ್ಲಿ ಈ ಸೆಂಟ್ರಲ್ ರೈಲ್ವೆ ನಿಲ್ದಾಣವನ್ನು ಕಾಣಬಹುದು. ಸಾಮಾನ್ಯವಾಗಿ, ಕೇಂದ್ರ ರೈಲು ನಿಲ್ದಾಣ ಅಥವಾ ಸೆಂಟ್ರಲ್ ರೈಲ್ವೆ ಸ್ಟೇಷನ್ ಅನ್ನು ಅತ್ಯಂತ ಹಳೆಯ ಮತ್ತು ಅತ್ಯಂತ ಜನನಿಬಿಡ ರೈಲು ನಿಲ್ದಾಣವೆಂದು ಪರಿಗಣಿಸಲಾಗಿದೆ. ಈ ನಿಲ್ದಾಣಗಳ ಮೂಲಕ ಹಲವು ರಾಜ್ಯಗಳಿಗೆ ರೈಲ್ವೆ ಸಂಪರ್ಕ ಲಭ್ಯವಿರಲಿದ್ದು ಈ ರೈಲು ನಿಲ್ದಾಣಗಳು 24*7 ಜನನಿಬಿಡವಾಗಿ ತುಂಬಿ ತುಳುಕುತ್ತಿರುತ್ತವೆ. ಉದಾಹರಣೆಗೆ, ಮುಂಬೈ ಸೆಂಟ್ರಲ್, ಕಾನ್ಪುರ ಸೆಂಟ್ರಲ್, ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣಗಳು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.