ತೆರಿಗೆ ಉಳಿಸಲು ಇದೇ ಕೊನೆಯ ಅವಕಾಶ! ತಪ್ಪಿಸಿಕೊಂಡರೆ ತೆರಬೇಕು ಎರಡು ಪಟ್ಟು Tax

31 March 2024 Deadline:ಕೆಲವೊಂದು ಕೆಲಸಗಳನ್ನು ಮಾಡಲು ಮಾರ್ಚ್ 31 ಕೊನೆಯ ದಿನಾಂಕ. ಅದರಲ್ಲಿ ಒಂದು ತೆರಿಗೆ. ಯಾವುದೇ ರೀತಿಯ ಸಮಸ್ಯೆ ಅಥವಾ ನಷ್ಟವನ್ನು ತಪ್ಪಿಸಲು ಗಡುವಿನ ಮೊದಲು ಈ ಕಾರ್ಯಗಳನ್ನು ಪೂರ್ಣಗೊಳಿಸುವುದು ಉತ್ತಮ.

Written by - Ranjitha R K | Last Updated : Mar 26, 2024, 09:49 AM IST
  • ಹೊಸ ಹಣಕಾಸು ವರ್ಷ ಏಪ್ರಿಲ್ 1 ರಿಂದ ಪ್ರಾರಂಭವಾಗುತ್ತದೆ.
  • 2023-24ರ ಆರ್ಥಿಕ ವರ್ಷವು ಮಾರ್ಚ್ 31 ರಂದು ಕೊನೆಗೊಳ್ಳುತ್ತದೆ.
  • ಪ್ರಮುಖ ಕೆಲಸಗಳ ಗಡುವು ಕೂಡಾ ಇದೇ ದಿನಾಂಕದಂದು ಕೊನೆ
ತೆರಿಗೆ ಉಳಿಸಲು ಇದೇ ಕೊನೆಯ ಅವಕಾಶ! ತಪ್ಪಿಸಿಕೊಂಡರೆ ತೆರಬೇಕು ಎರಡು ಪಟ್ಟು Tax title=

31 March 2024 Deadline : ಹೊಸ ಹಣಕಾಸು ವರ್ಷ ಏಪ್ರಿಲ್ 1 ರಿಂದ ಪ್ರಾರಂಭವಾಗುತ್ತದೆ. 2023-24ರ ಆರ್ಥಿಕ ವರ್ಷವು ಮಾರ್ಚ್ 31 ರಂದು ಕೊನೆಗೊಳ್ಳುತ್ತದೆ.2023-24ನೇ ಹಣಕಾಸು ವರ್ಷವು ಮಾರ್ಚ್ 31ಕ್ಕೆ ಕೊನೆಗೊಳ್ಳುವುದು ಮಾತ್ರವಲ್ಲದೆ,ಹಲವು ಪ್ರಮುಖ ಕೆಲಸಗಳ ಗಡುವು ಕೂಡಾ ಇದೇ ದಿನಾಂಕದಂದು ಕೊನೆಗೊಳ್ಳುತ್ತಿದೆ. ಹೂಡಿಕೆ,ತೆರಿಗೆ ಸಲ್ಲಿಕೆ,ತೆರಿಗೆ ಉಳಿತಾಯದಂತಹ ಹಲವು ಹಣಕಾಸು ಕಾರ್ಯಗಳ ಗಡುವು ಮಾರ್ಚ್ 31ಕ್ಕೆ ಕೊನೆಗೊಳ್ಳುತ್ತಿದೆ. ಹೀಗಿರುವಾಗ ಯಾವುದೇ ರೀತಿಯ ಸಮಸ್ಯೆ ಅಥವಾ ನಷ್ಟವನ್ನು ತಪ್ಪಿಸಲು ಗಡುವಿನ ಮೊದಲು ಈ ಕಾರ್ಯಗಳನ್ನು ಪೂರ್ಣಗೊಳಿಸುವುದು ಉತ್ತಮ.  

ITR ಗಡುವನ್ನು ನವೀಕರಣ :  
2021-22 ರ ಮೌಲ್ಯಮಾಪನ ವರ್ಷಕ್ಕೆ ನವೀಕರಿಸಿದ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ.2020-21 ರ ಹಣಕಾಸು ವರ್ಷಕ್ಕೆ ರರಿಟರ್ನ್ ಸಲ್ಲಿಸದ ತೆರಿಗೆದಾರರು ಮಾರ್ಚ್ 31, 2024 ರೊಳಗೆ ತಮ್ಮ ರಿಟರ್ನ್‌ಗಳನ್ನು ಸಲ್ಲಿಸಬಹುದು. 2019-20 ನೇ ಹಣಕಾಸು ವರ್ಷದಲ್ಲಿ ತಮ್ಮ ಆದಾಯದ ವಿವರಗಳನ್ನು ನೀಡದ ಅಥವಾ ತಪ್ಪಾಗಿ ನೀಡಿದ ತೆರಿಗೆದಾರರು ಕೂಡಾ  31 ಮಾರ್ಚ್ 2024 ರವರೆಗೆ ಅರ್ಜಿ ಸಲ್ಲಿಸಬಹುದು. 

ಇದನ್ನೂ ಓದಿ : ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಆರ್‌ಬಿ‌ಐ ಮಹತ್ವದ ಬದಲಾವಣೆ, ಗ್ರಾಹಕರಿಗೆ ಬಂಪರ್ ಲಾಭ

ತೆರಿಗೆ ಉಳಿಸಲು ಕೊನೆಯ ಅವಕಾಶ  : 
ನೀವು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿದ್ದರೆ ತೆರಿಗೆ ಉಳಿಸಲು  ಇದು ಕೊನೆಯ ಅವಕಾಶವಾಗಿರಲಿದೆ. 2023-24ರ ಹಣಕಾಸು ವರ್ಷಕ್ಕೆ ತೆರಿಗೆ ವಿನಾಯಿತಿ ಪಡೆಯಲು, ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಮಾರ್ಚ್ 31 ರವರೆಗೆ ಸಮಯಾವಕಾಶವಿದೆ. ಮಾರ್ಚ್ 31,2024 ರವರೆಗೆ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ವಿನಾಯಿತಿ ಪಡೆಯಬಹುದು.PPF, APS, Equity-linked Saving Scheme (ELSS) ಮತ್ತು FD ಯಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆಯನ್ನು ಉಳಿಸಬಹುದು.80C ಹೊರತುಪಡಿಸಿ, ಆದಾಯ ತೆರಿಗೆಯ ಸೆಕ್ಷನ್ 80D, 80G ಮತ್ತು 80CCD(1B) ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಬೇರೆ ಬೇರೆ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. 

ಉಳಿತಾಯ ಯೋಜನೆಯಲ್ಲಿ ಕನಿಷ್ಠ ಹೂಡಿಕೆಯ ಗಡುವು : 
PPF ಅಥವಾ ಸುಕನ್ಯಾ ಸಮೃದ್ಧಿ ಯೋಜನೆಗಳಂತಹ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ, ಈ ಸರ್ಕಾರಿ ಸಣ್ಣ ಉಳಿತಾಯ ಯೋಜನೆಗಳಲ್ಲಿ ಕನಿಷ್ಠ ಹೂಡಿಕೆಯನ್ನು ಇಟ್ಟುಕೊಳ್ಳುವುದು ಅವಶ್ಯಕ. ನಿಮ್ಮ ಉಳಿತಾಯ ಯೋಜನೆಯಲ್ಲಿ ಕನಿಷ್ಟ ಠೇವಣಿ ಇಡಬೇಕು. ಕನಿಷ್ಟ ಠೇವಣಿಯನ್ನು ನಿರ್ವಹಿಸಲು ವಿಫಲವಾದರೆ, ನಿಮ್ಮ ಖಾತೆ ಡೀಫಾಲ್ಟ್ ಆಗುತ್ತದೆ. ಖಾತೆಯನ್ನು ಪುನಃ ತೆರೆಯಲು ದಂಡ ಪಾವತಿಸಬೇಕಾಗಬಹುದು.ಹಾಗಾಗಿ ಈ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ, ಮಾರ್ಚ್ 31 ರೊಳಗೆ ಅದರಲ್ಲಿ ಕನಿಷ್ಠ ಮೊತ್ತವನ್ನು ಹೂಡಿಕೆ ಮಾಡಳು ಮರೆಯದಿರಿ. 

ಇದನ್ನೂ ಓದಿ : Gold And Silver Price: ಭಾರತದಲ್ಲಿ ಚಿನ್ನ ಬೆಲೆ ಇಳಿಕೆ: ಬೆಳ್ಳಿಯ ಬೆಲೆ ಹೆಚ್ಚಳ!

ಫಾಸ್ಟ್ಯಾಗ್‌ನ KYC : 
ನಿಮ್ಮ ವಾಹನವು ಫಾಸ್ಟ್ಯಾಗ್ ಹಾಕಿದ್ದರೆ, ಅದರ KYCಯನ್ನು ಮಾರ್ಚ್ 31 ರ ಮೊದಲು ಪೂರ್ಣಗೊಳಿಸಬೇಕಾಗುತ್ತದೆ. KYC ಇಲ್ಲದ ಫಾಸ್ಟ್ಯಾಗ್ ಮಾರ್ಚ್ 31 ರ ನಂತರ ಕಾರ್ಯನಿರ್ವಹಿಸುವುದಿಲ್ಲ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್ಯಾಗ್ KYC ವಿವರಗಳನ್ನು ನವೀಕರಿಸುವುದನ್ನು ಕಡ್ಡಾಯಗೊಳಿಸಿದೆ.ಇದರ ಗಡುವನ್ನು ಫೆಬ್ರವರಿ 29 ರಿಂದ ಮಾರ್ಚ್ 31, 2024 ರವರೆಗೆ ವಿಸ್ತರಿಸಲಾಗಿದೆ. ಮಾರ್ಚ್ 31ರೊಳಗೆ ಫಾಸ್ಟ್ಯಾಗ್ KYC ಮಾಡದಿದ್ದರೆ,ನಿಮ್ಮ ಫಾಸ್ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಅಥವಾ  ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುತ್ತದೆ. ಆದರೆ ಟೋಲ್ ಮೇಲೆ ತೆರಿಗೆಯನ್ನು ನಗದು ರೂಪದಲ್ಲಿ ಪಾವತಿಸಬೇಕಾಗುತ್ತದೆ. ಟೋಲ್ ಅನ್ನು ನಗದು ರೂಪದಲ್ಲಿ ಪಾವತಿಸುವಾಗ ಡಬಲ್ ಟೋಲ್ ಪಾವತಿಸಬೇಕಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News