ನವದೆಹಲಿ : Indian Railways Ticket: ರೈಲಿನಲ್ಲಿ ಪ್ರಯಾಣಿಸುವ ಮೊದಲು ಇದ್ದಕ್ಕಿದಂತೆ ಟಿಕೆಟ್ ಕಳೆದು ಹೋದರೆ ಏನು ಮಾಡುವುದು ಎನ್ನುವ ಚಿಂತೆ ಕಾಡತೊಡಗುತ್ತದೆ. ಟಿಕೆಟ್ ಇಲ್ಲದೆ ಪ್ರಯಾಣ ಹೇಗೆ ಮಾಡುವುದು ಎಂಬ ಭಯವೂ ಕಾಡುತ್ತದೆ.  ಆದರೆ, ಈ ಸಮಸ್ಯೆ ಎದುರಾದರೆ ಚಿಂತೆ ಪಡಬೇಕಾಗಿಲ್ಲ. 
 
ಡ್ಯುಪ್ಲಿಕೇಟ್ ಟಿಕೆಟ್ ತೆಗೆದುಕೊಳ್ಳಬಹುದು : 
ನಿಮ್ಮ ರೈಲು ಟಿಕೆಟ್ (Train ticket) ಕಳೆದುಹೋದರೆ ಭಯಪಡುವ ಅಗತ್ಯವಿಲ್ಲ. ಒಂದು ವೇಳೆ ಹೀಗಾದರೆ,  ರೈಲ್ವೆ ನಿಮಗೆ ಡ್ಯುಪ್ಲಿಕೇಟ್ ಟಿಕೆಟ್ (Duplicate ticket) ಅನ್ನು ಒದಗಿಸಲಿದೆ. ಈ ಟಿಕೆಟ್ ಮೂಲಕ  ಪ್ರಯಾಣಿಸುವುದಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ, ಇದಕ್ಕಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ :  5 Rupees Note : ನಿಮ್ಮ ಬಳಿ 5 ರೂ. ನೋಟು ಇದ್ರೆ ಮನೆಯಲ್ಲಿ ಕುಳಿತು ಹಣ ಸಂಪಾದಿಸಬಹುದು : ಹೇಗೆ ಇಲ್ಲಿದೆ ನೋಡಿ


ಡ್ಯುಪ್ಲಿಕೇಟ್ ಟಿಕೆಟ್ ಗೆ ನೀಡಬೇಕು ಹೆಚ್ಚುವರಿ ಶುಲ್ಕ : 
ಭಾರತೀಯ ರೈಲ್ವೆ (Indian Railway) ವೆಬ್‌ಸೈಟ್ indianrail.gov.in ಪ್ರಕಾರ, ರಿಸರ್ವೇಶನ್ ಲಿಸ್ಟ್ ತಯಾರಾಗುವ ಮೊದಲೇ  ಟಿಕೆಟ್ ಕಳೆದು ಹೋಗಿರುವ ಬಗ್ಗೆ ದೂರು ನೀಡಿದರೆ,  ಡ್ಯುಪ್ಲಿಕೇಟ್ ಟಿಕೆಟ್ ನೀಡಲಾಗುತ್ತದೆ. ರೈಲ್ವೆ ಪ್ರಕಾರ, ಇದಕ್ಕಾಗಿ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 50 ರೂ.  ಪಾವತಿಸುವ ಮೂಲಕ ಸೆಕೆಂಡ್ ಮತ್ತು ಸ್ಲೀಪರ್ ಕ್ಲಾಸ್ ಡ್ಯುಪ್ಲಿಕೇಟ್ ಟಿಕೆಟ್  ಪಡೆಯಬಹುದು. ಉಳಿದ ದರ್ಜೆಯ ಟಿಕೆಟ್ ಗೆ 100 ಪಾವತಿಸಬೇಕಾಗುತ್ತದೆ. ಚಾರ್ಟ್ ತಯಾರಾದ ಬಳಿಕ confirmed ಟಿಕೆಟ್‌ ಕಾಣೆ ಯಾಗಿರುವ ಬಗ್ಗೆ ದೂರು ನೀಡಿದರೆ 50% ಶುಲ್ಕವನ್ನು ಪಾವತಿಸಿ  ಡ್ಯುಪ್ಲಿಕೇಟ್ ಟಿಕೆಟ್ ಪಡೆಯಬೇಕಾಗುತ್ತದೆ. 


ಡ್ಯುಪ್ಲಿಕೇಟ್ ಟಿಕೆಟ್‌ಗಳಿಗೆ ಸಂಬಂಧಿಸಿದ ಈ ವಿಷಯಗಳನ್ನು ನೆನಪಿನಲ್ಲಿಡಿ
1. confirmed ಅಥವಾ ಆರ್‌ಎಸಿ ಟಿಕೆಟ್ (RAC Ticket) ಕಳೆದುಹೋಗಿರುವ ಬಗ್ಗೆ ಚಾರ್ಟ್ ತಯಾರಾದ ನಂತರ ಅರ್ಜಿ ಸಲ್ಲಿಸಿದರೆ ಟಿಕೆಟ್ ಶುಲ್ಕದ 25% ಪಾವತಿಸಬೇಕಾಗುತ್ತದೆ. ಚಾರ್ಟ್ ತಯಾರಾಗುವ  ಮೊದಲೇ ಅರ್ಜಿ ಸಲ್ಲಿಸಿದರೆ, ಡ್ಯುಪ್ಲಿಕೇಟ್ ಟಿಕೆಟ್‌ಗಳಿಗೆ ಎಷ್ಟು ಹಣ ವಸೂಲಿ ಮಾಡಲಾಗುತ್ತದೆಯೋ ಆ ಮೊತ್ತವನ್ನು ಮಾತ್ರ ನೀಡಬೇಕಾಗುತ್ತದೆ. 
2. ಭಾರತೀಯ ರೈಲ್ವೆ ಪ್ರಕಾರ, ವೈಟಿಂಗ್ ಲಿಸ್ಟ್ ನಲ್ಲಿರುವ ಟಿಕೆಟ್‌ಗಳ ಬದಲಿಗೆ ಯಾವುದೇ ಡ್ಯುಪ್ಲಿಕೇಟ್ ಟಿಕೆಟ್‌ ನೀಡಲಾಗುವುದಿಲ್ಲ.
3. ಆರ್‌ಎಸಿ ಟಿಕೆಟ್‌ಗಳ ಸಂದರ್ಭದಲ್ಲಿ, ಮೀಸಲಾತಿ ಚಾರ್ಟ್ ಸಿದ್ಧಪಡಿಸಿದ ನಂತರ ಯಾವುದೇ ಡ್ಯುಪ್ಲಿಕೇಟ್  ಟಿಕೆಟ್ ನೀಡಲಾಗುವುದಿಲ್ಲ.
4.ಡ್ಯುಪ್ಲಿಕೇಟ್  ಟಿಕೆಟ್ ನೀಡಿದ ನಂತರ ಮೂಲ ಟಿಕೆಟ್ ಸಿಕಿದರೆ, ರೈಲು ಹೊರಡುವ ಮುನ್ನ  ಎರಡೂ ಟಿಕೆಟ್‌ಗಳನ್ನು ರೈಲ್ವೆಗೆ (railway) ತೋರಿಸಿದರೆ, ಡ್ಯುಪ್ಲಿಕೇಟ್  ಟಿಕೆಟ್‌ಗೆ ಪಾವತಿಸಿದ ಶುಲ್ಕವನ್ನು ಮರುಪಾವತಿಸಲಾಗುತ್ತದೆ.  ಆದರೂ 5% ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. 


ಇದನ್ನೂ ಓದಿ :  LIC ಗೃಹ ಸಾಲಗಾರರಿಗೆ ಸಿಹಿ ಸುದ್ದಿ : ಬಡ್ಡಿದರ ಇಳಿಕೆ ಮಾಡಿದ LIC HFL


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.