ರೈಲ್ವೆ ಪ್ರಯಾಣಿಕರೇ ಎಚ್ಚರ! ನಿಲ್ದಾಣಕ್ಕೆ ತೆರಳುವ ಮುನ್ನ ನಿಮ್ಮ ಟಿಕೆಟ್ ಅಸಲಿಯೇ/ನಕಲಿಯೇ ಪರಿಶೀಲಿಸಿ

ಲಾಕ್‌ಡೌನ್ ಬಳಿಕ ರೈಲ್ವೆ ಪ್ರಯಾಣಿಕರಿಗಾಗಿ ವಿಶೇಷ ರೈಲುಗಳನ್ನು ಓಡಿಸಿದೆ, ಇದರಿಂದಾಗಿ ಟಿಕೆಟ್‌ಗಳ ಬೇಡಿಕೆ ತುಂಬಾ ಹೆಚ್ಚಾಗಿದೆ, ರೈಲ್ವೆ ಪ್ರಯಾಣಿಕರ ಅಗತ್ಯತೆಯ ಲಾಭವನ್ನು ಪಡೆದುಕೊಳ್ಳಲು ಯತ್ನಿಸುತ್ತಿರುವ ಕೆಲವರು ನಕಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಈ ದಂಧೆಯನ್ನು ಬಹಿರಂಗಪಡಿಸಿದೆ.

Last Updated : Nov 28, 2020, 11:13 AM IST
  • ರೈಲ್ವೆ ಪ್ರಯಾಣಿಕರ ಅಗತ್ಯತೆಯ ಲಾಭವನ್ನು ಪಡೆದುಕೊಳ್ಳಲು ಯತ್ನಿಸುತ್ತಿರುವ ಕೆಲವರು ನಕಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿರುವ ಬಾಗ್ಗೆ ಆಘಾತಕಾರಿ ಮಾಹಿತಿ
  • ಪ್ರಯಾಣಿಕರು ಮಾನ್ಯ ಟಿಕೆಟ್‌ನೊಂದಿಗೆ ಪ್ರಯಾಣಿಸಬೇಕು ಮತ್ತು ಟಿಕೆಟ್ ಕಾಯ್ದಿರಿಸಲು ದಲ್ಲಾಳಿಗಳಿಗೆ ಸಿಕ್ಕಿಹಾಕಿಕೊಳ್ಳಬಾರದು- ರೈಲ್ವೆ ಅಧಿಕಾರಿ
ರೈಲ್ವೆ ಪ್ರಯಾಣಿಕರೇ ಎಚ್ಚರ! ನಿಲ್ದಾಣಕ್ಕೆ ತೆರಳುವ ಮುನ್ನ ನಿಮ್ಮ ಟಿಕೆಟ್ ಅಸಲಿಯೇ/ನಕಲಿಯೇ ಪರಿಶೀಲಿಸಿ

ನವದೆಹಲಿ: ಲಾಕ್‌ಡೌನ್ ಬಳಿಕ ರೈಲ್ವೆ ಪ್ರಯಾಣಿಕರಿಗಾಗಿ ವಿಶೇಷ ರೈಲುಗಳನ್ನು ಓಡಿಸಿದೆ, ಇದರಿಂದಾಗಿ ಟಿಕೆಟ್‌ಗಳ ಬೇಡಿಕೆ ತುಂಬಾ ಹೆಚ್ಚಾಗಿದೆ, ರೈಲ್ವೆ ಪ್ರಯಾಣಿಕರ ಅಗತ್ಯತೆಯ ಲಾಭವನ್ನು ಪಡೆದುಕೊಳ್ಳಲು ಯತ್ನಿಸುತ್ತಿರುವ ಕೆಲವರು ನಕಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿರುವ ಬಾಗ್ಗೆ ಆಘಾತಕಾರಿ ಮಾಹಿತಿಯನ್ನು ಕೇಂದ್ರ ರೈಲ್ವೆ ಬಹಿರಂಗಪಡಿಸಿದೆ.

ಕೇಂದ್ರ ರೈಲ್ವೆ (Central Railway) ಜೂನ್‌ನಿಂದ 428 ನಕಲಿ ಟಿಕೆಟ್‌ಗಳನ್ನು ಬಹಿರಂಗಪಡಿಸಿದೆ. ಅದರಲ್ಲಿ 102 ಟಿಕೆಟ್‌ಗಳು ಎಸಿ ವರ್ಗದವು. ಮುಂಬೈ ಮಿರರ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಟಿಕೆಟ್ ವಿಂಡೋದಲ್ಲಿ ಮಾರಾಟವಾದ ಟಿಕೆಟ್‌ಗಳ ಡೇಟಾವನ್ನು ಕದಿಯುವ ಮೂಲಕ ದಲ್ಲಾಳಿಗಳು ನಕಲು ಮಾಡುತ್ತಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಕಲಿ ಟಿಕೆಟ್‌ಗಳ ಈ ವಂಚನೆಯಿಂದಾಗಿ, ಒಂದೇ ಸೀಟಿಗೆ (ಬರ್ತ್) ಇಬ್ಬರು ಪ್ರಯಾಣಿಕರ ನಡುವೆ ಜಗಳಗಳು ನಡೆದಿವೆ. ರೈಲ್ವೆ ಸೇವೆ ಮೊದಲಿನಂತೆ ಪ್ರಾರಂಭವಾಗುವವರೆಗೂ ವೈಟಿಂಗ್ ಟಿಕೆಟ್ ನೀಡಲಾಗುವುದಿಲ್ಲ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.

ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಪ್ರಮುಖ ಬದಲಾವಣೆ, ಈ ಟೆಕ್ನಿಕ್ ಬಳಸಿ ಕನ್ಫರ್ಮ್ ಟಿಕೆಟ್‌ ಪಡೆಯಿರಿ

ದಲ್ಲಾಳಿಗಳು ನಿಜವಾದ ಟಿಕೆಟ್ ಮಾಹಿತಿಯನ್ನು ನಿಖರವಾದ ಕಾಗದದಲ್ಲಿ ಮುದ್ರಿಸುತ್ತಾರೆ. ಇದರಲ್ಲಿ ಪಿಎನ್‌ಆರ್, ರೈಲು (Train) ಸಂಖ್ಯೆ ಮತ್ತು ಆಸನಗಳ ಸಂಖ್ಯೆಯೂ ಒಂದೇ ಆಗಿರುತ್ತದೆ. ಪ್ರಯಾಣಿಕರ ಹೆಸರನ್ನು ಮಾತ್ರ ಬದಲಾಯಿಸಲಾಗಿರುತ್ತದೆ. ರೈಲ್ವೆ ನಿಲ್ದಾಣದಲ್ಲಿನ ಟಿಕೆಟ್‌ನಲ್ಲಿ ನಕಲಿ ಟಿಕೆಟ್ (Fake Ticket) ಹೊಂದಿರುವ ಪ್ರಯಾಣಿಕರ ಹೆಸರು ಇಲ್ಲದಿದ್ದಾಗ ಮತ್ತು ರೈಲು ಹತ್ತಲು ಅನುಮತಿಸದಿದ್ದಾಗ ಅಂತಹ ಟಿಕೆಟ್‌ಗಳು ಬೆಳಕಿಗೆ ಬಂದಿವೆ.

ಕೇವಲ ಒಂದು ಸೀಟಿಗಾಗಿ ಹೋರಾಟ:
ಏಜೆಂಟರ ಮೂಲಕ ಟಿಕೆಟ್ (Ticket) ಕಾಯ್ದಿರಿಸಿದ ಪ್ರಯಾಣಿಕನು ಈ ವಂಚನೆಯನ್ನು ಅರಿತುಕೊಳ್ಳುವುದಿಲ್ಲ ಮತ್ತು ಚಾರ್ಟ್‌ನಲ್ಲಿ ತನ್ನ ಹೆಸರನ್ನು ನೋಡದಿದ್ದಾಗ ರೈಲ್ವೆ ಇಲಾಖೆಯನ್ನು ದೂಷಿಸುತ್ತಾರೆ ಎಂದು ಕೇಂದ್ರ ರೈಲ್ವೆ ಅಧಿಕಾರಿ ಹೇಳಿದ್ದಾರೆ. ಟಿಕೆಟ್ ಪರೀಕ್ಷಿಸುವ ಟಿಕೆಟ್‌ಗೆಟಿಟಿಗೆ ಇಂತಹ ಪರಿಸ್ಥಿತಿ ತುಂಬಾ ನಿಭಾಯಿಸುವುದು ತುಂಬಾ ಕಷ್ಟಕರ ಸಂಗತಿ ಎಂದು ಅಧಿಕಾರಿ ತಿಳಿಸಿದ್ದಾರೆ.

ಟಿಟಿ ಎರಡೂ ಪ್ರಯಾಣಿಕರ ಜಗಳವನ್ನು ಶಾಂತಗೊಳಿಸಬೇಕು ಮತ್ತು ಯಾರು ಸರಿಯಾದ ಅಂದರೆ ಅಸಲಿ ಟಿಕೆಟ್ ಹೊಂದಿದ್ದಾರೆ ಎಂದು ನಿರ್ಧರಿಸಬೇಕು. ಅಂತಹ ಪರಿಸ್ಥಿತಿಯಲ್ಲಿ ನಕಲಿ ಟಿಕೆಟ್ ಹೊಂದಿರುವ ಪ್ರಯಾಣಿಕರನ್ನು ರೈಲಿನಿಂದ ಕೆಳಗಿಳಿಸಲಾಗುತ್ತದೆ ಮತ್ತು ಅವರಿಂದ ದಂಡವನ್ನು ಸಹ ವಶಪಡಿಸಿಕೊಳ್ಳಲಾಗುತ್ತದೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.

ನಕಲಿ ರೈಲು ಟಿಕೆಟ್‌ಗಳನ್ನು ಈ ರೀತಿ ಮುದ್ರಿಸಲಾಗುತ್ತದೆ:
ರೈಲ್ವೆ ತನಿಖಾ ತಂಡವು ಜೂನ್‌ನಿಂದ 100 ಪ್ರಕರಣಗಳ ತನಿಖೆ ನಡೆಸಿದ್ದು, ಇದರಲ್ಲಿ 'ಹಿರಿಯ ನಾಗರಿಕ ಕೋಟಾ'ವನ್ನು ತಪ್ಪಾಗಿ ಬಳಸಿ ಟಿಕೆಟ್ ನೀಡಲಾಗಿದೆ. ನಕಲಿ ಟಿಕೆಟ್‌ಗಳನ್ನು ಬಣ್ಣದ ಕಾಗದದಲ್ಲಿ ಮುದ್ರಿಸಲಾಗಿದ್ದು, ಅದು ನೈಜವಾಗಿ ಕಾಣುತ್ತದೆ. ಅದರಲ್ಲಿ ಹೆಸರು ಮತ್ತು ವಯಸ್ಸನ್ನು ಮಾತ್ರ ಬದಲಾಯಿಸಲಾಗುತ್ತದೆ ಎಂದು ತಿಳಿಸಿದೆ.

ರೈಲ್ವೆ ನಿಲ್ದಾಣದಲ್ಲಿ ಕರೋನಾವೈರಸ್ ಹರಡುವುದಿಲ್ಲವೇ? ಇಲ್ಲಿದೆ ವಿಶೇಷ ಮಾಹಿತಿ

ಹಿರಿಯ ನಾಗರಿಕರ ಕೋಟಾದಲ್ಲಿ ದಲ್ಲಾಳಿಗಳು ಮೊದಲು ಟಿಕೆಟ್ ಕಾಯ್ದಿರಿಸುತ್ತಾರೆ, ನಂತರ ಈ ಟಿಕೆಟ್‌ಗಳನ್ನು ಸ್ಕ್ಯಾನ್ ಮಾಡಿದ ನಂತರ, ಸಾಫ್ಟ್‌ವೇರ್ ಸಹಾಯದಿಂದ ವಯಸ್ಸು ಮತ್ತು ಹೆಸರುಗಳನ್ನು ಬದಲಾಯಿಸಲಾಗುತ್ತದೆ, ನಂತರ ಅವರ ಬಣ್ಣ ಮುದ್ರಣವನ್ನು ಹೊರತೆಗೆಯಲಾಗುತ್ತದೆ ಎಂದು ತನಿಖಾ ಅಧಿಕಾರಿ ವಿವರಿಸಿದ್ದಾರೆ.

ಟಿಕೆಟ್ ಬುಕ್ ಮಾಡಲು ದಲ್ಲಾಳಿಗಳಿಂದ ದೂರವಿರಿ:
ಲಾಕ್‌ಡೌನ್ (Lockdown) ತೆಗೆದ ನಂತರ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ. ಇದರಿಂದಾಗಿ ಟಿಕೆಟ್‌ಗಳ ಬೇಡಿಕೆ ಹೆಚ್ಚಾಗಿದೆ, ಈ ದಲ್ಲಾಳಿಗಳು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. ಪ್ರಯಾಣಿಕರು ಮಾನ್ಯ ಟಿಕೆಟ್‌ನೊಂದಿಗೆ ಪ್ರಯಾಣಿಸಬೇಕು ಮತ್ತು ಟಿಕೆಟ್ ಕಾಯ್ದಿರಿಸಲು ದಲ್ಲಾಳಿಗಳಿಗೆ ಸಿಕ್ಕಿಹಾಕಿಕೊಳ್ಳಬಾರದು ಎಂದು ಕೇಂದ್ರ ರೈಲ್ವೆಯ ಮುಖ್ಯ ಜನಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ಸಲಹೆ ನೀಡಿದ್ದಾರೆ.
 

More Stories

Trending News