ನವದೆಹಲಿ: ನೀವು ಕೂಡ ರೈಲಿನಲ್ಲಿ (Bharat Darshan Special Tourist Train) ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಪ್ರಯಾಣಿಸಲು ಬಯಸಿದರೆ ಇಲ್ಲಿದೆ ನೋಡಿ ಉತ್ತಮ ಅವಕಾಶ. ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ(IRCTC)ವು ಶ್ರೀರಾಮನ ಜನ್ಮಸ್ಥಳದಿಂದ ಪುರಿ ಮತ್ತು ಗಂಗಾಸಾಗರಕ್ಕೆ ಪ್ರಯಾಣಿಸಲು ಅದ್ಭುತ ಪ್ಯಾಕೇಜ್ ಅನ್ನು ಹೊರತಂದಿದೆ. ‘ಭಾರತ ದರ್ಶನ ವಿಶೇಷ ಪ್ರವಾಸಿ ರೈಲು’ ಮೂಲಕ ನೀವು ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಬಹುದು. ಈ ರೈಲು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಹಲವು ನಗರಗಳ ಮೂಲಕ ಹಾದು ಹೋಗಲಿದೆ. IRCTC ಇದಕ್ಕಾಗಿ ಬುಕ್ಕಿಂಗ್ ಕೂಡ ಆರಂಭಿಸಿದೆ.


COMMERCIAL BREAK
SCROLL TO CONTINUE READING

ರೈಲು ಎಲ್ಲಿಗೆ ಸಂಚರಿಸಲಿದೆ?


IRCTC ನಿರಂತರವಾಗಿ ವಿವಿಧ ಧಾರ್ಮಿಕ ಸ್ಥಳಗಳಿಗೆ ಪ್ಯಾಕೇಜ್‌(Indian Railways Package)ಗಳನ್ನು ಪ್ರಾರಂಭಿಸುತ್ತಿದೆ. IRCTCಯ ಈ ಪ್ಯಾಕೇಜ್‌ನಲ್ಲಿ ರಾಮಜನ್ಮ ಭೂಮಿ ದರ್ಶನ, ಪುರಿ, ಗಂಗಾಸಾಗರಕ್ಕೆ ಪ್ರಯಾಣಿಸಬಹುದು. ಇದಲ್ಲದೆ ಈ ರೈಲು ಯಾತ್ರಾರ್ಥಿಗಳನ್ನು ಅಯೋಧ್ಯೆ, ವಾರಣಾಸಿ, ಬೈದ್ಯನಾಥ, ಗಂಗಾಸಾಗರ, ಪುರಿ, ಕೋನಾರ್ಕ್, ಗಯಾ ಮತ್ತು ಕೋಲ್ಕತ್ತಾದ ಧಾರ್ಮಿಕ ಸ್ಥಳಗಳಿಗೆ ಕರೆದೊಯ್ಯಲಿದೆ.


ಇದನ್ನೂ ಓದಿಸೆಬಿಯ ಮೊದಲ ಮಹಿಳಾ ಅಧ್ಯಕ್ಷರಾಗಿ ಮಾಧಬಿ ಪುರಿ ಬುಚ್ ನೇಮಕ


IRCTCಯಿಂದ ಉತ್ತಮ ಪ್ಯಾಕೇಜ್


  • IRCTCಯ ಈ ವಿಶೇಷ ಪ್ಯಾಕೇಜ್(Bharat Darshan Train Tour)ನಲ್ಲಿ ನೀವು 9 ರಾತ್ರಿ ಮತ್ತು 10 ಹಗಲು ದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಬಹುದು.

  • ಈ ಪ್ಯಾಕೇಜ್ ನಡಿ ಪ್ರತಿದಿನಕ್ಕೆ ಪ್ರಯಾಣಿಕರಿಗೆ ಕೇವಲ 1 ಸಾವಿರ ರೂ. ವೆಚ್ಚವಾಗುತ್ತದೆ.

  • ಈ ಸಂಪೂರ್ಣ ಪ್ಯಾಕೇಜ್ ನ ಬೆಲೆ ಕೇವಲ 9,450 ರೂ. ಆಗಿರುತ್ತದೆ.

  • ಇದರಡಿ ಸ್ಲೀಪರ್ ಕ್ಲಾಸ್ ನಲ್ಲಿ ಪ್ರಯಾಣಿಸುವ ಸೌಲಭ್ಯ ದೊರೆಯಲಿದೆ.

  • ಈ ವಿಶೇಷ ರೈಲು ಆಗ್ರಾದಿಂದ ಆರಂಭವಾಗಲಿದೆ.

  • ಈ ರೈಲಿನಲ್ಲಿ ಹತ್ತುವ ಮತ್ತು ಡಿಬೋರ್ಡಿಂಗ್ ಮಾಡುವ ಆಯ್ಕೆಯನ್ನು ಇತರ ಅನೇಕ ನಗರಗಳಿಂದ ನೀಡಲಾಗಿದೆ.

  • ಪ್ರಯಾಣಿಕರ ಅನುಕೂಲಕ್ಕೆ ಅನುಗುಣವಾಗಿ ಇದರಲ್ಲಿ ಗ್ವಾಲಿಯರ್, ಝಾನ್ಸಿ, ಒರೈ, ಕಾನ್ಪುರ್, ಲಕ್ನೋ, ಬಾರಾಬಂಕಿ ಮತ್ತು ಅಯೋಧ್ಯೆ ಸೇರಿವೆ. ಜನರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ರೈಲು ಹತ್ತುವ ಮತ್ತು ಡಿಬೋರ್ಡಿಂಗ್ ಮಾಡುವ ಸ್ಥಳವನ್ನು ಆಯ್ಕೆ ಮಾಡಬಹುದು.

  • ಈ ಪ್ಯಾಕೇಜ್(Indian Railways Tour Package)ನಲ್ಲಿ ಪ್ರಯಾಣಿಕರಿಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಇರುತ್ತದೆ.

  • ಈ ಪ್ಯಾಕೇಜ್‌ನಲ್ಲಿ ಸ್ಥಳೀಯ ಸಾರಿಗೆ ಮತ್ತು ಮಾರ್ಗದರ್ಶಿ ಶುಲ್ಕಗಳನ್ನು ಸಹ ಸೇರಿಸಲಾಗಿದೆ.

  • ಈ ರೈಲು ಮಾರ್ಚ್ 22ರಂದು ಹೊರಡಲಿದ್ದು, ಮಾರ್ಚ್ 31 ರಂದು ಪ್ರಯಾಣವು ಕೊನೆಗೊಳ್ಳುತ್ತದೆ.


ಇದನ್ನೂ ಓದಿ: PM Kisan Yojana : ಪಿಎಂ ಕಿಸಾನ್ ರೈತರೆ ಈಗಲೇ ಈ ಮಾಡಿ ಕೆಲಸ : ಇಲ್ಲದಿದ್ದರೆ ಬರುವುದಿಲ್ಲ 11ನೇ ಕಂತಿನ ಹಣ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.