PM Kisan Yojana : ಪಿಎಂ ಕಿಸಾನ್ ರೈತರೆ ಈಗಲೇ ಈ ಮಾಡಿ ಕೆಲಸ : ಇಲ್ಲದಿದ್ದರೆ ಬರುವುದಿಲ್ಲ 11ನೇ ಕಂತಿನ ಹಣ!

ಯೋಜನೆಯನ್ನು ಪರಿಚಯಿಸುವ ಸಮಯದಲ್ಲಿ, 2 ಹೆಕ್ಟೇರ್‌ಗಿಂತ ಕಡಿಮೆ ಕೃಷಿಯೋಗ್ಯ ಭೂಮಿ ಹೊಂದಿರುವ ರೈತರು ಮಾತ್ರ ಪ್ರಯೋಜನ ಪಡೆಯುತ್ತಿದ್ದರು. ನಂತರ ಈ ಷರತ್ತನ್ನು ಈ ಯೋಜನೆಯಿಂದ ತೆಗೆದುಹಾಕಲಾಯಿತು ಮತ್ತು ಈಗ ದೇಶದ ಎಲ್ಲಾ ರೈತರು ಕೃಷಿಯೋಗ್ಯ ಭೂಮಿ ಹೊಂದಿರುವ ಈ ಯೋಜನೆಯ ಲಾಭವನ್ನು ಪಡೆಯಬಹುದು.

Written by - Channabasava A Kashinakunti | Last Updated : Feb 28, 2022, 05:16 PM IST
  • 11ನೇ ಕಂತು ಯಾವಾಗ ಖಾತೆಗೆ ಜಮಾ ಆಗುತ್ತೆ?
  • ಈ ರೈತರ ಖಾತೆಗೆ ಜಮಾ ಆಗುವುದಿಲ್ಲ 11ನೇ ಕಂತಿನ ಹಣ
  • ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.
PM Kisan Yojana : ಪಿಎಂ ಕಿಸಾನ್ ರೈತರೆ ಈಗಲೇ ಈ ಮಾಡಿ ಕೆಲಸ : ಇಲ್ಲದಿದ್ದರೆ ಬರುವುದಿಲ್ಲ 11ನೇ ಕಂತಿನ ಹಣ! title=

ನವದೆಹಲಿ : ದೇಶದ ಪ್ರಧಾನಿ ನರೇಂದ್ರ ಮೋದಿ ಅವರು 2018 ರಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಪ್ರಾರಂಭಿಸಿದರು. ದೇಶದ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಯೋಜನೆಯನ್ನು ಪರಿಚಯಿಸುವ ಸಮಯದಲ್ಲಿ, 2 ಹೆಕ್ಟೇರ್‌ಗಿಂತ ಕಡಿಮೆ ಕೃಷಿಯೋಗ್ಯ ಭೂಮಿ ಹೊಂದಿರುವ ರೈತರು ಮಾತ್ರ ಪ್ರಯೋಜನ ಪಡೆಯುತ್ತಿದ್ದರು. ನಂತರ ಈ ಷರತ್ತನ್ನು ಈ ಯೋಜನೆಯಿಂದ ತೆಗೆದುಹಾಕಲಾಯಿತು ಮತ್ತು ಈಗ ದೇಶದ ಎಲ್ಲಾ ರೈತರು ಕೃಷಿಯೋಗ್ಯ ಭೂಮಿ ಹೊಂದಿರುವ ಈ ಯೋಜನೆಯ ಲಾಭವನ್ನು ಪಡೆಯಬಹುದು.

ಪಿಎಂ ಕಿಸಾನ್ ಯೋಜನೆ(PM Kisan Samman Nidhi) ಅಡಿಯಲ್ಲಿ, ಎಲ್ಲಾ ನೋಂದಾಯಿತ ರೈತರು ವಾರ್ಷಿಕವಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯಾಗಿ 6,000 ರೂ. ಪಡೆಯುತ್ತಾರೆ. ಈ ಮೊತ್ತವನ್ನು ರೈತರ ಖಾತೆಗೆ ಮೂರು ಕಂತುಗಳಲ್ಲಿ 2,000 ರೂ. ಬಿಡುಗಡೆ ಮಾಡಲಾಗುತ್ತದೆ. ಈ ಕಂತುಗಳನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.

ಇದನ್ನೂ ಓದಿ : ಸೆಬಿಯ ಮೊದಲ ಮಹಿಳಾ ಅಧ್ಯಕ್ಷರಾಗಿ ಮಾಧಬಿ ಪುರಿ ಬುಚ್ ನೇಮಕ

ರೈತರಿಗೆ ದೊಡ್ಡ ಹೊಡೆತ

ಇತ್ತೀಚೆಗೆ ಕೇಂದ್ರ ಸರ್ಕಾರ(Modi Govt) ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಕೇಂದ್ರ ಸರ್ಕಾರವು ಎಲ್ಲಾ ನೋಂದಾಯಿತ ರೈತರಿಗೆ ಪಿಎಂ ಕಿಸಾನ್ ಖಾತೆಯ ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದೆ. ರೈತರಿಗೆ ಇ-ಕೆವೈಸಿ ನಡೆಸಲು ಕೊನೆಯ ದಿನಾಂಕವನ್ನು ಮಾರ್ಚ್ 31, 2022 ಎಂದು ನಿಗದಿಪಡಿಸಲಾಗಿದೆ. ಕೊನೆಯ ನಿಗದಿತ ಗಡುವಿನ ಮೊದಲು ಇ-ಕೆವೈಸಿ ಮಾಡಲು ಸಾಧ್ಯವಾಗದ ರೈತರಿಗೆ, ಪಿಎಂ ಕಿಸಾನ್ ಸಮ್ಮಾನ್ ನಿಧಿಯ 11 ನೇ ಕಂತು ಅವರ ಖಾತೆಗೆ ಬಿಡುಗಡೆಯಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮಾರ್ಚ್ 31ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಲು ಸಾಧ್ಯವಾಗದ ರೈತರ 11ನೇ ಕಂತಿನ ಹಣ ಅವರ ಖಾತೆಗೆ ವರ್ಗಾವಣೆಯಾಗುವುದಿಲ್ಲ.

11ನೇ ಕಂತು ಯಾವಾಗ ಖಾತೆಗೆ ವರ್ಗಾವಣೆಯಾಗುತ್ತದೆ

ಜನವರಿ 1, 2022 ರಂದು, ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆ(PM Kisan Yojana)ಯ 10 ನೇ ಕಂತಿನ ಹಣವನ್ನು ರೈತರ ಖಾತೆಗೆ ವರ್ಗಾಯಿಸಿತು. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಕಂತನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜನವರಿಯಲ್ಲಿ ನಾಲ್ಕು ತಿಂಗಳ ಅಂತರದ ನಂತರ ಏಪ್ರಿಲ್ ಮೊದಲ ವಾರದಲ್ಲಿ 11ನೇ ಕಂತಿನ ಹಣ ರೈತರ ಖಾತೆಗೆ ಜಮೆಯಾಗಬಹುದು.

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ! ಈ ತಿಂಗಳ ಸಂಬಳದಲ್ಲಿ ನಿಮಗೆ ಸಿಗಲಿದೆ 38,692 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News