Indian Railways New Policy: ಈ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಸಿಗುತ್ತೆ ಫ್ರೀ ಫುಡ್, ವಾಟರ್
Indian Railways New Policy: ರೈಲ್ವೆ ನಿಯಮಗಳ ಪ್ರಕಾರ, ರೈಲು ಎರಡು ಗಂಟೆ ಅಥವಾ ಅದಕ್ಕಿಂತ ಹೆಚ್ಚು ವಿಳಂಬವಾದರೆ, ಪ್ರಯಾಣಿಕರಿಗೆ ಉಚಿತ ಉಪಹಾರ ಮತ್ತು ಆಹಾರವನ್ನು ನೀಡಲಾಗುತ್ತದೆ. ಈ ಸೌಲಭ್ಯವು ಕೆಲವು ಆಯ್ದ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಮಾತ್ರ ಲಭ್ಯವಿರಲಿದೆ ಎಂಬುದು ಗಮನಾರ್ಹವಾಗಿದೆ.
Food Water In Train: ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಇಲ್ಲಿದೆ ನಿಮಗಾಗಿ ಗುಡ್ ನ್ಯೂಸ್. ಹೌದು, ಭಾರತೀಯ ರೈಲ್ವೇಯ ಹೊಸ ನಿಯಮದ ಪ್ರಕಾರ, ಭಾರತೀಯ ರೈಲ್ವೇಯು ಪ್ರಯಾಣಿಕರಿಗೆ ಉಚಿತವಾಗಿ ಅನೇಕ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತದೆ, ನೀವು ರೈಲ್ವೆ ಪ್ರಯಾಣಿಕರಾಗಿದ್ದರೆ ಈ ನಿಯಮಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯವಾಗಿದೆ. ರೈಲು ಪ್ರಯಾಣದ ಸಮಯದಲ್ಲಿ ನೀವು ಉಚಿತ ಆಹಾರವನ್ನು ಸಹ ಪಡೆಯಬಹುದು. ರೈಲು ತಡವಾದಾಗ ರೈಲ್ವೆ ಪ್ರಯಾಣಿಕರಿಗೆ ಉಚಿತ ಆಹಾರ, ನೀರು ಮತ್ತು ತಿಂಡಿಯನ್ನು ಒದಗಿಸುತ್ತದೆ.
ರೈಲ್ವೆ ನಿಯಮಗಳ ಪ್ರಕಾರ, ರೈಲು ಎರಡು ಗಂಟೆ ಅಥವಾ ಅದಕ್ಕಿಂತ ಹೆಚ್ಚು ವಿಳಂಬವಾದರೆ, ಪ್ರಯಾಣಿಕರಿಗೆ ಉಚಿತ ಉಪಹಾರ ಮತ್ತು ಆಹಾರವನ್ನು ನೀಡಲಾಗುತ್ತದೆ. ಈ ಸೌಲಭ್ಯವು ಕೆಲವು ಆಯ್ದ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಮಾತ್ರ ಲಭ್ಯವಿದೆ. ಈ ರೈಲುಗಳಲ್ಲಿ ರಾಜಧಾನಿ, ಶತಾಬ್ದಿ ಮತ್ತು ದುರಂತೋ ಎಕ್ಸ್‌ಪ್ರೆಸ್ ಸೇರಿವೆ.
ಇದನ್ನೂ ಓದಿ- ಬ್ಯಾಂಕ್ ಗ್ರಾಹಕರಿಗೆ ಸಂತಸದ ಸುದ್ದಿ ಪ್ರಕಟಿಸಿದ ಆರ್‌ಬಿಐ ! ಸಾಲ ಪಡೆದವರು ಈಗ ನಿರಾಳ
ನಾನಾ ಕಾರಣಗಳಿಂದಾಗಿ ಹಲವು ಬಾರಿ ರೈಲುಗಳು ಗಂಟೆಗಟ್ಟಲೆ ತಡವಾಗಿ ಓಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಬೇಕು. ರೈಲು ತಡವಾಗಿದ್ದರೆ, ಐಆರ್‌ಸಿಟಿಸಿ ಸ್ವತಃ ಈ ಸೇವೆಯನ್ನು ಒದಗಿಸುತ್ತದೆ. ಆದರೆ, ನೀವು ಇದರ ಪ್ರಯೋಜನವನ್ನು ಪಡೆಯದಿದ್ದಾಗ ಐಆರ್‌ಸಿಟಿಸಿಯಿಂದ ಈ ಸೌಲಭ್ಯವನ್ನು ಕೋರಬಹುದಾಗಿದೆ.
ಇದನ್ನೂ ಓದಿ- ನಿಮ್ಮ ಸಾಲದ EMI ಇಂದಿನಿಂದ ಹೆಚ್ಚಾಗುವುದು ! ಕೆಲವೇ ಕ್ಷಣಗಳಲ್ಲಿ ಹೊರಬೀಳುವುದು ಖಚಿತ ಮಾಹಿತಿ
ರೈಲಿನ ಉಪಹಾರದಲ್ಲಿ ಚಹಾ-ಕಾಫಿ ಮತ್ತು ಬಿಸ್ಕತ್ತುಗಳು ಲಭ್ಯವಿವೆ. ಮಧ್ಯಾಹ್ನದ ವೇಳೆ ರೋಟಿ, ದಾಲ್, ಸಬ್ಜಿ ದೊರೆಯುತ್ತದೆ. ಸಂಜೆ ಉಪಹಾರ, ಚಹಾ ಅಥವಾ ಕಾಫಿ ಮತ್ತು ನಾಲ್ಕು ಸ್ಲೈಸ್ ಬ್ರೆಡ್(ವೈಟ್ ಬ್ರೆಡ್/ಬ್ರೌನ್ ಬ್ರೆಡ್), ಬಟರ್ ನೀಡಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.