Indian Railways: ರೈಲ್ವೆಯಿಂದ ಹೊಸ ಸೇವೆ, ಈಗ ಶೀಘ್ರವೇ ಸಿಗಲಿದೆ ದೃಢೀಕೃತ ಸೀಟು
IRCTC ತತ್ಕಾಲ್ ಟಿಕೆಟ್ ಆ್ಯಪ್: ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ಇದೆ. ಈಗ ನೀವು ತತ್ಕಾಲ್ ಟಿಕೆಟ್‌ಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ತತ್ಕಾಲ್ ಟಿಕೆಟ್ ಬುಕಿಂಗ್‌ಗಾಗಿ ರೈಲ್ವೆ ಹೊಸ ಸೇವೆಯನ್ನು ಒದಗಿಸುತ್ತಿದೆ. ಇದರಡಿ ಈಗ ನೀವು ದೃಢಪಡಿಸಿದ ಸೀಟಿನೊಂದಿಗೆ ಟಿಕೆಟ್ ಅನ್ನು ತ್ವರಿತವಾಗಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ನವದೆಹಲಿ: ನೀವು ಸಹ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ನಿಮಗಾಗಿ ಪ್ರಮುಖ ಸುದ್ದಿ ಇಲ್ಲಿದೆ. ಈಗ ನೀವು ರೈಲು ಟಿಕೆಟ್‌ಗಳಿಗಾಗಿ ಎಲ್ಲಿಯೂ ಹೋಗಬೇಕಾಗಿಲ್ಲ ಅಥವಾ ನಿಮಗೆ ಏಜೆಂಟರ ಅಗತ್ಯವೂ ಇಲ್ಲ. ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗಾಗಿ ವಿಶೇಷ ಸೌಲಭ್ಯವನ್ನು ಪ್ರಾರಂಭಿಸಿದೆ. ರೈಲ್ವೆ ಇದೀಗ ತತ್ಕಾಲ್ ಟಿಕೆಟ್‌ಗಾಗಿ ಹೊಸ ಆಪ್ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ IRCTC ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿದೆ. ಈ ಅಪ್ಲಿಕೇಶನ್ ಮೂಲಕ ನೀವು ನಿಮ್ಮ ಮನೆಯಲ್ಲಿಯೇ ಕುಳಿತು ಕ್ಷಣಾರ್ಧದಲ್ಲಿ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಇದರಲ್ಲಿ ನೀವು ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ.
ಈಗ ಕನ್ಫರ್ಮ್ ಟಿಕೆಟ್ ಪಡೆಯುವುದು ಸುಲಭ
ರೈಲ್ವೆ ಪ್ರಯಾಣಿಕರಿಗೆ ಕೆಲವು ಸಂದರ್ಭದಲ್ಲಿ ದಿಢೀರ್ ಪ್ರಯಾಣ ಕೈಗೊಳ್ಳುವ ಪರಿಸ್ಥಿತಿ ಎದುರಾಗುತ್ತವೆ. ಆದರೆ, ಇದ್ದಕ್ಕಿದ್ದಂತೆ ರೈಲಿನಲ್ಲಿ ಕನ್ಫರ್ಮ್ ಟಿಕೆಟ್ ಸಿಗುವುದು ಕಷ್ಟ. ಈ ಸಂದರ್ಭದಲ್ಲಿ ನೀವು ಏಜೆಂಟ್‍ರನ್ನು ಅಥವಾ ತತ್ಕಾಲ್ ಟಿಕೆಟ್‌ಗಾಗಿ ಪ್ರಯತ್ನಿಸಬೇಕಾಗುತ್ತದೆ. ಆದರೆ, ಇಂತಹ ಸಂದರ್ಭದಲ್ಲಿ ತತ್ಕಾಲ್ ಟಿಕೆಟ್ ಪಡೆಯುವುದು ಸುಲಭವಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ರೈಲ್ವೆಯ ಈ ಸೇವೆಯನ್ನು ಪರಿಚಯಿಸಿದ್ದು, ಇದರಿಂದ ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ. ConfirmTkt (IRCTC Rail Connect Premium Partner) ಈ ಹೆಸರಿನ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: RBI Update: ಇನ್ಮುಂದೆ ಕ್ರೆಡಿಟ್ ಕಾರ್ಡ್ ಮೂಲಕವೂ ಯುಪಿಐ ಪೇಮೆಂಟ್ ಮಾಡಬಹುದು!
ಅದ್ಭುತ ಪ್ರಯೋಜನ ಹೊಂದಿರುವ ಆ್ಯಪ್
ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಈ ಆ್ಯಪ್‌ನಲ್ಲಿ ನೀವು ರೈಲಿನಲ್ಲಿ ತತ್ಕಾಲ್ ಕೋಟಾದಡಿ ಲಭ್ಯವಿರುವ ಸೀಟುಗಳ ಮಾಹಿತಿಯನ್ನು ಪಡೆಯುತ್ತೀರಿ.
ಇದಲ್ಲದೆ ವಿವಿಧ ರೈಲು ಸಂಖ್ಯೆಗಳನ್ನು ನಮೂದಿಸುವ ಮೂಲಕ ನೀವು ಖಾಲಿ ಸೀಟುಗಳನ್ನು ಸಹ ಸುಲಭವಾಗಿ ಹುಡುಕಬಹುದು.
ಇದರೊಂದಿಗೆ ಆಯಾ ಮಾರ್ಗದಲ್ಲಿ ಚಲಿಸುವ ಎಲ್ಲಾ ರೈಲುಗಳಲ್ಲಿ ಉಳಿದಿರುವ ತತ್ಕಾಲ್ ಟಿಕೆಟ್‌ಗಳ ಮಾಹಿತಿಯನ್ನು ನೀವು ಮನೆಯಲ್ಲಿಯೇ ಕುಳಿತು ಈ ಅಪ್ಲಿಕೇಶನ್‌ನಲ್ಲಿ ಪಡೆಯುತ್ತೀರಿ.
ನೀವು ಈ ಅಪ್ಲಿಕೇಶನ್ ಅನ್ನು Google Play Store ನಿಂದ ಡೌನ್‌ಲೋಡ್ ಮಾಡಬಹುದು.
ಈ ಅಪ್ಲಿಕೇಶನ್ ಟಿಕೆಟ್ ಬುಕಿಂಗ್‌ಗಾಗಿ master listನ್ನು ಸಹ ಹೊಂದಿದೆ. ಇದರಿಂದಾಗಿ ಟಿಕೆಟ್ ಬುಕಿಂಗ್‌ಗಾಗಿ ನಿಮ್ಮ ಸಮಯ ವ್ಯರ್ಥವಾಗುವುದಿಲ್ಲ.
ಟಿಕೆಟ್ ಬುಕಿಂಗ್ ಸಮಯ
ಈ ಅಪ್ಲಿಕೇಶನ್‌ನಲ್ಲಿ ಪ್ರಯಾಣಿಕರು ತಮ್ಮ ಸೇವ್ ಡೇಟಾ ಮೂಲಕ ಬೆಳಿಗ್ಗೆ 10 ಗಂಟೆಯಿಂದ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು.
ಇದರ ನಂತರಇಲ್ಲಿ ನೀವು ಈ ಟಿಕೆಟ್‌ನ ಆನ್‌ಲೈನ್ ಪಾವತಿಯನ್ನು ಮಾಡಲು ಸಾಧ್ಯವಾಗುತ್ತದೆ.
ಟಿಕೆಟ್ ಬುಕ್ ಮಾಡಿದ ನಂತರವೂ ಟಿಕೆಟ್ ಕಾಯುತ್ತಿರಬಹುದು ಎಂಬುದನ್ನು ನೆನಪಿನಲ್ಲಿಡಿ.
ನೀವು IRCTC Next Generation ಮೊಬೈಲ್ ಅಪ್ಲಿಕೇಶನ್‌ನಿಂದ ಈ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: Indian Railways: ಚಾರ್ಟ್ ಸಿದ್ಧಪಡಿಸಿದ ನಂತರ ಕ್ಯಾನ್ಸಲ್ ಮಾಡಲಾದ ಟಿಕೆಟ್‌ಗೂ ಸಿಗುತ್ತೆ ರೀಫಂಡ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.