ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶವೊಂದು ಹೆಚ್ಚು ವೈರಲ್ ಆಗುತ್ತಿದೆ. ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಪ್ರತಿಯೊಬ್ಬರಿಗೂ 2.67 ಲಕ್ಷ ರೂಪಾಯಿಗಳನ್ನು ನೀಡಲಾಗುವುದಾಗಿ ಹೇಳಲಾಗುತ್ತಿದೆ. ಸರ್ಕಾರದ ಈ ಯೋಜನೆಯಡಿ ಬ್ಯಾಂಕ್ ಖಾತೆಗೆ 2,67,000 ಜಮಾ ಆಗಿರುವುದಾಗಿಯೂ ಹೇಳಲಾಗಿದೆ.
ವೈರಲ್ ಸಂದೇಶದ ಹಿಂದಿನ ಸತ್ಯವೇನು? :
ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗುತ್ತಿರುವ ಈ ಸಂದೇಶವನ್ನು ಸರ್ಕಾರಿ ಸಂಸ್ಥೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಪರಿಶೀಲಿಸಿದೆ. ಈ ಪರಿಶೀಲನೆ ನಂತರ ಮೊಬೈಲ್‌ನಲ್ಲಿ ಸ್ವೀಕರಿಸಲಾದ ಸಂದೇಶವು ಸಂಪೂರ್ಣವಾಗಿ ನಕಲಿ ಎಂದು ಅದು ಸ್ಪಷ್ಟಪಡಿಸಿದೆ. ಸರ್ಕಾರವು ಅಂತಹ ಯಾವುದೇ ಯೋಜನೆಯನ್ನು ನಡೆಸುತ್ತಿಲ್ಲ, ಈ ಸಂದೇಶಗಳಿಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಿಐಪಿ ಹೇಳಿದೆ.
ಇದನ್ನೂ ಓದಿ : Gold Price Today : ಚಿನ್ನ ಖರೀದಿಗೆ ಶುಭ ಸಮಯ , ಇಳಿಕೆಯಾಗಿದೆ ಬಂಗಾರದ ಬೆಲೆ , ಬೆಳ್ಳಿ ಕೂಡಾ ಅಗ್ಗ
ಸಂದೇಶ ಬಂದರೆ ಎಚ್ಚರದಿಂದಿರಿ :
ಸರ್ಕಾರದ ಯೋಜನೆಯಡಿ ನಿಮ್ಮ ಖಾತೆಗೆ 2.67 ಲಕ್ಷ ರೂಪಾಯಿ ಜಮೆಯಾಗಿದೆ ಎನ್ನುವ ಮೆಸೇಜ್ ಮೊಬೈಲ್‌ನಲ್ಲಿ ಬಂದರೆ ಎಚ್ಚರದಿಂದಿರಿ. ಸರ್ಕಾರಿ ಯೋಜನೆ ಹೆಸರಿನಲ್ಲಿ ಮೋಸದ ಸಂದೇಶಗಳನ್ನು ಕಳುಹಿಸಲಾಗುತ್ತಿದ್ದು, ನಿಮ್ಮ ಬ್ಯಾಂಕ್ ಖಾತೆಯಿಂದ ವಂಚನೆ ಮಾಡಬಹುದು ಎಂದು ಪಿಐಬಿ ಹೇಳಿದೆ.
Did you also receive a message claiming that your bank account has been credited with Rs 2,67,000 under 'Govt Yojana'?
BEWARE! #PIBFactCheck
▶️This Message is #FAKE!
▶️Government of India is not running any such scheme and is not associated with this text message. pic.twitter.com/DycI36h3Pb
— PIB Fact Check (@PIBFactCheck) June 7, 2022
ತಪ್ಪಿಯೂ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ :
ಸರಕಾರದ ಯೋಜನೆಯಡಿ 2.67 ಲಕ್ಷ ನೀಡುವಂತೆ ಸಕಳುಹಿಸುವ ಮೆಸೇಜ್ ನೊಂದಿಗೆ ಒಂದು ಲಿಂಕ್ ಕೂಡ ನೀಡಲಾಗುತ್ತಿದೆ. ತಪ್ಪಿ ಕೂಡಾ ಈ ಲಿಂಕ್ ಅನ್ನು ಕ್ಲಿಕ್ ಮಾಡದಂತೆ ಪಿಐಬಿ ಹೇಳಿದೆ. ಈ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರಿಂದ ಖಾತೆಯಲ್ಲಿರುವ ಹಣ ಖಾಲಿಯಾಗುವ ಸಾಧ್ಯತೆಯನ್ನು ಕೂಡಾ ತಳ್ಳಿ ಹಾಕುವಂತಿಲ್ಲ ಎಂದು ಅದು ಎಚ್ಚರಿಸಿದೆ.
ಇದನ್ನೂ ಓದಿ : Indian Railways: ರೈಲಿನಲ್ಲಿ ಈ ಸಮಯದಲ್ಲಿ ಯಾರೂ ನಿಮ್ಮ ಸೀಟಿನಲ್ಲಿ ಕೂರುವಂತಿಲ್ಲ
ಈ ಹಿಂದೆಯೂ ವೈರಲ್ ಆಗಿತ್ತು ನಕಲಿ ಸಂದೇಶಗಳು :
ಆದರೆ, ಸರ್ಕಾರಿ ಯೋಜನೆಯಡಿ ಹಣ ನೀಡಲಾಗುವುದು ಎಂಬ ಸಂದೇಶ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಹಲವು ಸಂದೇಶಗಳು ಮುನ್ನೆಲೆಗೆ ಬಂದಿದ್ದು, ಈ ಮೂಲಕ ಹಲವರ ಬ್ಯಾಂಕ್ ಖಾತೆಯಿಂದ ಹಣ ನಾಪತ್ತೆಯಾಗಿತ್ತು. ಅದಕ್ಕಾಗಿಯೇ ಪಿಐಬಿ ಇಂತಹ ನಕಲಿ ಸಂದೇಶಗಳ ಫ್ಯಾಕ್ಸ್ ಚೆಕ್ ಮೂಲಕ ಕಾಲಕಾಲಕ್ಕೆ ಸಾರ್ವಜನಿಕರನ್ನು ಎಚ್ಚರಿಸುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.