ಬೆಂಗಳೂರು : Indian Railways Rules : ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದು ಇಲ್ಲಿದೆ. ರೈಲು ಪ್ರಯಾಣದ ವೇಳೆ ಟಿಕೆಟ್‌ಗಳು ಮತ್ತು ಬರ್ತ್‌ಗಳಿಗೆ ಸಂಬಂಧಿಸಿದಂತೆ ಆಗಾಗ ಸಮಸ್ಯೆ ಎದುರಾಗುತ್ತದೆ. ರೈಲಿನಲ್ಲಿ ಪ್ರಯಾಣಿಸುವಾಗ ಹಿರಿಯ ನಾಗರಿಕರಿಗೆ ಲೋವರ್ ಬರ್ತ್‌ಗೆ ಆದ್ಯತೆ ನೀಡಲಾಗುತ್ತದೆ . ಆದರೆ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಹಿರಿಯ ನಾಗರಿಕರು ಎಂದು ಮನವಿ ಮಾಡಿದ ನಂತರವೂ ಲೋವರ್ ಬರ್ತ್ ಸಿಗದ ಅನೇಕ ಸಂದರ್ಭಗಳು ಎದುರಾಗುತ್ತವೆ. ಹೀಗಾದಾಗ ವಯಸ್ಸಾದವರಿಗೆ ಪ್ರಯಾಣದ ವೇಳೆ ತೊಂದರೆ ಎದುರಾಗುತ್ತದೆ.  ಆದರೆ ಈಗ ಲೋವರ್ ಬರ್ತ್ ಬೇಕಿದ್ದರೆ ಚಿಂತಿಸಬೇಕಾಗಿಲ್ಲ. 


COMMERCIAL BREAK
SCROLL TO CONTINUE READING

ಹಿರಿಯ ನಾಗರಿಕರಿಗೆ  ಸಿಗಲಿದೆ ಲೋವರ್ ಬರ್ತ್ :
ಇತ್ತೀಚಿಗೆ ಪ್ರಯಾಣಿಕರೊಬ್ಬರು ಭಾರತೀಯ ರೈಲ್ವೆಗೆ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದರು. ಟ್ವೀಟ್ ಮಾಡುವ ವೇಳೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್  ಅವರಿಗೂ ಟ್ಯಾಗ್ ಮಾಡಿದ್ದಾರೆ.  ರೈಲಿನಲ್ಲಿ ಸೀಟು ಹಂಚಿಕೆ ಮಾಡುವಾಗ ಯಾವ ರೀತಿಯ ಮಾನದಂಡವನ್ನು ಅನುಸರಿಸಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.  ತಾನು ಮೂವರು ಹಿರಿಯ ನಾಗರಿಕರಿಗೆ ಲೋವರ್ ಬರ್ತ್ ಆದ್ಯತೆಯ ಮೇರೆಗೆ  ಟಿಕೆಟ್ ಕಾಯ್ದಿರಿಸಿರುವುದಾಗಿ ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ. ತಾನು ಟಿಕೆಟ್ ಬುಕ್ ಮಾಡುವಾಗ 02 ಬರ್ತ್‌ಗಳು ಲಭ್ಯವಿವತ್ತು. ಆದರೆ, ವಯಸ್ಸಾದವರಿಗೆ ಲೋವರ್ ಬರ್ತ್ ನೀಡುವ ಬದಲು,  ಮಧ್ಯದ ಬರ್ತ್, ಮೇಲಿನ ಬರ್ತ್ ಮತ್ತು ಸೈಡ್ ಲೋವರ್ ಬರ್ತ್ ನೀಡಲಾಗಿದೆ. ಈ ಕ್ರಮವನ್ನು  ಸರಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ರೈಲ್ವೇ ಇಲಾಖೆ ಕೂಡ ಇವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದೆ. 


ಇದನ್ನೂ ಓದಿ : Arecanut Price Today: ರಾಜ್ಯದ ಮಾರ್ಕೆಟ್‌ನಲ್ಲಿ ಅಡಿಕೆಗೆ ಬಂಪರ್ ದರ


IRCTC ನೀಡಿರುವ ಉತ್ತರವೇನು?
ಈ ಪ್ರಶ್ನೆಗೆ IRCTC ಉತ್ತರ ನೀಡಿದೆ.  ಲೋವರ್ ಬರ್ತ್‌ಗಳು/ಹಿರಿಯ ನಾಗರಿಕರ ಕೋಟಾ ಬರ್ತ್‌ಗಳು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನವರಿಗೆ ನೀಡಲಾಗುತ್ತದೆ.  ಒಂಟಿಯಾಗಿ ಅಥವಾ ಇಬ್ಬರು ಮಹಿಳೆಯರು ಒಟ್ಟಿಗೆ ಪ್ರಯಾಣಿಸುತ್ತಿದ್ದರೆ 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಾದ ಮಹಿಳೆಯರಿಗೆ ನೀಡಲಾಗುತ್ತದೆ.  ಆದರೆ ಟಿಕೆಟ್ ಬುಕ್ ಮಾಡುವಾಗ ಅದರಲ್ಲಿ ಒಬ್ಬರು ಇಬ್ಬರು ಹಿರಿಯ ನಾಗರೀಕರಾಗಿದ್ದು, ಉಳಿದವರು ಹಿರಿಯ ನಾಗರೀಕರಲ್ಲದಿದ್ದರೆ ಲೋವರ್ ಬರ್ತ್ ಮಾನದಂಡವನ್ನು ಪರಿಗಣಿಸುವುದಿಲ್ಲ ಎಂದು ರೈಲ್ವೆ ಇಲಾಖೆ ಹೇಳಿದೆ. 


ಇದನ್ನೂ ಓದಿ : 7th Pay Commission : ಕೇಂದ್ರ ಪಿಂಚಣಿ, ನೌಕರರಿಗೆ ಸಿಹಿ ಸುದ್ದಿ : DA ಬಗ್ಗೆ ಮಹತ್ವದ ಮಾಹಿತಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.