ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ದೇಶದ ಸುಮಾರು 47.68 ಲಕ್ಷ ಕೇಂದ್ರ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರು ಹಣಕಾಸು ಸಚಿವಾಲಯದ ಪ್ರಕಟಣೆಯ ಲಾಭವನ್ನು ಪಡೆಯಲಿದ್ದಾರೆ. ಡಿಎ ಹೆಚ್ಚಳದ ಪ್ರಯೋಜನವನ್ನು ಜನವರಿ 2022 ರಿಂದ ನೀಡಲಾಗುವುದು ಎಂದು ಸರ್ಕಾರ ಘೋಷಿಸಿತು.
ನೌಕರರ ಖಾತೆಯಲ್ಲಿಯೂ ಬಾಕಿ
ಈ ಸಂಬಂಧ ಹಣಕಾಸು ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಹೊಸ ಅಪ್ ಡೇಟ್ ನಂತರ, ಈ ಮೊದಲು, ತುಟ್ಟಿಭತ್ಯೆಯನ್ನು ಕೇಂದ್ರವು ಈಗಾಗಲೇ ಶೇ.31 ರಿಂದ 34 ಕ್ಕೆ ಹೆಚ್ಚಳ ಮಾಡಿದೆ. ಆದರೆ ಈಗ ಹಣಕಾಸು ಸಚಿವಾಲಯವು 2022ರ ಜನವರಿಯಿಂದ ಹೆಚ್ಚಿದ ತುಟ್ಟಿಭತ್ಯೆಯನ್ನು ಜಾರಿಗೆ ತರಲು ಅನುಮೋದನೆ ನೀಡಿದೆ. ಅಂದರೆ, ಈಗ ನೌಕರರ ಖಾತೆಗೆ ಬಾಕಿ ಹಣ ಕೂಡ ಬರಲಿದೆ.
ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಬಿಗ್ ರಿಲೀಫ್!
ಹೆಚ್ಚಿದ DA ಲಾಭ ಪಡೆಯುವುದು ಹೇಗೆ?
ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ಇತ್ತೀಚೆಗೆ ಡಿಎಯನ್ನು ಮೂರು ಪ್ರತಿಶತದಷ್ಟು ಹೆಚ್ಚಿಸಲು ಘೋಷಿಸಿತು. ಇದಾದ ನಂತರ ಡಿಎಯನ್ನು ಶೇ.31ರಿಂದ ಶೇ.34ಕ್ಕೆ ಹೆಚ್ಚಿಸಲಾಯಿತು. ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಮೂಲ ವೇತನದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.
47.68 ಲಕ್ಷ ಕೇಂದ್ರ ಉದ್ಯೋಗಿಗಳ ಜತೆಗೆ 68.62 ಲಕ್ಷ ಪಿಂಚಣಿದಾರರು ಕೂಡ ಹಣಕಾಸು ಸಚಿವಾಲಯ ನೀಡಿರುವ ಸಿಹಿ ಸುದ್ದಿಯ ಲಾಭ ಪಡೆಯಲಿದ್ದಾರೆ. ಹೆಚ್ಚಿದ ಡಿಎಯನ್ನು ಜನವರಿ 1, 2022 ರಿಂದ ಪಾವತಿಸಲಾಗುವುದು. ಪ್ರತಿ ತಿಂಗಳು ಪಡೆಯುವ ವೇತನದಲ್ಲಿ ಶೀಘ್ರದಲ್ಲೇ ಡಿಎ ಪಾವತಿಸಲಾಗುವುದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಅದೇ ಸಮಯದಲ್ಲಿ, ಹಿಂದಿನ ತಿಂಗಳ ಬಾಕಿಯನ್ನು ಸಹ ನೌಕರರಿಗೆ ನೀಡಲಾಗುವುದು.
ಇದನ್ನೂ ಓದಿ : Arecanut Price Today: ರಾಜ್ಯದಲ್ಲಿ ಭರ್ಜರಿ ಏರಿಕೆ ಕಂಡ ಅಡಿಕೆ ಧಾರಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.