ನವದೆಹಲಿ : ರೈಲ್ವೇ ಸಚಿವಾಲಯವು ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಮುಖ ಸಲಹೆಯನ್ನು ನೀಡಿದೆ. ಈ ಸಲಹೆ ಸೂಚನೆಯನ್ನು ಅನುಸರಿಸುವಂತೆ ಅದು ಪ್ರಯಾಣಿಕರಲ್ಲಿ ಕೇಳಿದೆ. ಈ ಸಲಹೆ, ಸೂಚನೆಗಳನ್ನು ಅನುಸರಿಸಿದರೆ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ರೈಲ್ವೇ ಪ್ರಯಾಣಿಕರು ರೈಲ್ವೆ ಇಲಾಖೆ (Railways) ನೀಡುವ ಸಲಹೆಗಳನ್ನು ಅನುಸರಿಸಿದರೆ, ಪ್ರಯಾಣದ ಸಮಯ ಎದುರಾಗುವ ಅನಗತ್ಯ ಒತ್ತಡದಿಂದ ಮುಕ್ತರಾಗಬಹುದು. ಅದೇ ರೀತಿಯಲ್ಲಿ ಲಗೇಜ್ ಸುರಕ್ಷತೆಯು ಕೂಡಾ  ಖಚಿತವಾಗಿರಬಹುದು. 


COMMERCIAL BREAK
SCROLL TO CONTINUE READING

ಹಬ್ಬದ ಸೀಸನ್ (Festive season) ಇದೀಗ ನಡೆಯುತ್ತಿದೆ. ರೈಲುಗಳಲ್ಲಿ ವಿಪರೀತ ರಶ್ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಆರಾಮದಾಯಕ ಪ್ರಯಾಣಕ್ಕಾಗಿ ಪ್ರಯಾಣದ ಮೊದಲು, ತಮ್ಮೊಂದಿಗೆ ಸೀಮಿತ ಲಗೇಜ್‌ಗಳನ್ನು ಮಾತ್ರ ಕೊಂಡೊಯ್ಯುವಂತೆ ರೈಲ್ವೆ ಇಲಾಖೆ (Indian Railway) ಪ್ರಯಾಣಿಕರನ್ನು ಕೇಳಿದೆ. ಯಾಕೆಂದರೆ ಸೀಮಿತ ಲಗೇಜ್‌ ಇದ್ದರೆ, ಅದನ್ನು ಸೀಟಿನ ಕೆಳಗೆ ಇಟ್ಟುಕೊಳ್ಳುವುದು ಸುಲಭವಾಗುತ್ತದೆ. 


ಇದನ್ನೂ ಓದಿ : LIC ಯ ಈ ಯೋಜನೆಯಲ್ಲಿ ಕೇವಲ 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಗಳಿಸಿ!


ಟ್ವೀಟ್‌ ಮೂಲಕ ಮಾಹಿತಿ ನೀಡಿದ ರೈಲ್ವೆ :
ಈ ಬಗ್ಗೆ ರೈಲ್ವೆ ಸಚಿವಾಲಯವು ಟ್ವೀಟ್ (Tweet) ಮಾಡಿದ್ದು, ಪ್ರಯಾಣಿಕರಿಗೆ ಸಲಹೆ ನೀಡಿದೆ.   'ಜವಾಬ್ದಾರಿಯುತ ರೈಲು ಪ್ರಯಾಣಿಕರಾಗಿರಿ. ಆಹ್ಲಾದಕರ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ, ಸೀಮಿತ ಸಾಮಾನುಗಳೊಂದಿಗೆ ಮಾತ್ರ ಪ್ರಯಾಣಿಸಿ ಇದರಿಂದ ರೈಲಿನ ಇತರ ಸಹ-ಪ್ರಯಾಣಿಕರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದೆ. 


coronavirus) ಸೋಂಕಿನಿಂದಾಗಿ ಅನೇಕ ಕೌಂಟರ್‌ಗಳನ್ನು ಸಹ ಮುಚ್ಚಿರಬಹುದು. ಹಾಗಾಗಿ  ಈ ಬಗ್ಗೆ ತಿಳಿದುಕೊಳ್ಳಿ. 


 ಕರೋನಾ (COVID-19) ಅವಧಿಯಲ್ಲಿ ರೈಲುಗಳನ್ನು ಸಂಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಗರಿಷ್ಠ ಜಾಗರೂಕತೆಯನ್ನು ಕಾಪಾಡುವುದು ಎಲ್ಲಾ ಪ್ರಯಾಣಿಕರ ಜವಾಬ್ದಾರಿಯಾಗುತ್ತದೆ.


ಇದನ್ನೂ ಓದಿ : Arecanut Price: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.