Indian Railways Latest News : ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಂತಸದ ಸುದ್ದಿಯನ್ನು ನೀಡಿದೆ. ರೈಲ್ವೆ ಇಲಾಖೆ ತೆಗೆದುಕೊಂಡ ನಿರ್ಧಾರದ ಹಿನ್ನೆಲೆಯಲ್ಲಿ ಈಗ ರೈಲಿನ ಎಸಿ ತ್ರೀ ಎಕಾನಮಿ ಕೋಚ್‌ನಲ್ಲಿ ಪ್ರಯಾಣಿಸುವುದು ಅಗ್ಗವಾಗಿದೆ. ರೈಲ್ವೇ ಮಂಡಳಿ ಹೊರಡಿಸಿರುವ ಸುತ್ತೋಲೆಯಲ್ಲಿ ಎಸಿ ಕೋಚ್‌ಗಳ ದರದ ಬಗ್ಗೆ ಹಳೆಯ ಸಿಸ್ಟಮ್ ಅನ್ನು ಮರುಸ್ಥಾಪಿಸಲು ನಿರ್ಧರಿಸಲಾಗಿದೆ. ಹೊಸ ನಿಯಮದ ಅನುಷ್ಠಾನದ ನಂತರ, ಎಸಿ 3 ಎಕಾನಮಿ ಕೋಚ್‌ನ ದರವು ಎಸಿ 3 ಕೋಚ್‌ಗಿಂತ ಕಡಿಮೆಯಾಗಿರಲಿದೆ. ಈ ನಿರ್ಧಾರವನ್ನು ಇಂದಿನಿಂದಲೇ ಜಾರಿಗೆ ತರಲಾಗಿದೆ.


COMMERCIAL BREAK
SCROLL TO CONTINUE READING

ಕಡಿಮೆ ಇರಲಿದೆ ಹೊಸ ದರ : 
ಇಂದಿನಿಂದ ನೀವು ರೈಲಿನ ಎಸಿ 3 ಎಕಾನಮಿ ಕೋಚ್‌ನಲ್ಲಿ ಪ್ರಯಾಣಿಸುವುದಾದರೆ ಕಡಿಮೆ ಹಣವನ್ನು ಪಾವತಿಸಬೇಕಾಗುತ್ತದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಈಗಾಗಲೇ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಕೂಡಾ ಇದರ ಪ್ರಯೋಜನವನ್ನು ಪಡೆಯಲಿದ್ದಾರೆ. ಹೌದು, ಆನ್‌ಲೈನ್ ಮತ್ತು ಕೌಂಟರ್‌ನಲ್ಲಿ ಟಿಕೆಟ್ ತೆಗೆದುಕೊಂಡ ಪ್ರಯಾಣಿಕರಿಗೆ ರೈಲ್ವೆಯಿಂದ ಹಣವನ್ನು ಮರುಪಾವತಿ ಮಾಡಲಾಗುತ್ತದೆ. ಮಾಹಿತಿ ಪ್ರಕಾರ ಕಳೆದ ವರ್ಷ ರೈಲ್ವೆ ಇಲಾಖೆಯಿಂದ ವಾಣಿಜ್ಯ ಸುತ್ತೋಲೆ ಹೊರಡಿಸಲಾಗಿತ್ತು. ಈ ಸುತ್ತೋಲೆಯ ನಂತರ, ಎಸಿ 3 ಕೋಚ್ ಮತ್ತು ಎಸಿ 3 ಎಕಾನಮಿ ಕೋಚ್‌ಗಳ ದರವನ್ನು ಸಮಾನಗೊಳಿಸಲಾಗಿತ್ತು. ಆದರೆ, ಇದೀಗ 3 ಎಕಾನಮಿ ಕೋಚ್‌ಗಳ ದರವನ್ನು  ಕಡಿತ ಮಾಡಲಾಗಿದೆ. 


ಇದನ್ನೂ ಓದಿ : Gold Price: ಯುಗಾದಿಗೆ ಚಿನ್ನ ಪ್ರಿಯರಿಗೆ ಬಂಗಾರದಂತಹ ಸುದ್ದಿ: 10 ಗ್ರಾಂ ಹಳದಿ ಲೋಹದ ಬೆಲೆ ಜಸ್ಟ್___!!


 ಮತ್ತೆ ಆರಂಭವಾಗಿದೆ ಬೆಡ್ ಶೀಟ್ ಬೆಡ್ ಸ್ಪ್ರೆಡ್ ಸೌಲಭ್ಯ:
 ಮೊದಲು ಎಕಾನಮಿ ಕೋಚ್‌ಗಳಲ್ಲಿ ಬೆಡ್ ಶೀಟ್ ಬೆಡ್ ಸ್ಪ್ರೆಡ್ ಗಳನ್ನು ನೀಡುತ್ತಿರಲಿಲ್ಲ. ಆದರೆ, ಕಳೆದ ವರ್ಷದಿಂದ ಎಕಾನಮಿ ಕೋಚ್‌ನ ಪ್ರಯಾಣ ದರವನ್ನು ಹೆಚ್ಚಿಸಿದ ನಂತರ, ಈ ಸೌಲಭ್ಯ ದೊರೆಯಲಾರಂಭಿಸಿತು. ಇದೀಗ ಮಾರ್ಚ್ 21 ರಂದು ಸುತ್ತೋಲೆ ಹೊರಡಿಸುವ ಮೂಲಕ ಹಳೆಯ ವ್ಯವಸ್ಥೆಯನ್ನು ಮರುಸ್ಥಾಪಿಸಲು ರೈಲ್ವೆ ನಿರ್ಧರಿಸಿದೆ. AC 3 ಕೋಚ್‌ನಲ್ಲಿನ ಸೀಟುಗಳ ಸಂಖ್ಯೆ 72 ಆಗಿದ್ದರೆ, AC 3 ಎಕಾನಮಿ ಕೋಚ್‌ನಲ್ಲಿನ ಬರ್ತ್‌ಗಳ ಸಂಖ್ಯೆ ಆಗಿರುತ್ತದೆ. 


ಎಸಿ 3 ಎಕಾನಮಿ ಕೋಚ್‌ನ ಬರ್ತ್ ಎಸಿ 3 ಕೋಚ್‌ಗಿಂತ ಚಿಕ್ಕದಾಗರುತ್ತದೆ. AC 3 ಎಕಾನಮಿ ಕೋಚ್ ಅನ್ನು ರೈಲ್ವೇಯು AC ಕೋಚ್‌ನಲ್ಲಿ ಪ್ರಯಾಣಿಸಲು ಬಯಸುವ ಪ್ರಯಾಣಿಕರಿಗಾಗಿ ಪ್ರಾರಂಭಿಸಿದೆ.  AC 3 ಎಕಾನಮಿ ಕೋಚ್‌ನ ಟಿಕೆಟ್ ದರ ಆರಂಭದಲ್ಲಿ AC 3 ಗಿಂತ ಕಡಿಮೆಯಿತ್ತು. ನಂತರ ಇದನ್ನು ಎಸಿ 3 ಕೋಚ್ ನಷ್ಟೇ  ನಿಗದಿ ಮಾಡಲಾಯಿತು. ಇದೀಗ ಮತ್ತೆ ಎಸಿ 3 ಎಕಾನಮಿ ಕೋಚ್‌ನ ದರವನ್ನು ಕಡಿಮೆ ಮಾಡಿ ಸುತ್ತೋಲೆ ಹೊರಡಿಸಲಾಗಿದೆ. 


ಇದನ್ನೂ ಓದಿ :  Indian Railways: ರೋಜಗಾರ್ ಮೇಳದಲ್ಲಿ 50 ಸಾವಿರ ಮಂದಿಗೆ ನೇಮಕಾತಿ ಪತ್ರ ವಿತರಣೆ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.