ದೆಹಲಿ : ಇನ್ನೇನು ಹೋಳಿ (Holi) ಹಬ್ಬ ಬಂದೆ ಬಿಟ್ಟಿದೆ. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ವಿಮಾನಯಾನ ಕಂಪನಿಗಳು ಪ್ರಯಾಣಿಕರಿಗೆ ಭಾರೀ ಗಿಫ್ಟ್ ನೀಡಿದೆ.  ಸ್ಪೈಸ್ ಜೆಟ್ ( Spicejet)  ಮತ್ತು ಇಂಡಿಗೊ (Indigo)  airlines 50 ಕ್ಕೂ ಹೆಚ್ಚು ಹೊಸ ವಿಮಾನ ಸೇವೆಗಳನ್ನು ಪ್ರಾರಂಭಿಸುತ್ತಿವೆ. ಹೊಸ ಫ್ಲೈಟ್ ಸರ್ವಿಸ್ ಮತ್ತು ಅದರ ಶುಲ್ಕ ಪಟ್ಟಿಯನ್ನು ಕೂಡಾ ಕಂಪನಿಗಳು ಬಿಡುಗಡೆ ಮಾಡಿವೆ.


COMMERCIAL BREAK
SCROLL TO CONTINUE READING

ಇಂಡಿಗೋ ಆರಂಭಿಸಲಿರುವ ಹೊಸ ಫೈಟ್ ಸೇವೆ : 
ಮಾರ್ಚ್ 28 ರಿಂದ Indigo ಹೊಸ ವಿಮಾನ ಸೇವೆಯನ್ನು ಪ್ರಾರಂಭಿಸಲಿದೆ. ಇಂಡಿಗೊ ಪ್ರಾದೇಶಿಕ ಸಂಪರ್ಕ ಯೋಜನೆಯಡಿ  (Regional Connectivity Scheme) ಹೊಸ ಸೇವೆಯನ್ನು ಪ್ರಾರಂಭಿಸಲಿದ್ದು, ಇದು ಪ್ರಯಾಣಿಕರಿಗೆ ಅನುಕೂಲವಾಗಲಿದೆ.


ಇದನ್ನೂ ಓದಿ: Plane: ಈ ಹಳ್ಳಿಯಲ್ಲಿ ಪ್ರತಿಯೊಬ್ಬರ ಬಳಿಯಲ್ಲೂ ಇದೇ ತಮ್ಮದೇ ವಿಮಾನ!


ಇಂಡಿಗೋ ಹೊಸ ವಿಮಾನ ಸೇವೆಗಳು ಹೀಗಿವೆ :


ಎಲ್ಲಿಂದ                  ಎಲ್ಲಿವರೆಗೆ                    ದರ 
ಕೊಲ್ಕತ್ತ                  ಗಯಾ                          2910         
ಕೊಚ್ಚಿ                    ತ್ರಿವೆಂದ್ರಮ್                 2372
ಜೈಪುರ್                   ಸೂರತ್                      4329
ರಾಜಮುಂದ್ರಿ           ತಿರುಪತಿ                      2594     
ಪಾಟ್ನಾ                   ಕೊಚ್ಚಿ                         5153
ಬೆಂಗಳೂರು             ಶಿರಡಿ                          3556
ಚೆನ್ನೈ                     ವಡೋದರಾ                3012
ಜೈಪುರ್                   ವಡೋದರಾ               3804
ಅಗರ್ತಲಾ               ಐಜೋಲ್                  1540



spicejet ಹೊಸ ವಿಮಾನ ಸೇವೆಗಳು ಹೀಗಿವೆ :


ಎಲ್ಲಿಂದ                     ಎಲ್ಲಿವರೆಗೆ                           ದರ 
ಅಹ್ಮದಾಬಾದ್           ಬೆಂಗಳೂರು                        3963    
ಕೋಲ್ಕತ್ತಾ                 ಗುವಾಹಾಟಿ                         3377
ಗುವಾಹಾಟಿ               ದೆಹಲಿ                                 5192
ಅಹ್ಮದಾಬಾದ್          ಅಮೃತಸರ್                         3439    
ಬೆಂಗಳೂರು               ಪಾಟ್ನಾ                               5130
ಮುಂಬೈ                    ಅಜ್ಮೇರ್                              4143
ಪಾಟ್ನಾ                     ಸೂರತ್                              4104


ಇದನ್ನೂ ಓದಿ: Flight Emergency Landing : ಕಳ್ಳ ಬೆಕ್ಕಿಗೆ ಹೆದರಿ ಎಮರ್ಜೆನ್ಸಿ ಲ್ಯಾಂಡ್ ಆದ ವಿಮಾನ.!


ಈ ಮೊದಲು  160 ರೂಯನ್ನು ಪ್ರಯಾಣಿಕರಿಗೆ ವಿಮಾನಯಾನ ಭದ್ರತಾ ಶುಲ್ಕ (Aviation Security Fee) ಎಂದು ನಿಗದಿಪಡಿಸಲಾಗಿತ್ತು. ಆದರೆ, ಏಪ್ರಿಲ್ 1 ರಿಂದ ಇದು,  200 ರೂ. ಆಗಲಿದೆ. ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಇದು  ASF 5.2 ಡಾಲರ್ ನಿಂದ   12 ಡಾಲರ್ ಗೆ ಏರಿಕೆಯಾಗಲಿದೆ.  


 2019 ಮತ್ತು 2020 ರಲ್ಲಿಯೂ  ಎಎಸ್ಎಫ್ ಅನ್ನು ಹೆಚ್ಚಿಸಲಾಗಿತ್ತು : 
ಇದಕ್ಕೂ ಮೊದಲು, 2020ರ ಸೆಪ್ಟೆಂಬರ್ 1 ರಿಂದ ಎಎಸ್ಎಫ್ ಅನ್ನು ಹೆಚ್ಚಿಸಲಾಗಿತ್ತು. ಆ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ 4.85 ಡಾಲರ್  ಬದಲು 5.2 ಡಾಲರ್ ಗೆ ಹೆಚ್ಸಿಸಲಾಗಿತ್ತು. ದೇಶೀಯ ವಾಯು ಪ್ರಯಾಣಿಕರ ASF ಅನ್ನು 150 ರೂ.ಯಿಂದ 160 ರೂ.ಗೆ ಏರಿಸಲಾಯಿತು.


ಏನಿದು ಎಎಸ್ಎಫ್ ? 
ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ವಿಮಾನಯಾನ ಸಂಸ್ಥೆಗಳು ASF ಸಂಗ್ರಹಿಸಿ ಸರ್ಕಾರಕ್ಕೆ ನೀಡುತ್ತವೆ. ಈ ಮೊತ್ತವನ್ನು ದೇಶಾದ್ಯಂತ ವಿಮಾನ ನಿಲ್ದಾಣಗಳ ಭದ್ರತಾ ವ್ಯವಸ್ಥೆಯಲ್ಲಿ ಬಳಸಲಾಗುತ್ತದೆ.  ಇದಲ್ಲದೆ, ಹೊಸ ವಿಮಾನ ನಿಲ್ದಾಣಗಳಿಗೆ (Airport) ಭದ್ರತಾ ವ್ಯವಸ್ಥೆಗಳನ್ನು ಸಹ ಈ ಸಂಗ್ರಹದಿಂದ ವ್ಯವಸ್ಥೆ ಮಾಡಲಾಗುತ್ತದೆ. 


ಇದನ್ನೂ ಓದಿ: New guidelines: ಅಂತಹದ್ದೇನಾಗಿದೆ.? ವಿದೇಶಿ ವಿಮಾನಗಳ ಹಾರಾಟಕ್ಕೆ ಭಾರತ ಬ್ರೇಕ್ ಹಾಕಿದ್ದು ಯಾಕೆ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.