Flight Emergency Landing : ಕಳ್ಳ ಬೆಕ್ಕಿಗೆ ಹೆದರಿ ಎಮರ್ಜೆನ್ಸಿ ಲ್ಯಾಂಡ್ ಆದ ವಿಮಾನ.!

ಸೂಡಾನ್ನಿಂದ ಬಂದ ಸುದ್ದಿ ಸ್ವಲ್ಪ ವಿಚಿತ್ರವಾಗಿದೆ. ಇಲ್ಲಿ ಬೆಕ್ಕಿನ ಅಟಾಟೋಪಕ್ಕೆ ಹೆದರಿ ಪೈಲೆಟ್  ವಿಮಾನವನ್ನು ಎಮರ್ಜೆನ್ಸಿ ಲ್ಯಾಂಡ್ ಮಾಡಿಸಿದ್ದಾರೆ.   

Written by - Ranjitha R K | Last Updated : Mar 1, 2021, 02:10 PM IST
  • ಸೂಡಾನ್ನಿಂದ ಬಂದ ಸುದ್ದಿ ಸ್ವಲ್ಪ ವಿಚಿತ್ರವಾಗಿದೆ.
  • ಇಲ್ಲಿ ಬೆಕ್ಕಿಗೆ ಹೆದರಿ ಪೈಲೆಟ್ ವಿಮಾನವನ್ನು ಎಮರ್ಜೆನ್ಸಿ ಲ್ಯಾಂಡ್ ಮಾಡಿಸಿದ್ದಾರೆ.
  • ಅಷ್ಟಕ್ಕೂ ಬಿಗಿ ಭದ್ರತೆಯ ವಿಮಾನದೊಳಗೆ ಬೆಕ್ಕು ಹೇಗೆ ಬಂತು..?
Flight Emergency Landing : ಕಳ್ಳ ಬೆಕ್ಕಿಗೆ ಹೆದರಿ  ಎಮರ್ಜೆನ್ಸಿ ಲ್ಯಾಂಡ್ ಆದ ವಿಮಾನ.!  title=
ಬೆಕ್ಕಿಗೆ ಹೆದರಿ ಪೈಲೆಟ್ ವಿಮಾನ ಎಮರ್ಜೆನ್ಸಿ ಲ್ಯಾಂಡ್

ಖಾರ್ತೊಮ್ : ವಿಮಾನ ಎಮರ್ಜನ್ಸಿ ಲ್ಯಾಂಡ್ ಆಗುವುದು ಹೊಸತೇನಲ್ಲ. ತಾಂತ್ರಿಕ ಕಾರಣಕ್ಕೋ, ಅಥವಾ ಹವಾಮಾನ ಕಾರಣಕ್ಕೋ ವಿಮಾನ ಪದೇ ಪದೇ ಎಮರ್ಜೆನ್ಸಿ ಲ್ಯಾಂಡ್ (Emergency landing) ಆಗುತ್ತಲೇ ಇರುತ್ತದೆ. ಆದರೆ, ಸೂಡಾನ್ನಿಂದ ಬಂದ ಸುದ್ದಿ ಸ್ವಲ್ಪ ವಿಚಿತ್ರವಾಗಿದೆ. ಇಲ್ಲಿ ಬೆಕ್ಕಿನ ಅಟಾಟೋಪಕ್ಕೆ ಹೆದರಿ ಪೈಲೆಟ್ (Pilot) ವಿಮಾನವನ್ನು ಎಮರ್ಜೆನ್ಸಿ ಲ್ಯಾಂಡ್ ಮಾಡಿಸಿದ್ದಾರೆ. 

ಅಷ್ಟಕ್ಕೂ ಆ ವಿಮಾನದಲ್ಲಿ ಆಗಿದ್ದೇನು..?
ಸೂಡಾನ್ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Internationa Airport) ಟಾರ್ಕೊ Airline ವಿಮಾನವೊಂದು ಕತಾರಿನ ದೋಹಾಕ್ಕೆ  ಟೇಕಾಫ್ ಆಗಿದೆ. ಟೇಕಾಫ್ ಆಗಿ ಒಂದೂವರೆ ಗಂಟೆ ಆಗಿಲ್ಲ, ಬೆಕ್ಕೊಂದು ಕಾ ಕ್ ಪಿಟ್ ಒಳಗೆ ನುಗ್ಗಿಬಿಟ್ಟಿದೆ. ನುಗ್ಗಿದ ಬೆಕ್ಕು ಸೀದಾ ಪೈಲೆಟ್  ಲೆ ಸಿಂಹದಂತೆ ಎರಗಿ ಬಿಟ್ಟಿದೆ. ಬೆಕ್ಕು ಸಿಕ್ಕಾಪಟ್ಟೆ ಹೆದರಿಹೋಗಿತ್ತು. ಆ ಹೆದರಿಕೆಯ ಕಾರಣದಿಂದಲೇ ಪೈಲೆಟ್ ಮೇಲೆ ಎಗರಿ ಎಗರಿ ದಾಳಿ ಮಾಡುತ್ತಿತ್ತು. ಬೆಕ್ಕನ್ನು ಹಿಡಿಯಲು ಕ್ಯಾಬಿನ್ ಸಿಬ್ಬಂದಿಯೂ  ಮುಂದಾದರು. ಆದರೆ, ಆಕ್ರಮಕ ಬೆಕ್ಕು, ಯಾರ ನಿಯಂತ್ರಣಕ್ಕೂ ಸಿಗಲಿಲ್ಲ. ಕೊನೆಗೂ ಬೆಕ್ಕಿನ ಮುಂದೆ ಅಸಹಾಯಕನಾದ ಪೈಲೆಟ್ (pilot) ವಿಮಾನದ ತುರ್ತು ಭೂಸ್ಪರ್ಶ ಮಾಡಿಸಿಬಿಟ್ಟರು. 

ಇದನ್ನೂ ಓದಿ : Moving House : ಇದಕ್ಕಿದ್ದಂತೆ ಚಲಿಸಲಾರಂಭಿಸಿತು ಎರಡು ಅಂತಸ್ತಿನ ಹಳೆಯ ಬಂಗಲೆ.! ಏನದರ ರಹಸ್ಯ.!?

ಹೌದು.! ಅಷ್ಟೊಂದು ಭದ್ರತೆ ಇರುವ ವಿಮಾನದೊಳಗೆ ಕಳ್ಳಬೆಕ್ಕು ಹೇಗೆ ಬಂತು.!?

ವಿಮಾನದೊಳಗೆ (Flight) ಯಾವುದೇ ಪ್ರಯಾಣಿಕರನ್ನು ಬಿಡುವಾಗ ಸಾಕಷ್ಟು ತಪಾಸಣೆ ಮಾಡಿ ಬಿಡುತ್ತಾರೆ. ಹೀಗಿರುವಾಗ ಕಳ್ಳಬೆಕ್ಕೊಂದು ಕಾಕ್ ಪಿಟ್ ಗೆ ಹೇಗೆ ಬಂತು ಅನ್ನೋ ವಿಷಯ ಪೊಲೀಸರ ತಲೆ ತಿನ್ನುತ್ತಿದೆ. ಭದ್ರತಾ ಅಧಿಕಾರಿಗಳ ಪ್ರಕಾರ, ಟೆಕ್ನಿಕಲ್ ಕ್ಲಿಯರೆನ್ಸ್ ಗೆ ವಿಮಾನವನ್ನು ಇರಿಸಿದ ಸಂದರ್ಭದಲ್ಲಿ ಬೆಕ್ಕು ಕಾಕ್ ಪಿಟ್ ಗೆ (cockpit)ನುಗ್ಗಿರಬೇಕು. ವಿಮಾನ ಟೇಕಾಫ್ ಆಗಿದಾಗ ಗಲಿಬಿಲಿಗೊಂಡ ಮಾರ್ಜಾಲ, ಏಕಾಏಕಿ ಪೈಲೆಟ್ ಮೇಲೆ ದಾಳಿ ಮಾಡಿರಬೇಕು ಎಂದು ಹೇಳುತ್ತಾರೆ. ಪ್ರಕರಣದ ತನಿಖೆ ನಡೆಯುತ್ತಿದೆ. ಬೆಕ್ಕಿನ (Cat) ದಾಳಿಯಿಂದ ಯಾರಿಗೆ ಏನೂ ಗಾಯಗಳಾಗಿಲ್ಲ. ಆದರೆ, ಅದರ ಆಕ್ರಮಕ ಸ್ವರೂಪದಿಂದ ಸಿಬ್ಬಂದಿ ಸೇರಿ ಪ್ರಯಾಣಿಕರೂ (Passengers) ಸಿಕ್ಕಾಪಟ್ಟೆ ಗಾಬರಿಗೊಂಡಿದ್ದರು.

ಇದನ್ನೂ ಓದಿ : ಕಳೆದು ಹೋಗಿದ್ದ ಉಂಗುರ ಸಿಕ್ಕಿದ್ದು 10 ಅಡಿ ಎತ್ತರದ ಕಸದ ರಾಶಿಯಲ್ಲಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News