ಬೆಂಗಳೂರು  : ಅರ್ಜಿ ಸಲ್ಲಿಸದೆಯೇ ಬ್ಯಾಂಕ್ ಲೋನ್ (Bank loan)ಮಂಜೂರು ಮಾಡಿದರೆ ಹೇಗಿರುತ್ತದೆ? ಹೌದು ತಾಂತ್ರಿಕ ದೋಷದ ಕಾರಣದಿಂದಾಗಿ, ಇಂಥ ಘಟನೆ ನಡೆದಿದೆ. ದೇಶದ ಅತಿದೊಡ್ಡ ಬ್ಯಾಂಕ್ ಇಂಡಸ್‌ಇಂಡ್ ಬ್ಯಾಂಕ್ (Indusind Bank)ತಾಂತ್ರಿಕ ದೋಷಗಳಿಂದಾಗಿ ಈ ರೀತಿಯ ಎಡವಟ್ಟು ಮಾಡಿಕೊಂಡಿದೆ.  


COMMERCIAL BREAK
SCROLL TO CONTINUE READING

ಲೆಕ್ಕಪರಿಶೋಧನಾ ಕಂಪನಿಯ ತನಿಖೆಯಲ್ಲಿ ಬಹಿರಂಗವಾದ ಸತ್ಯ : 
ಬ್ಯಾಂಕ್ ನೀಡಿದ ಮಾಹಿತಿಯಲ್ಲಿ, ಕೋವಿಡ್ -19 (COVID-19) ಸಂದರ್ಭದಲ್ಲಿ ಮೈಕ್ರೋ ಫೈನಾನ್ಸ್ ಸಾಲಗಳ ವಿತರಣೆಯು 'ತಾಂತ್ರಿಕ ದೋಷ' ಕಾರಣ ಆಗಿದೆ ಎನ್ನಲಾಗಿದೆ. ಆಡಿಟ್ ಕಂಪನಿ ಡೆಲಾಯ್ಟ್ (Deloitte) ತನಿಖೆಯಲ್ಲೂ ಇದಕ್ಕೆ ಸಂಬಂಧಿಸಿದ ಅಂಶ ಬಯಲಿಗೆ ಬಂದಿದೆ.


ಇದನ್ನೂ ಓದಿ : PM kisan Update: ರೈತರಿಗೆ 6000 ರೂ ಜೊತೆಗೆ ಸಿಗಲಿದೆ 36000 ರೂ. ಶೀಘ್ರವೇ ಈ ಕೆಲಸ ಮಾಡಿ ಮುಗಿಸಿಕೊಳ್ಳಿ


ಷೇರು ಮಾರುಕಟ್ಟೆಗೂ ನೀಡಲಾಗಿದೆ ಮಾಹಿತಿ : 
ಈ ನ್ಯೂನತೆಯು ಬಹಿರಂಗಗೊಂಡ ನಂತರ, ಬ್ಯಾಂಕ್ (Bank) ಉದ್ಯೋಗಿಯ ಹೊಣೆಗಾರಿಕೆಯನ್ನು ನಿರ್ಣಯಿಸಲು ಸಮಿತಿಯನ್ನು ಸಹ ರಚಿಸಲಾಗಿದೆ. ಇಂಡಸ್‌ಇಂಡ್ ಬ್ಯಾಂಕ್ ಈ ಬಗ್ಗೆ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ. ಮಾರ್ಚ್ 2020 ಮತ್ತು ಅಕ್ಟೋಬರ್ 2021 ರ ನಡುವೆ ಇಂಡಸ್‌ಇಂಡ್ ಬ್ಯಾಂಕ್‌ನ ಅಂಗಸಂಸ್ಥೆಯಾದ ಭಾರತ್ ಫೈನಾನ್ಷಿಯಲ್ ಇನ್‌ಕ್ಲೂಷನ್ ಲಿಮಿಟೆಡ್ (BFIL) ಗ್ರಾಹಕರಿಗೆ ಅವರ ಅನುಮೋದನೆಯನ್ನು ತೆಗೆದುಕೊಳ್ಳದೆ ಮೈಕ್ರೋ ಫೈನಾನ್ಸ್ ಸಾಲಗಳನ್ನು ವಿತರಿಸಿದೆ ಎನ್ನಲಾಗಿದೆ


ದೂರನ್ನು ಸ್ವೀಕರಿಸಿದ ಬ್ಯಾಂಕ್ ತಕ್ಷಣವೇ ಆಂತರಿಕ ಲೆಕ್ಕಪರಿಶೋಧನೆ, ಐಟಿ ಆಡಿಟ್ ಮುಂತಾದ ಕ್ರಮಗಳನ್ನು ಕೈಗೊಂಡಿತು. ಇದರ ನಂತ, ರತನಿಖೆಯ ಜವಾಬ್ದಾರಿಯನ್ನು ಫ್ಯಾಕ್ಟ್ ಆಡಿಟ್ ಕಂಪನಿ ಡೆಲಾಯ್ಟ್ ಗೆ ವಹಿಸಲಾಯಿತು. ಡೆಲಾಯ್ಟ್ ಅಂತಿಮ ವರದಿಯನ್ನು 7 ಮಾರ್ಚ್ 2022 ರಂದು ಸಲ್ಲಿಸಿದೆ. ಈ ವರದಿಯ ಸಂಶೋಧನೆಗಳು ಮತ್ತು ಮೌಲ್ಯಮಾಪನದ ಆಧಾರದ ಮೇಲೆ, ಗ್ರಾಹಕರ ಅನುಮೋದನೆಯಿಲ್ಲದೆ ತಾಂತ್ರಿಕ ದೋಷದಿಂದಾಗಿ ಸಾಲ ವಿತರಣೆಯಾಗಿದೆ ಎನ್ನುವುದು ತಿಳಿದುಬಂದಿದೆ ಎಂದು ಬ್ಯಾಂಕ್‌ ಹೇಳಿದೆ.


ಇದನ್ನೂ ಓದಿ: ಹೀಗೆ ಮಾಡಿದರೆ ವಿದ್ಯುತ್ ಇಲ್ಲದೆಯೇ ನಡೆಯುತ್ತದೆ AC-Cooler, ಹಿತವಾಗಿರಲಿದೆ ಬೇಸಿಗೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.